ಹಣ ಗಳಿಸುವ ದುರಾಸೆಯಿಂದ ಕೆಲ ವಂಚಕರು ಇಂತಹ ಸನ್ನಿವೇಶ ಸೃಷ್ಟಿಸಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರವೇ ಹೊಣೆ. ಈ ಘಟನೆ ರಾಜ್ಯದ ಹೆಸರಿಗೆ ಕಳಂಕ ತಂದಿದೆ.
–ಸಮಿಕ್ ಭಟ್ಟಾಚಾರ್ಯ, ಬಿಜೆಪಿ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷ
ವಿಶ್ವದ ಮುಂದೆ ಪಶ್ಚಿಮ ಬಂಗಾಳದ ಘನತೆಗೆ ಧಕ್ಕೆ ತಂದಿದ್ದಕ್ಕಾಗಿ ನೈತಿಕ ಹೊಣೆ ಹೊತ್ತು ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
–ಸುವೇಂದು ಅಧಿಕಾರಿ, ವಿಧಾನಸಭೆಯಲ್ಲಿ ವಿಪಕ್ಷ ನಾಯಕ
ಮೆಸ್ಸಿ ಕಾರ್ಯಕ್ರಮದ ಹೆಸರಿನಲ್ಲಿ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಭಾರಿ ಮೊತ್ತಕ್ಕೆ ಮಾರಾಟ ಮಾಡಲಾಗಿದೆ. ಮೆಸ್ಸಿ ಅವರನ್ನು ಟಿಎಂಸಿ ನಾಯಕರು ಹಾಗೂ ಅವರ ಕುಟುಂಬಗಳ ಸದಸ್ಯರೇ ಸುತ್ತುವರಿದಿದ್ದರಿಂದ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಆಟಗಾರನನ್ನು ನೋಡಲು ಆಗಲಿಲ್ಲ.
–ಶುಭಂಕರ ಸರ್ಕಾರ್, ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ
ಕಾನೂನು–ಸುವ್ಯವಸ್ಥೆ ಕುಸಿದಿದ್ದು, ಇದಕ್ಕೆ ಟಿಎಂಸಿ ನೇತೃತ್ವದ ಸರ್ಕಾರವೇ ಕಾರಣ. ಈ ದಾಂದಲೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.