ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು, 23 ಸೆಪ್ಟೆಂಬರ್ 2023

Published 23 ಸೆಪ್ಟೆಂಬರ್ 2023, 14:01 IST
Last Updated 23 ಸೆಪ್ಟೆಂಬರ್ 2023, 14:01 IST
ಅಕ್ಷರ ಗಾತ್ರ
Introduction

ಕಾವೇರಿ ವಿವಾದ, ಮಂಡ್ಯ–ಮದ್ದೂರು ಬಂದ್‌, ಜೆಡಿಎಸ್‌–ಬಿಜೆಪಿ ಮೈತ್ರಿ, ಬಿಜೆಪಿ ಟಿಕೆಟ್‌ ವಂಚನೆ ಪ್ರಕರಣ, ಸಿಐಡಿಯಿಂದ ಚಂದ್ರಬಾಬು ನಾಯ್ಡು ವಿಚಾರಣೆ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ, ವಾರಣಾಸಿಯಲ್ಲಿ ಕ್ರಿಕೆಟ್ ಸ್ಟೇಡಿಯಂ ಶಿಲಾನ್ಯಾಸ ಸೇರಿದಂತೆ ಇಂದಿನ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ......

1

Cauvery | 'ಕಾವೇರಿ'ದ ಪ್ರತಿಭಟನೆ: ಮಂಡ್ಯ ಮದ್ದೂರು ಬಂದ್‌ಗೆ ವ್ಯಾಪಕ ಬೆಂಬಲ

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಜಿಲ್ಲಾ ಹಿತರಕ್ಷಣಾ ಸಮಿತಿ ಶನಿವಾರ ಕರೆ ನೀಡಿದ್ದ‌ ಮಂಡ್ಯ, ಮದ್ದೂರು ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ನಗರ ಹಾಗೂ ಮದ್ದೂರು ಪಟ್ಟಣದಲ್ಲಿ ಅಂಗಡಿ ಮುಂಗಟ್ಟು ಮುಚ್ಚಿದ್ದು ವಾಣಿಜ್ಯ ಚಟುವಟಿಕೆ ಸಂಪೂರ್ಣ ಸ್ತಬ್ಧಗೊಂಡಿದೆ.

ಹೆಚ್ಚಿನ ಓದಿಗಾಗಿ: Cauvery | 'ಕಾವೇರಿ'ದ ಪ್ರತಿಭಟನೆ: ಮಂಡ್ಯ ಮದ್ದೂರು ಬಂದ್‌ಗೆ ವ್ಯಾಪಕ ಬೆಂಬಲ

2

ಭ್ರಷ್ಟಾಚಾರ ಪ್ರಕರಣ: ಜೈಲಿನಲ್ಲೇ ಚಂದ್ರಬಾಬು ನಾಯ್ಡು ವಿಚಾರಣೆ ಆರಂಭಿಸಿದ ಸಿಐಡಿ

ಆಂಧ್ರಪ್ರದೇಶದ ಕೌಶಲ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರ ವಿಚಾರಣೆಯನ್ನು ಅಪರಾಧ ತನಿಖಾ ದಳ (ಸಿಐಡಿ) ಶನಿವಾರ ಜೈಲಿನಲ್ಲೇ ಆರಂಭಿಸಿದೆ.

ಹೆಚ್ಚಿನ ಓದಿಗಾಗಿ: ಭ್ರಷ್ಟಾಚಾರ ಪ್ರಕರಣ: ಜೈಲಿನಲ್ಲೇ ಚಂದ್ರಬಾಬು ನಾಯ್ಡು ವಿಚಾರಣೆ ಆರಂಭಿಸಿದ ಸಿಐಡಿ

3

ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಪಾಕಿಸ್ತಾನಕ್ಕೆ ಭಾರತ ತಿರುಗೇಟು

<div class="paragraphs"><p></p></div>

ಪಾಕಿಸ್ತಾನದ ಹಂಗಾಮಿ ಪ್ರಧಾನಮಂತ್ರಿ ಅನ್ವರ್ ಉಲ್ ಹಕ್‌ ಕಾಕರ್‌ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್‌ಜಿಎ) ಜಮ್ಮು–ಕಾಶ್ಮಿರ ವಿಷಯ ಪ್ರಸ್ತಾಪಿಸಿರುವುದಕ್ಕೆ ಭಾರತ ತಿರುಗೇಟು ನೀಡಿದೆ.

ಹೆಚ್ಚಿನ ಓದಿಗಾಗಿ: ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಪಾಕಿಸ್ತಾನಕ್ಕೆ ಭಾರತ ತಿರುಗೇಟು

4

ಬಿಜೆಪಿ ಟಿಕೆಟ್ ವಂಚನೆ ಪ್ರಕರಣ: ಸಿಸಿಬಿ ಪೊಲೀಸರಿಂದ ಶೇ 88 ರಷ್ಟು ಮೊತ್ತ ಜಪ್ತಿ!

ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ವಂಚಿಸಿದ್ದ ಪ್ರಕರಣದ ತನಿಖೆ ಕೈಗೊಂಡಿರುವ ಸಿಸಿಬಿ ಪೊಲೀಸರು, ಬಂಧಿತ ಆರೋಪಿಗಳಿಂದ ₹3.67 ಕೋಟಿ ಜಪ್ತಿ ಮಾಡಿದ್ದಾರೆ. ₹ 25 ಲಕ್ಷ ಕೊಟ್ಟು ಹಾಲವೀರಪ್ಪ ಸ್ವಾಮೀಜಿ ಖರೀದಿಸಿದ್ದ ಇನ್ನೋವಾ ಕಾರನ್ನು ಪೊಲೀಸರು ಸುಪರ್ದಿಗೆ ಪಡೆದಿದ್ದಾರೆ.

ಹೆಚ್ಚಿನ ಓದಿಗಾಗಿ: ಬಿಜೆಪಿ ಟಿಕೆಟ್ ವಂಚನೆ ಪ್ರಕರಣ: ಸಿಸಿಬಿ ಪೊಲೀಸರಿಂದ ಶೇ 88 ರಷ್ಟು ಮೊತ್ತ ಜಪ್ತಿ!

5

ಘೋಸ್ಟ್‌ ಸಿನಿಮಾಗೆ ಬಂಪರ್‌: ಡಿಜಿಟಲ್‌ ಹಕ್ಕುಗಳು ಪೆನ್ ಸ್ಟುಡಿಯೊಗೆ

ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಅವರ ಈ ವರ್ಷದ ಮೊದಲ ಸಿನಿಮಾ ‘ಘೋಸ್ಟ್‌’ ರಿಲೀಸ್‌ಗೆ ಮುಹೂರ್ತ ನಿಗದಿಯಾಗಿದೆ. ಶ್ರೀನಿ ಆ್ಯಕ್ಷನ್‌ ಕಟ್‌ ಹೇಳಿರುವ ಈ ಚಿತ್ರದ ಥಿಯೇಟ್ರಿಕಲ್‌, ಸ್ಯಾಟಲೈಟ್‌ ಹಾಗೂ ಡಿಜಿಟಲ್‌ ಹಕ್ಕುಗಳು ಪೆನ್ ಸ್ಟುಡಿಯೊ ಸಂಸ್ಥೆಗೆ ಭಾರೀ ಮೊತ್ತಕ್ಕೆ ಮಾರಾಟವಾಗಿದೆ.

ಹೆಚ್ಚಿನ ಓದಿಗಾಗಿ: ಘೋಸ್ಟ್‌ ಸಿನಿಮಾಗೆ ಬಂಪರ್‌: ಡಿಜಿಟಲ್‌ ಹಕ್ಕುಗಳು ಪೆನ್ ಸ್ಟುಡಿಯೊಗೆ

6

ಮಂಗಳೂರು: ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚಳ

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಪ್ರಸಕ್ತ ಏಪ್ರಿಲ್‌ನಿಂದ ಆಗಸ್ಟ್‌ ವರೆಗಿನ ಐದು  ತಿಂಗಳ ಆಗಮನದ ದತ್ತಾಂಶ ಪರಿಶೀಲಿಸಿದ ವೇಳೆ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿರುವುದು ತಿಳಿದುಬಂದಿದೆ.

ಹೆಚ್ಚಿನ ಓದಿಗಾಗಿ: ಮಂಗಳೂರು: ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚಳ

7

ಸನಾತನ ಧರ್ಮ ಕುರಿತ ಹೇಳಿಕೆ: ಸುಪ್ರೀಂಕೋರ್ಟ್‌ನಿಂದ ನೋಟಿಸ್ ಬಂದಿಲ್ಲ ಎಂದ ಉದಯನಿಧಿ

ಸುಪ್ರೀಂ ಕೋರ್ಟ್ ನೋಟಿಸ್‌ ನೀಡಿರುವ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಆದರೆ, ಇದುವರೆಗೆ ಕೋರ್ಟ್‌ನಿಂದ ಪ್ರತಿಕ್ರಿಯೆ ನೀಡುವಂತೆ ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್‌ ತಿಳಿಸಿದ್ದಾರೆ.

ಹೆಚ್ಚಿನ ಓದಿಗಾಗಿ: ಸನಾತನ ಧರ್ಮ ಕುರಿತ ಹೇಳಿಕೆ: ಸುಪ್ರೀಂಕೋರ್ಟ್‌ನಿಂದ ನೋಟಿಸ್ ಬಂದಿಲ್ಲ ಎಂದ ಉದಯನಿಧಿ

8

ಲೋಕಸಭೆ ಚುನಾವಣೆಗೆ BJP -JDS ಮೈತ್ರಿ: ದೇವೇಗೌಡ ಸ್ಪರ್ಧೆಗೆ ಬಸವರಾಜು ವಿರೋಧ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ– ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ.ದೇವೇಗೌಡ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿದರೆ ಜಿಲ್ಲೆಯ ಜನರು ವೋಟು ಹಾಕುವುದಿಲ್ಲ ಎಂದು ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಹೇಳಿದರು.

ಹೆಚ್ಚಿನ ಓದಿಗಾಗಿ: ಲೋಕಸಭೆ ಚುನಾವಣೆಗೆ BJP -JDS ಮೈತ್ರಿ: ದೇವೇಗೌಡ ಸ್ಪರ್ಧೆಗೆ ಬಸವರಾಜು ವಿರೋಧ

9

ಎನ್‌ಐಎಯಿಂದ ಖಾಲಿಸ್ತಾನ ಉಗ್ರವಾದಿ ಗುರುಪತ್ವಂತ್ ಸಿಂಗ್ ಪನ್ನು ಆಸ್ತಿ ಜಪ್ತಿ

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಂದು (ಶನಿವಾರ) ನಿಷೇಧಿತ 'ಸಿಖ್ ಫಾರ್ ಜಸ್ಟೀಸ್' ಸಂಘಟನೆಯ ನಾಯಕ, ಉಗ್ರವಾದಿ ಗುರುಪತ್ವಂತ್ ಸಿಂಗ್ ಪನ್ನು ಅವರ ಚಂಡೀಗಢ ಮತ್ತು ಅಮೃತಸರದಲ್ಲಿರುವ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ

ಹೆಚ್ಚಿನ ಓದಿಗಾಗಿ: ಎನ್‌ಐಎಯಿಂದ ಖಾಲಿಸ್ತಾನ ಉಗ್ರವಾದಿ ಗುರುಪತ್ವಂತ್ ಸಿಂಗ್ ಪನ್ನು ಆಸ್ತಿ ಜಪ್ತಿ

10

ವಾರಾಣಸಿ ಕ್ರಿಕೆಟ್ ಸ್ಟೇಡಿಯಂ ಶಿಲಾನ್ಯಾಸ ನೆರವೇರಿಸಿದ ಮೋದಿ; ವಿಶಿಷ್ಟತೆಗಳೇನು?

ದೇಶದ ಪ್ರಮುಖ ತೀರ್ಥ ಕ್ಷೇತ್ರಗಳಲ್ಲಿ ಒಂದಾದ ವಾರಾಣಸಿಯಲ್ಲಿ ಅಂತರರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಗೊಳ್ಳುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಇಂದು ಶಿಲಾನ್ಯಾಸ ನೆರವೇರಿಸಿದ್ದಾರೆ.

ಹೆಚ್ಚಿನ ಓದಿಗಾಗಿ: ವಾರಾಣಸಿ ಕ್ರಿಕೆಟ್ ಸ್ಟೇಡಿಯಂ ಶಿಲಾನ್ಯಾಸ ನೆರವೇರಿಸಿದ ಮೋದಿ; ವಿಶಿಷ್ಟತೆಗಳೇನು?