ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು – ಸೆಪ್ಟೆಂಬರ್ 4 ಸೋಮವಾರ 2023

Published 4 ಸೆಪ್ಟೆಂಬರ್ 2023, 13:36 IST
Last Updated 4 ಸೆಪ್ಟೆಂಬರ್ 2023, 13:36 IST
ಅಕ್ಷರ ಗಾತ್ರ
Introduction

ಪಶ್ಚಿಮ ಘಟ್ಟ ಸಂರಕ್ಷಣೆಗೆ 30 ಲಕ್ಷ ಡಾಲರ್ ಹೂಡಿಕೆ ಮಾಡಲಿರುವ ಅಮೆಜಾನ್, G20 summit: ಚೀನಾ ಅಧ್ಯಕ್ಷ ಷಿ ಗೈರಿಗೆ ಅಮೆರಿಕ ಅಧ್ಯಕ್ಷ ಬೈಡನ್‌ ಬೇಸರ, ಚಂದ್ರಯಾನ–3ರ ಕೌಂಟ್‌ಡೌನ್‌ ಹಿಂದಿನ ಧ್ವನಿಯಾಗಿದ್ದ ವಿಜ್ಞಾನಿ ವಲರ್ಮತಿ ನಿಧನ ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ

1

ಚಂದ್ರಯಾನ–3ರ ಕೌಂಟ್‌ಡೌನ್‌ ಹಿಂದಿನ ಧ್ವನಿಯಾಗಿದ್ದ ವಿಜ್ಞಾನಿ ವಲರ್ಮತಿ ನಿಧನ

ಪ್ರಕೃತಿ ಸಂಬಂಧ ಯೋಜನೆಗಳಲ್ಲಿ ಭಾರತದಲ್ಲಿ 30 ಲಕ್ಷ ಡಾಲರ್‌ ಹೂಡಿಕೆ ಮಾಡುವುದಾಗಿ ಇ–ಕಾಮರ್ಸ್‌ ದೈತ್ಯ ಅಮೆಜಾನ್‌ ಹೇಳಿದೆ.

ಸಂಪೂರ್ಣ ಸುದ್ದಿ ಓದಿ

2

G20 summit: ಚೀನಾ ಅಧ್ಯಕ್ಷ ಷಿ ಗೈರಿಗೆ ಅಮೆರಿಕ ಅಧ್ಯಕ್ಷ ಬೈಡನ್‌ ಬೇಸರ

ದೆಹಲಿಯಲ್ಲಿ ನಡೆಯಲಿರುವ ಜಿ20 ಸಮಾವೇಶದಲ್ಲಿ ಚೀನಾದ ಅಧ್ಯಕ್ಷ ಷಿ ಜಿಂಗ್‌ಪಿಂಗ್ ಗೈರಾಗಲು ಯೋಜಿಸುತ್ತಿರುವುದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಪೂರ್ಣ ಸುದ್ದಿ ಓದಿ

3

ಚಂದ್ರಯಾನ–3ರ ಕೌಂಟ್‌ಡೌನ್‌ ಹಿಂದಿನ ಧ್ವನಿಯಾಗಿದ್ದ ವಿಜ್ಞಾನಿ ವಲರ್ಮತಿ ನಿಧನ

ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೊ) ವಿಜ್ಞಾನಿ, ಚಂದ್ರಯಾನ –3ರ ರಾಕೆಟ್ ಉಡಾವಣೆ ವೇಳೆ ಕೌಂಟ್‌ಡೌನ್ ಹಿಂದಿನ ಧ್ವನಿಯಾಗಿದ್ದ ಎನ್‌. ವಲರ್ಮತಿ(64) (N Valarmathi) ಅವರು ಹೃದಯಾಘಾತದಿಂದ ನಿಧಾನರಾಗಿದ್ದಾರೆ. 

ಸಂಪೂರ್ಣ ಸುದ್ದಿ ಓದಿ

4

ಶಕ್ತಿ ಯೋಜನೆ ಜಾರಿಯಾದ ದಿನ ಬಸ್‌ಗೆ ನಮಸ್ಕರಿಸಿದ್ದ ಸಂಗವ್ವರನ್ನು ಭೇಟಿಯಾದ ಸಿಎಂ

ಶಕ್ತಿ ಯೋಜನೆ ಜಾರಿಯಾದ ದಿನ ಅತ್ಯಂತ ಸಂತಸದಿಂದ ಸರ್ಕಾರಿ ಬಸ್‌ನ ಮೆಟ್ಟಿಲುಗಳಿಗೆ ನಮಸ್ಕರಿಸಿ ಪ್ರಯಾಣ ಬೆಳೆಸಿದ್ದ ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯ ಸಂಗವ್ವ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿಯಾಗಿದ್ದಾರೆ.

ಸಂಪೂರ್ಣ ಸುದ್ದಿ ಓದಿ

5

ಚಂದ್ರಯಾನ ಯಶಸ್ವಿಯಾದರೂ ರಾಹುಲ್‌ಯಾನ ಉಡ್ಡಯನ ಆಗಲಿಲ್ಲ : ರಾಜನಾಥ್‌ ಸಿಂಗ್‌

ಚಂದ್ರಯಾನ ನೌಕೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿಯಿತು. ಆದರೆ ರಾಹುಲ್‌ಯಾನ ಮಾತ್ರ ಉಡ್ಡಯನವೂ ಆಗಲಿಲ್ಲ, ಇಳಿಯಲು ಇಲ್ಲ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ರಾಹುಲ್‌ ಗಾಂಧಿ ಅವರನ್ನು ಲೇವಡಿ ಮಾಡಿದರು.

ಸಂಪೂರ್ಣ ಸುದ್ದಿ ಓದಿ

6

ರಾಜಕೀಯ ಎಂಬುದು ಅವಕಾಶ, ಏನು ಬೇಕಾದರೂ ಆಗಬಹುದು: ಎಚ್. ವಿಶ್ವನಾಥ್

ಸಿದ್ದರಾಮಯ್ಯ ಪ್ರಧಾನ ಮಂತ್ರಿ ಆಗಬೇಕು ಅಂತ ಅವರ ಹಣೆಯಲ್ಲಿ ಬರೆದಿದ್ದರೆ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ರಾಜಕೀಯ ಎಂಬುದು ಅವಕಾಶ, ಏನು ಬೇಕಾದರೂ ಆಗಬಹುದು. ಇಲ್ಲಿ ಯಾವುದನ್ನೂ ತಳ್ಳಿಹಾಕಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.

ಸಂಪೂರ್ಣ ಸುದ್ದಿ ಓದಿ

7

ಸನಾತನ ಧರ್ಮ ಕೊರೊನಾ, ಡೆಂಗಿಗೆ ಸಮ ಎಂದ ಉದಯ ನಿಧಿ ಹೇಳಿಕೆಗೆ ಪೇಜಾವರ ಶ್ರೀ ಖಂಡನೆ

ಸನಾತನ ಧರ್ಮವು ಕೊರೊನಾ, ಡೆಂಗಿ, ಮಲೇರಿಯಾಕ್ಕೆ ಸಮಾನವಾದುದು, ಅದನ್ನು ಬೇರು ಸಮೇತ ನಿರ್ಮೂಲನೆ ಮಾಡಬೇಕು' ಎಂಬ ತಮಿಳುನಾಡಿದ ಮುಖ್ಯಮಂತ್ರಿ ಸ್ಟಾಲಿನ್ ಪುತ್ರ, ಅಲ್ಲಿನ ಸಚಿವ ಉದಯ ನಿಧಿ ಸ್ಟಾಲಿನ್ ಹೇಳಿಕೆಯನ್ನು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಖಂಡಿಸಿದ್ದಾರೆ.

ಸಂಪೂರ್ಣ ಸುದ್ದಿ ಓದಿ

8

G20 Summit: ದೆಹಲಿಯಲ್ಲಿ ಔಷಧ ಹೊರತುಪಡಿಸಿ ಆನ್‌ಲೈನ್ ಡೆಲಿವರಿ ಸೇವೆಗಳಿಗೆ ನಿಷೇಧ

ಜಿ–20 ಶೃಂಗ ಸಭೆ ನಡೆಯುವ ವೇಳೆ ಔಷಧಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅನ್‌ಲೈನ್‌ ಡೆಲಿವರಿ ಸೇವೆಗಳನ್ನು ನವದೆಹಲಿ ಜಿಲ್ಲೆಯಲ್ಲಿ ನಿರ್ಬಂಧಿಸಲಾಗುತ್ತದೆ ಎಂದು ದೆಹಲಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಸಂಪೂರ್ಣ ಸುದ್ದಿ ಓದಿ

9

Asia Cup Cricket: ಭಾರತ– ನೇಪಾಳ ‍ಪಂದ್ಯಕ್ಕೆ ಮಳೆ ಅಡ್ಡಿ

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ನೇಪಾಳ ವಿರುದ್ಧ ಟಾಸ್‌ ಗೆದ್ದಿರುವ ಭಾರತ, ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಆರಂಭಿಸಿದ ನೇಪಾಳ 37.5 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿದೆ. ಆದರೆ, ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿದೆ.

ಸಂಪೂರ್ಣ ಸುದ್ದಿ ಓದಿ