ಮುಂಬೈ: ಮಹಾರಾಷ್ಟ್ರದ ಎನ್ಸಿಪಿ ಹಿರಿಯ ನಾಯಕ ಮತ್ತು ಅತ್ಯಂತ ಅನುಭವಿ ರಾಜಕಾರಣಿಗಳಲ್ಲಿ ಒಬ್ಬರಾದ ಶಾಸಕ ಛಗನ್ ಭುಜಬಲ್ ಅವರು ಇಂದು (ಮಂಗಳವಾರ) ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮುಂಬೈನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಛಗನ್ ಭುಜಬಲ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನೇತೃತ್ವದ ಸಚಿವ ಸಂಪುಟದಲ್ಲಿ ಭುಜಬಲ್ ಅವರನ್ನು ಕೈಬಿಡಲಾಗಿತ್ತು. ಇದರ ಬಗ್ಗೆ ಭುಜಬಲ್ ಅವರು ಅಸಮಾಧಾನ ಹೊರಹಾಕಿದ್ದರು.

ಈ ವರ್ಷದ ಆರಂಭದಲ್ಲಿ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದ್ದ ಸರಪಂಚ್ ಒಬ್ಬರ ಕೊಲೆ ಪ್ರಕರಣದ ಸೂತ್ರಧಾರ ಆಹಾರ ಸಚಿವ ಧನಂಜಯ ಮುಂಡೆ ಅವರ ಪರಮಾಪ್ತ ವಾಲ್ಮೀಕ್ ಕರಾಡ್ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾದ ಕಾರಣ, ಮುಂಡೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಧನಂಜಯ್ ಮುಂಡೆ ಅವರ ರಾಜೀನಾಮೆಯಿಂದ ತೆರವಾಗಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯನ್ನು ಭುಜಬಲ್ಗೆ ನೀಡುವ ಸಾಧ್ಯತೆ ದಟ್ಟವಾಗಿದೆ.
.ಮಹಾರಾಷ್ಟ್ರ | ಸರಪಂಚ್ ಹತ್ಯೆ ಪ್ರಕರಣ: ಸಚಿವ ಸ್ಥಾನಕ್ಕೆ ಧನಂಜಯ ಮುಂಡೆ ರಾಜೀನಾಮೆ.ಸರಪಂಚ್ ಹತ್ಯೆ: ಧನಂಜಯ ಮುಂಡೆ ಬಂಗಲೆಯಲ್ಲಿ ಸುಲಿಗೆ ಸಭೆ ನಡೆದಿತ್ತು; ಬಿಜೆಪಿ ಶಾಸಕ.ಮಹಾರಾಷ್ಟ್ರ: ಸಚಿವ ಧನಂಜಯ ಮುಂಡೆ ರಾಜೀನಾಮೆ ಕೇಳಿದ ಸಿಎಂ ಫಡಣವೀಸ್.ಮಹಾರಾಷ್ಟ್ರ | ರಾಜೀನಾಮೆಗೆ ಕಾರಣ ತಿಳಿಸಿದ ಧನಂಜಯ ಮುಂಡೆ.ಮಹಾರಾಷ್ಟ್ರ ಸಂಪುಟದಿಂದ ಧನಂಜಯ ಮುಂಡೆ ಕೈಬಿಡಲು ಹೆಚ್ಚಿದ ಒತ್ತಡ.ಸರಪಂಚ್ ಹತ್ಯೆ ಪ್ರಕರಣ: ಬೀಡ್-ಪರ್ಭಾನಿ ಪರಿಸ್ಥಿತಿ ಕುರಿತು ಫಡಣವೀಸ್-ಪವಾರ್ ಚರ್ಚೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.