ನವದೆಹಲಿ: 1984ರಲ್ಲಿ ನಡೆದ 'ಆಪರೇಷನ್ ಬ್ಲೂ ಸ್ಟಾರ್' ಎಂಬ ಒಂದು ತಪ್ಪು ನಿರ್ಧಾರದಿಂದಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ಶನಿವಾರ ನಡೆದ ಖುಷ್ವಂತ್ ಸಿಂಗ್ ಸಾಹಿತ್ಯ ಉತ್ಸವದಲ್ಲಿ ಪತ್ರಕರ್ತ ಹರಿಂದರ್ ಬವೇಜಾ ಅವರ 'ದೇ ವಿಲ್ ಶೂಟ್ ಯು, ಮೇಡಂ ' ಪುಸ್ತಕದ ಕುರಿತ ಚರ್ಚೆಯ ವೇಳೆ ಚಿದಂಬರಂ ಈ ಹೇಳಿಕೆ ನೀಡಿದ್ದರು.
.Taliban-Pakistan Clash | 58 ಪಾಕ್ ಯೋಧರ ಸಾವು: ತಾಲಿಬಾನ್ ವಕ್ತಾರ ಮುಜಾಹಿದ್.ಅಫ್ಗನ್ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ: ಪಾಕ್ ಪ್ರಧಾನಿ.
'ಯಾವುದೇ ಮಿಲಿಟರಿ ಅಧಿಕಾರಿಗಳಿಗೆ ಅಗೌರವ ತೋರುತ್ತಿಲ್ಲ. ಗೋಲ್ಡನ್ ಟೆಂಪಲ್ ಅನ್ನು ಹಿಂಪಡೆಯಲು 'ಆಪರೇಷನ್ ಬ್ಲೂ ಸ್ಟಾರ್' ಕಾರ್ಯಾಚರಣೆಯ ತಪ್ಪು ನಿರ್ಧಾರವಾಗಿತ್ತು. ಆದರೆ ಈ ನಿರ್ಧಾರವನ್ನು ಕೇವಲ ಇಂದಿರಾ ಗಾಂಧಿ ಅವರು ಮಾತ್ರ ಕೈಗೊಂಡಿರಲಿಲ್ಲ, ಆಗಿನ ಸೇನೆ, ಪೊಲೀಸರು, ಗುಪ್ತಚರ ಇಲಾಖೆ ಒಗ್ಗೂಡಿ ಕೈಗೊಂಡ ನಿರ್ಣಯವಾಗಿತ್ತು. ಆದರೆ ಇಂದಿರಾ ಗಾಂಧಿಯವರನ್ನೇ ಮಾತ್ರವೇ ದೂಷಿಸುವುದು ಸರಿಯಲ್ಲ' ಎಂದಿದ್ದಾರೆ.

1984ರ ಜೂನ್ 1ರಿಂದ 10 ರವರೆಗೆ ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಯನ್ನು ನಡೆಸಿದ್ದವು. ದಮ್ದಾಮಿ ತಕ್ಸಲ್ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ಮತ್ತು ಪಂಜಾಬ್ನ ಪ್ರತ್ಯೇಕತಾವಾದಿ ಚಳವಳಿಯಲ್ಲಿ ಭಾಗಿಯಾಗಿರುವ ಇತರೆ ಉಗ್ರಗಾಮಿಗಳ ವಿರುದ್ಧ ಅಮೃತಸರದ ಸಿಖ್ರ ಪವಿತ್ರ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಇದು ಸಿಖ್ರ ಆಕ್ರೋಶಕ್ಕೂ ಕಾರಣವಾಯಿತು. ಈ ಕಾರ್ಯಾಚರಣೆಯು ಪಂಜಾಬ್ನ ದಂಗೆಗೆ ಮುನ್ನುಡಿ ಬರೆಯಿತು.
.Bihar Elections: JDU ಸೀಟು ಹಂಚಿಕೆ ಅಂತಿಮ; ನಾಲ್ವರು ಹಾಲಿ ಶಾಸಕರಿಗೆ ಕೊಕ್?.ಪ.ಬಂಗಾಳ | ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ಮೂವರ ಬಂಧನ.
ಕಾರ್ಯಾಚರಣೆಯ ನಡೆದ ಐದು ತಿಂಗಳ ನಂತರ, 1984ರ ಅಕ್ಟೋಬರ್ 31ರಂದು ಇಂದಿರಾ ಗಾಂಧಿಯವರ ಮೇಲೆ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಗಾಂಧಿ ಅವರ ಇಬ್ಬರು ಸಿಖ್ ಅಂಗರಕ್ಷಕರೇ ಅವರನ್ನು ಹತ್ಯೆ ಮಾಡಿದ್ದರು.
.ಷಷ್ಠಿಯಂದು ಕಾರ್ತಿಕೇಯನ ಆರಾಧನೆ: ಹೀಗಿರಲಿ ನಿಮ್ಮ ಷಷ್ಠಿ ವ್ರತಾಚರಣೆ .ಬಿಹಾರ ವಿಧಾನಸಭಾ ಚುನಾವಣೆ: ಎನ್ಡಿಎ ಸೀಟು ಹಂಚಿಕೆ ಸೂತ್ರ ಘೋಷಣೆ ಇಂದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.