ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 23 ಆಗಸ್ಟ್‌ 2023

Published 23 ಆಗಸ್ಟ್ 2023, 14:31 IST
Last Updated 23 ಆಗಸ್ಟ್ 2023, 14:31 IST
ಅಕ್ಷರ ಗಾತ್ರ
Introduction

ಚಂದ್ರಯಾನ–3 ಯಶಸ್ವಿ ಸಾಫ್ಟ್‌ ಲ್ಯಾಂಡಿಂಗ್‌, ಕಾವೇರಿ ಜಲ ವಿವಾದ , ನರೇಗಾ ವೇತನ ಬಾಕಿ, ಉಕ್ರೇನ್‌ ಮೇಲೆ ದಾಳಿ, ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌, ರೈಲ್ವೇ ಮೇಲ್ಸೆತುವೆ ಕುಸಿತ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.......

1

ಇತಿಹಾಸ ಬರೆದ ಇಸ್ರೊ; ಚಂದ್ರನ ದಕ್ಷಿಣ ಧ್ರುವಕ್ಕೆ ಅಡಿ ಇಟ್ಟ ಮೊದಲ ದೇಶ ಭಾರತ

ಚಂದ್ರಯಾನ –3 ಯಶಸ್ವಿ: ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಮಹಾಪೂರ
ಚಂದ್ರಯಾನ –3 ಯಶಸ್ವಿ: ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಮಹಾಪೂರ

ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದ ಪ್ರದೇಶದಲ್ಲಿ ಇಳಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಧೆಯ (ಇಸ್ರೊ) ಘೋಷಿಸಿದೆ.

ಸಂಪೂರ್ಣ ಸುದ್ದಿ ಓದಲು: ಇತಿಹಾಸ ಬರೆದ ಇಸ್ರೊ; ಚಂದ್ರನ ದಕ್ಷಿಣ ಧ್ರುವಕ್ಕೆ ಅಡಿ ಇಟ್ಟ ಮೊದಲ ದೇಶ ಭಾರತ

2

ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಡಿಂಗ್ ಯಶಸ್ವಿ: ಇದು ನವ ಭಾರತದ ಉದಯ ಎಂದ ಮೋದಿ

ಚಂದ್ರಯಾನ-3 ಯೋಜನೆ ಯಶಸ್ಸು ಕುರಿತು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಇಂತಹ ಐತಿಹಾಸಿಕ ಕ್ಷಣಗಳನ್ನು ನೋಡಿದಾಗ ನಮಗೆ ತುಂಬಾ ಹೆಮ್ಮೆಯಾಗುತ್ತದೆ. ಇದು ನವಭಾರತದ ಉದಯ’ ಎಂದು ಕೊಂಡಾಡಿದ್ದಾರೆ.

ಸಂಪೂರ್ಣ ಸುದ್ದಿ ಓದಲು: ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಡಿಂಗ್ ಯಶಸ್ವಿ: ಇದು ನವ ಭಾರತದ ಉದಯ ಎಂದ ಮೋದಿ

3

ಚಂದ್ರಯಾನ –3 ಯಶಸ್ವಿ: ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಮಹಾಪೂರ

ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯೋಜನೆಯ 'ವಿಕ್ರಮ್' ಲ್ಯಾಂಡರ್ ಚಂದ್ರನ ಅಂಗಳಕ್ಕೆ ಯಶಸ್ವಿಯಾಗಿ ಕಾಲಿಟ್ಟಿದೆ. ಚಂದ್ರಯಾನ-3 ಯೋಜನೆ ಯಶಸ್ಸಿನ ಕುರಿತು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.

ಸಂಪೂರ್ಣ ಸುದ್ದಿ ಓದಲು: ಚಂದ್ರಯಾನ –3 ಯಶಸ್ವಿ: ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಮಹಾಪೂರ

4

ಜಲ ವಿವಾದ: ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಒಯ್ಯಲು ನಿರ್ಧಾರ– ಸಿದ್ದರಾಮಯ್ಯ

ಕಾವೇರಿ, ಮೇಕೆದಾಟು ಯೋಜನೆ, ಮಹದಾಯಿ ಜಲ ವಿವಾದಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಮಾಜಿ ಸಿಎಂಗಳಾದ ಯಡಿಯೂರಪ್ಪ, ವೀರಪ್ಪ ಮೊಯಿಲಿ ಸೇರಿದಂತೆ ದೆಹಲಿಯಲ್ಲಿ ಸರ್ಕಾರವನ್ನು ಪ್ರತಿನಿಧಿಸುವ ಕಾನೂನು ತಂಡ ಸಹ ಪಾಲ್ಗೊಂಡಿತ್ತು.

ಸಂಪೂರ್ಣ ಸುದ್ದಿ ಓದಲು: ಜಲ ವಿವಾದ: ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಒಯ್ಯಲು ನಿರ್ಧಾರ– ಸಿದ್ದರಾಮಯ್ಯ

5

ಮೋದಿ ಸರ್ಕಾರ ₹ 6,366 ಕೋಟಿ ನರೇಗಾ ವೇತನ ಬಾಕಿ ಉಳಿಸಿಕೊಂಡಿದೆ: ಖರ್ಗೆ ಆರೋಪ

ನರೇಗಾ ಯೋಜನೆಗೆ ಬಜೆಟ್‌ನಲ್ಲಿ ಮೂರನೇ ಒಂದು ಭಾಗದಷ್ಟು ಕಡಿತದ ನಂತರವೂ 18 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ₹ 6,366 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಸಂಪೂರ್ಣ ಸುದ್ದಿ ಓದಲು: ಮೋದಿ ಸರ್ಕಾರ ₹ 6,366 ಕೋಟಿ ನರೇಗಾ ವೇತನ ಬಾಕಿ ಉಳಿಸಿಕೊಂಡಿದೆ: ಖರ್ಗೆ ಆರೋಪ

6

ಉಕ್ರೇನ್‌ನ ಡಾನ್ಯೂಬ್ ಪ್ರದೇಶದಲ್ಲಿನ ಧಾನ್ಯ ಮೂಲಸೌಕರ್ಯಗಳ ಮೇಲೆ ರಷ್ಯಾ ದಾಳಿ

ಉಕ್ರೇನ್‌ನ ದಕ್ಷಿಣದ ಬಂದರು ನಗರ ಒಡೆಸಾ ಮತ್ತು ಡಾನ್ಯೂಬ್ ನದಿ ತೀರ ಪ್ರದೇಶಗಳಲ್ಲಿರುವ ಪ್ರಮುಖ ಧಾನ್ಯ ಮೂಲಸೌಕರ್ಯಗಳ ರಷ್ಯಾ ಸೇನೆ ಮಂಗಳವಾರ ರಾತ್ರಿ ಡ್ರೋನ್‌ ದಾಳಿ ನಡೆಸಿದೆ. ಉಕ್ರೇನ್‌ ಸೇನೆ ಮತ್ತು ಸ್ಥಳೀಯ ಆಡಳಿತ ಈ ಬಗ್ಗೆ ಬುಧವಾರ ಹೇಳಿಕೆ ನೀಡಿವೆ.

ಸಂಪೂರ್ಣ ಸುದ್ದಿ ಓದಲು: ಉಕ್ರೇನ್‌ನ ಡಾನ್ಯೂಬ್ ಪ್ರದೇಶದಲ್ಲಿನ ಧಾನ್ಯ ಮೂಲಸೌಕರ್ಯಗಳ ಮೇಲೆ ರಷ್ಯಾ ದಾಳಿ

7

ಮಿಜೋರಾಂ: ನಿರ್ಮಾಣ ಹಂತದ ರೈಲ್ವೆ ಮೇಲ್ಸೇತುವೆ ಕುಸಿದು 17 ಕಾರ್ಮಿಕರು ಸಾವು

ನಿರ್ಮಾಣ ಹಂತದ ರೈಲ್ವೆ ಮೇಲ್ಸೇತುವೆ ಕುಸಿದು ಕನಿಷ್ಠ 17 ಕಾರ್ಮಿಕರು ಮೃತಪಟ್ಟಿರುವ ದುರಂತ ಮಿಜೋರಾಂನ ಸಾಯಿರಂಗ್‌ ಪ್ರದೇಶದಲ್ಲಿ ಬುಧವಾರ ಸಂಭವಿಸಿದೆ.

ಸಂಪೂರ್ಣ ಸುದ್ದಿ ಓದಲು: ಮಿಜೋರಾಂ: ನಿರ್ಮಾಣ ಹಂತದ ರೈಲ್ವೆ ಮೇಲ್ಸೇತುವೆ ಕುಸಿದು 17 ಕಾರ್ಮಿಕರು ಸಾವು

8

ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌: ಅಶ್ವಿನ್, ಜಡೇಜಗೆ ಅಗ್ರಸ್ಥಾನ

ಭಾರತದ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ.

ಸಂಪೂರ್ಣ ಸುದ್ದಿ ಓದಲು: ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌: ಅಶ್ವಿನ್, ಜಡೇಜಗೆ ಅಗ್ರಸ್ಥಾನ

9

ವರ್ಷದಲ್ಲಿ ಎರಡು ಬಾರಿ ಬೋರ್ಡ್‌ ಪರೀಕ್ಷೆಗಳು: ಶಿಕ್ಷಣ ಸಚಿವಾಲಯ

ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನ್ವಯ ರೂಪಿಸಿರುವ ಹೊಸ ಪಠ್ಯಕ್ರಮ ಚೌಕಟ್ಟಿನ ಪ್ರಕಾರ ವರ್ಷದಲ್ಲಿ ಎರಡು ಬಾರಿ ಬೋರ್ಡ್‌ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಸಂಪೂರ್ಣ ಸುದ್ದಿ ಓದಲು: ವರ್ಷದಲ್ಲಿ ಎರಡು ಬಾರಿ ಬೋರ್ಡ್‌ ಪರೀಕ್ಷೆಗಳು: ಶಿಕ್ಷಣ ಸಚಿವಾಲಯ

10

ಬ್ರಿಕ್ಸ್‌ ವಿಸ್ತರಣೆಗೆ ಭಾರತದ ಬೆಂಬಲ: ಸದಸ್ಯ ರಾಷ್ಟ್ರಗಳ ಒಮ್ಮತ ಕೋರಿದ ಮೋದಿ

ಸದಸ್ಯ ರಾಷ್ಟ್ರಗಳ ಒಮ್ಮತದ ಮೇರೆಗೆ ಬ್ರಿಕ್ಸ್‌ ವಿಸ್ತರಣೆಗೆ ಭಾರತ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಂಪೂರ್ಣ ಸುದ್ದಿ ಓದಲು: ಬ್ರಿಕ್ಸ್‌ ವಿಸ್ತರಣೆಗೆ ಭಾರತದ ಬೆಂಬಲ: ಸದಸ್ಯ ರಾಷ್ಟ್ರಗಳ ಒಮ್ಮತ ಕೋರಿದ ಮೋದಿ