ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮದವರ ಕೈಯಲ್ಲಿ ಲೇಖನಿ ಬದಲು ಕಮಲವಿದೆ: ಮೋದಿ ವಿರುದ್ಧ ಉದ್ಧವ್ ಠಾಕ್ರೆ ಕಿಡಿ

Last Updated 15 ಮಾರ್ಚ್ 2023, 15:54 IST
ಅಕ್ಷರ ಗಾತ್ರ

ಮುಂಬೈ: ‘ಮಹಾರಾಷ್ಟ್ರ ರೂಪುಗೊಂಡಿರುವುದು ಪ್ರಧಾನಿ ನರೇಂದ್ರ ಮೋದಿಯವರಿಂದಲ್ಲ. ಬದಲಾಗಿ ಛತ್ರಪತಿ ಶಿವಾಜಿ ಮಹಾರಾಜರಿಂದ’ ಎಂದು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಾದ ಶಾಸಕಾಂಗ, ಕಾರ್ಯಾಂಗ ಪತನವಾಗಿವೆ. ಜತೆಗೆ ಮಾಧ್ಯಮದವರ ಕೈಯಲ್ಲಿ ಲೇಖನಿಯ ಬದಲು ಕಮಲವಿದೆ. ಸದ್ಯದ ಪರಿಸ್ಥಿತಿಯಲ್ಲಿ ಭರವಸೆ ಉಳಿದಿರುವುದು ನ್ಯಾಯಾಂಗದ ಮೇಲೆ ಮಾತ್ರ’ ಎಂದು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ನ್ಯಾಯದ ಅವನತಿಗೆ ಅವಕಾಶ ನೀಡುವುದಿಲ್ಲ. ನ್ಯಾಯಾಂಗದ ಮೇಲೆ ನಮಗೆ ನಂಬಿಕೆ ಇದೆ ಎಂದು ಠಾಕ್ರೆ ಹೇಳಿದ್ದಾರೆ.

‘ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಅವರ ನೇತೃತ್ವದಲ್ಲಿ ರಥಯಾತ್ರೆ ಆರಂಭಿಸಿದಾಗ ನಾವು ಬೆಂಬಲಿಸಿದ್ದೆವು. ಆಗ ಬಿಜೆಪಿ ಕೇವಲ 2 ಸಂಸದರನ್ನು ಹೊಂದಿತ್ತು. ಆದರೆ, ಸರ್ಕಾರ ರಚಿಸಬೇಕಾಗಿ ಬಂದಾಗ, ಜಯಲಲಿತಾ ಮತ್ತು ಇತರರಿಂದ ಬೆಂಬಲವನ್ನು ಬಯಸಿದಾಗ, ಜಾತ್ಯತೀತತೆಗಾಗಿ ಇತರ ಪಕ್ಷಗಳು ಅಡ್ವಾಣಿಯವರನ್ನು ವಿರೋಧಿಸಿದ್ದವು. ಬಳಿಕ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾದರು. ಹಾಗಾದರೆ ಹಿಂದೂ ಧರ್ಮ, ಶಿವಸೇನಾ ಅಥವಾ ಬಿಜೆಪಿ ತೊರೆದವರು ಯಾರು’ ಎಂದು ಉದ್ಧವ್ ಠಾಕ್ರೆ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT