ಹೈದರಾಬಾದ್: ಹೈದರಾಬಾದ್ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸಂಸ್ಥೆಯ ಸ್ಲೀಪರ್ ಎಸಿ ಬಸ್ ಬೆಂಕಿ ಹೊತ್ತಿಕೊಂಡು 19 ಪ್ರಯಾಣಿಕರ ಸಜೀವ ದಹನಕ್ಕೆ ಕಾರಣವಾಗಿದ್ದ ಬೈಕ್ ಸವಾರ ಮದ್ಯದ ಅಮಲಿನಲ್ಲಿದ್ದನು ಎಂದು ವಿಧಿ ವಿಜ್ಞಾನ ವರದಿ ಬಹಿರಂಗಪಡಿಸಿವೆ.

ಮೃತಪಟ್ಟ ಬೈಕ್ ಸವಾರನ ಸಹಚರ ಯೆರ್ರಿಸ್ವಾಮಿ, ಹಿಂಬದಿ ಸವಾರನಾಗಿದ್ದು, ಇಬ್ಬರೂ ಮದ್ಯ ಸೇವಿಸಿದ್ದಾಗಿ ಕರ್ನೂಲ್ ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
.Women's World Cup: INDW vs BNGW; ಟಾಸ್ ಗೆದ್ದ ಭಾರತ, ಫೀಲ್ಡಿಂಗ್ ಆಯ್ಕೆ.ಭಾರತೀಯ ಕರಾವಳಿ ರಕ್ಷಣಾ ಪಡೆಯಿಂದ 31 ಮೀನುಗಾರರ ರಕ್ಷಣೆ.
ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ವೇಳೆ ಮದ್ಯ ಸೇವಿಸಿರುವುದು ಪತ್ತೆಯಾಗಿದೆ. ಈ ಕಾರಣದಿಂದಾಗಿ ಈ ದುರಂತ ಸಂಭವಿಸಿದೆ. ಈ ಬಗ್ಗೆ ಕರ್ನೂಲ್ನ ಪ್ರಾದೇಶಿಕ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (ಆರ್ಎಫ್ಎಸ್ಎಲ್) ವಿಶ್ಲೇಷಣಾ ವರದಿಯನ್ನು ಸಲ್ಲಿಸಿದೆ ಎಂದು ಕರ್ನೂಲ್ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ಪಾಟೀಲ್ ಭಾನುವಾರ ತಿಳಿಸಿದ್ದಾರೆ.

ಈ ಅಪಘಾತಕ್ಕೂ ಮೊದಲೇ ಬೈಕ್ ಸವಾರ ‘ಸ್ಕಿಡ್’ ಆಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿದ್ದ ಎಂಬುದು ಗೊತ್ತಾಗಿದೆ. ಆ ನಂತರ ಬಸ್ ಈ ಬೈಕಿಗೆ ಡಿಕ್ಕಿ ಹೊಡೆದು, ಕೆಲ ದೂರ ಎಳೆದೊಯ್ದಿದೆ. ಅದೇ ವೇಳೆ ಬೈಕ್ನ ಪೆಟ್ರೋಲ್ ಟ್ಯಾಂಕ್ ಸೋರಿಕೆಯಾಗಿದೆ. ಈ ಸಂದರ್ಭದಲ್ಲಿ ಆದ ಘರ್ಷಣೆಯಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಏತನ್ಮಧ್ಯೆ, ಪ್ರಯಾಣಿಕನೊಬ್ಬರ ದೂರಿನ ಆಧಾರದ ಮೇಲೆ ಕಾವೇರಿ ಟ್ರಾವೆಲ್ಸ್ನ ಚಾಲಕ ಮತ್ತು ಮಾಲೀಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
.ನಾಲ್ಕು ವರ್ಷಗಳ ಬಳಿಕ ಭಾರತ–ಚೀನಾ ನೇರ ವಿಮಾನ ಹಾರಾಟ ಆರಂಭ.‘ಇಂಡಿಯಾ’ ಬಣ ಅಧಿಕಾರಕ್ಕೆ ಬಂದರೆ ವಕ್ಫ್ ಕಾಯ್ದೆ ಕಸದ ಬುಟ್ಟಿಗೆ: ತೇಜಸ್ವಿ.ಕರ್ನಾಟಕ ಸೇರಿ ದೇಶದ ವಿವಿಧೆಡೆ ಬೆಳೆಯುವ ಕಾಫಿಯನ್ನು ಕೊಂಡಾಡಿದ ಮೋದಿ.ಕಾಳಿ ನದಿ: ರಕ್ಷಣೆಗೆ ಹಾಕಿದ್ದ ತಂತಿಬೇಲಿ ದಾಟಿ ಬಂದ ಮೊಸಳೆ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.