ಪಟ್ನಾ: ರಾಜ್ಯದಲ್ಲಿ ಇಂಡಿಯಾ ಬಣವು ಅಧಿಕಾರಕ್ಕೆ ಬಂದರೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿರುವ ಪ್ರತಿನಿಧಿಗಳ ಭತ್ಯೆಯನ್ನು ದುಪ್ಪಟ್ಟು ಮಾಡಲಾಗುವುದು ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಭಾನುವಾರ ಹೇಳಿದ್ದಾರೆ.

ಅಲ್ಲದೆ ₹ 50 ಲಕ್ಷ ವಿಮೆ ಹಾಗೂ ಪಿಂಚಣಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
.ಬಿಹಾರ | ಗಂಡನ ಸ್ವಭಾವ ಬದಲಾಯಿಸಿದಂತೆ ಕ್ಷೇತ್ರವನ್ನು ಸುಧಾರಿಸುವೆ: RJD ಅಭ್ಯರ್ಥಿ.
ಬಿಹಾರದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಜಿಲ್ಲಾ ಪರಿಷತ್, ಪಂಚಾಯತ್ ಸಮಿತಿ ಹಾಗೂ ಗ್ರಾಮ ಪಂಚಾಯತ್ ಎನ್ನುವ ಮೂರು ಸ್ತರಗಳಿವೆ. ಇದರ ಮುಖ್ಯಸ್ಥರನ್ನು ಮುಖ್ಯ (ಗ್ರಾಮ ಪಂಚಾಯತ್), ಪ್ರಮುಖ್ (ಪಂಚಾಯತ್ ಸಮಿತಿ) ಹಾಗೂ ಅಧ್ಯಕ್ಷ (ಜಿಲ್ಲಾ ಪರಿಷತ್) ಎನ್ನಲಾಗುತ್ತದೆ.

ಅಲ್ಲದೆ ನಾವು ಅಧಿಕಾರಕ್ಕೆ ಬಂದರೆ ನಾಗರಿಕ ಪೂರೈಕೆ ವ್ಯವಸ್ಥೆಯಲ್ಲಿರುವ ವಿತರಕರಿಗೆ ಲಾಭದ ಪ್ರಮಾಣ ಹೆಚ್ಚಿಸುತ್ತೇವೆ ಎಂದು ಅವರು ವರದಿಗಾರರೊಂದಿಗೆ ಹೇಳಿದ್ದಾರೆ.
.ಬಿಹಾರ ಚುನಾವಣೆ | ನ.14ರಂದು ನಿಜವಾದ ದೀಪಾವಳಿ ಆಚರಿಸಲಾಗುತ್ತದೆ: ಅಮಿತ್ ಶಾ.
ಜೊತೆಗೆ ಕ್ಷೌರ, ಕುಂಬಾರಿಕೆ ಹಾಗೂ ಬಡಗಿ ವೃತ್ತಿ ಮಾಡುವವರಿಗೆ ₹ 5 ಲಕ್ಷದ ವರೆಗೆ ಬಡ್ಡಿ ರಹಿತ ಸಾಲ ನೀಡುವುದಾಗಿಯೂ ತಿಳಿಸಿದ್ದಾರೆ.

243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನವೆಂಬರ್ 6 ಹಾಗೂ 11 ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ.
.ಸಂಪಾದಕೀಯ | ಬಿಹಾರ: ಹೊಂದಾಣಿಕೆ ಕೊರತೆ ಪ್ರತಿಪಕ್ಷಗಳ ವಿಶ್ವಾಸಾರ್ಹತೆಗೆ ಧಕ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.