ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಪಕ್ಕೆ ಅಡ್ಡಿ: ಲೋಕಸಭೆಯಿಂದ ಕಾಂಗ್ರೆಸ್‌ನ ಐವರು ಸಂಸದರು ಅಮಾನತು

Published 14 ಡಿಸೆಂಬರ್ 2023, 9:24 IST
Last Updated 14 ಡಿಸೆಂಬರ್ 2023, 9:24 IST
ಅಕ್ಷರ ಗಾತ್ರ

ನವದೆಹಲಿ: ಕಲಾಪಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್‌ನ ಐವರು ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಲೋಕಸಭೆಯಿಂದ ಅಮಾನತು ಮಾಡಲಾಗಿದೆ.

ಐವರು ಸಂಸದರನ್ನು ಅಮಾನತು ಮಾಡುವ ನಿರ್ಣಯವನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಂಡಿಸಿದರು. ನಿರ್ಣಯಕ್ಕೆ ಧ್ವನಿಮತದ ಅಂಗೀಕಾರ ಲಭಿಸಿತು.

ಟಿ.ಎನ್ ಪ್ರತಾಪ‍ನ್, ಹೈಬಿ ಈಡನ್, ಜ್ಯೋತಿಮಣಿ, ರಮ್ಯಾ ಹರಿದಾಸ್ ಹಾಗೂ ಡೀನ್ ಕುರಿಯಕೋಸ್ ಅಮಾನತಾದವರು.

ಈ ಪೈಕಿ ಜ್ಯೋತಿಮಣಿ ತಮಿಳುನಾಡಿನವರು. ಉಳಿದವರೆಲ್ಲರೂ ಕೇರಳದ ವಿವಿಧ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಸದನ ಹಾಗೂ ಪೀಠದ ಅಧಿಕಾರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರಿಂದ ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ಅಮಾನತು ಮಾಡಲು ಇವರ ಹೆಸರನ್ನು ಪೀಠವೇ ಸೂಚಿಸಿತ್ತು. ಅಮಾನತು ನಿರ್ಣಯ ಮಂಡಿಸುವಾಗ ಬಿಜೆಡಿ ಸಂಸದ ಬಿ. ಮಹ್ತಾಬ್ ಅವರು ಸ್ಪೀಕರ್ ಪೀಠದಲ್ಲಿ ಆಸೀನರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT