ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೂಲ್ ಬಳಿಕ ಗುಜರಾತ್ ಮೆಣಸಿನಕಾಯಿ ರಾಜ್ಯಕ್ಕೆ ಲಗ್ಗೆ: ಕಾಂಗ್ರೆಸ್ ವಾಗ್ದಾಳಿ  

Last Updated 14 ಏಪ್ರಿಲ್ 2023, 13:38 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಗೂ ಅಮೂಲ್‌ ಹಾಲಿನ ವಿಚಾರದ ಚರ್ಚೆಯ ನಂತರ ಇದೀಗ ಗುಜರಾತಿನ ಮೆಣಸಿನಕಾಯಿ ರಾಜ್ಯಕ್ಕೆ ಲಗ್ಗೆ ಇಟ್ಟಿರುವುದನ್ನು ಕಾಂಗ್ರೆಸ್ ಖಾರವಾಗಿಯೇ ಪ್ರಶ್ನೆಸಿದೆ.

ಗುಜರಾತಿನ ಮೆಣಸಿನಕಾಯಿ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್‌, ನಂದಿನಿಯ ಹಾಲಿಗೆ ಅಮೂಲ್ ಎಂಬ ಹುಳಿ ಹಿಂಡಿದ ನಂತರ ಗುಜರಾತಿನ ಮೆಣಸಿನಕಾಯಿ ರಾಜ್ಯಕ್ಕೆ ಲಗ್ಗೆ ಇಟ್ಟು, ಕರುನಾಡಿನ ರೈತರಿಗೆ ಸಂಕಷ್ಟ ತಂದೊಡ್ಡಿದೆ ಎಂದು ಟೀಕಿಸಿದೆ.

ಇದೆಲ್ಲದರ ಹಿಂದೆ ಇರುವವರು ಯಾರು? ಮೆಣಸು ಬೆಳೆಯಲ್ಲಿ ಗುಜರಾತಿಗಿಂತ ಕರ್ನಾಟಕವೇ ಮುಂದಿದ್ದರೂ ಅಲ್ಲಿನ ಮೆಣಸನ್ನು ಇಲ್ಲಿಗೆ ತಂದು ರಾಜ್ಯದ ಮಾರುಕಟ್ಟೆಯನ್ನು ಕುಲುಷಿತಗೊಳಿಸುತ್ತಿರುವವರು ಯಾರು? ಎಂದು ಕಾಂಗ್ರೆಸ್‌ ವ್ಯಂಗ್ಯವಾಗಿ ಹೇಳಿದೆ.

ಬ್ಯಾಡಗಿ ಮಾರುಕಟ್ಟೆಯಲ್ಲಿ ಗುಜರಾತಿನ ಪುಪ್ಪ ತಳಿಯ ಮೆಣಸಿನ ಕಾಯಿ ಮಾರಾಟವಾಗುತ್ತಿದೆ ಎಂಬ ವದಂತಿ ಹೆಚ್ಚಾಗಿದ್ದು, ಇದು ಮತ್ತೊಂದು ಚರ್ಚೆಗೆ ಕಾರಣವಾಗಲಿದೆ ಎಂಬ ಅನುಮಾನ ಹುಟ್ಟುಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT