ಮುಂಬೈ: ‘ಹಬ್ಬದ ಸಂದರ್ಭದಲ್ಲಿ ಪಟಾಕಿ ಸುಡುತ್ತಿರುವುದರಿಂದ ವಿಷಕಾರಿ ಲೋಹಗಳು ಅಧಿಕ ಪ್ರಮಾಣದಲ್ಲಿ ಗಾಳಿಯಲ್ಲಿ ಸೇರಿಕೊಳ್ಳುತ್ತಿವೆ’ ಎಂದು ಸರ್ಕಾರೇತರ ಸಂಸ್ಥೆ(ಎನ್ಜಿಒ) ‘ಆವಾಜ್ ಫೌಂಡೇಶನ್’ ತಿಳಿಸಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸಂಸ್ಥೆಯು, ‘ವಿಷಕಾರಿ ಪಟಾಕಿಗಳ ಬಳಕೆಯನ್ನು ನಿಯಂತ್ರಿಸುವಲ್ಲಿ ಮತ್ತು ಅವುಗಳಿಂದ ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ಹೇಳಿದೆ.

ಈ ವರ್ಷ ರಾಸಾಯನಿಕ ಅಂಶಗಳ ಪರೀಕ್ಷೆಗಾಗಿ ಬಳಸಿದ ವಿವಿಧ ಕಂಪನಿಗಳ 25 ಪಟಾಕಿಗಳ ಪಟ್ಟಿಯನ್ನು ಹಂಚಿಕೊಂಡಿರುವ ಎನ್ಜಿಒ, ಹೆಚ್ಚಿನ ಪಟಾಕಿಗಳಲ್ಲಿ ಶಬ್ಧದ ಮಟ್ಟ ಉಲ್ಲೇಖಿಸಿಲ್ಲ ಮತ್ತು ಕೆಲವು ಪಟಾಕಿಗಳಲ್ಲಿ ಅಗತ್ಯವಿರುವ ಕ್ಯೂಆರ್ ಕೋಡ್ ಇಲ್ಲ ಎಂದು ಆರೋಪಿಸಿದೆ.

ಅನೇಕ ಪಟಾಕಿಗಳ ಮೇಲೆ ಮುದ್ರಿಸಲಾಗಿರುವ ರಾಸಾಯನಿಕ ಸಂಯೋಜನೆಗೂ ಪರೀಕ್ಷೆಯ ವೇಳೆ ಕಂಡುಬಂದ ರಾಸಾಯನಿಕಗಳಿಗೂ ಅನೇಕ ವ್ಯತ್ಯಾಸವಿದೆ ಎಂದು ಸಂಸ್ಥೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.