ಕೆಲಸ ಮಾಡುತ್ತಿದ್ದ ಬ್ಯಾಂಕ್ನ ಚಿನ್ನಕ್ಕೇ ಕನ್ನ

ದಾವಣಗೆರೆ: ಕೆಲಸ ಮಾಡುತ್ತಿದ್ದ ಬ್ಯಾಂಕ್ನಲ್ಲಿ ಗ್ರಾಹಕರು ಅಡ ಇರಿಸಿದ್ದ ಚಿನ್ನಾಭರಣವನ್ನು ಕದ್ದು ಬೇರೆ ಬ್ಯಾಂಕ್ಗಳಲ್ಲಿ ಅಡವಿಟ್ಟು ₹2 ಕೋಟಿಗೂ ಅಧಿಕ ಸಾಲ ಪಡೆದು ‘ಲಕ್ಕಿ ಭಾಸ್ಕರ’ ಸಿನಿಮಾ ನಾಯಕನಂತೆ ದಿಢೀರ್ ಶ್ರೀಮಂತನಾಗಲು ಯತ್ನಿಸಿದ ಬ್ಯಾಂಕ್ ಅಧಿಕಾರಿಯೊಬ್ಬರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ನಗರದ ಕ್ಯಾಥೊಲಿಕ್ ಸಿರಿಯನ್ ಬ್ಯಾಂಕ್ನ ಚಿನ್ನಾಭರಣ ಸಾಲ ವಿಭಾಗದ ಅಧಿಕಾರಿ ಟಿ.ಪಿ. ಸಂಜಯ್ (33) ಬಂಧಿತ ಆರೋಪಿ. ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ನಿಂದ ಚಿನ್ನಾಭರಣ ಕದ್ದು, ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಅಡವಿಟ್ಟಿದ್ದರು. ಹೀಗೆ ಬೇರೆ ಬ್ಯಾಂಕ್ಗಳಲ್ಲಿ ಅಡವಿಟ್ಟಿದ್ದ 3 ಕೆ.ಜಿ 643 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜೊತೆಗೆ, ಉದ್ಯೋಗದಲ್ಲಿದ್ದ ಬ್ಯಾಂಕಿನಲ್ಲಿ ಸ್ನೇಹಿತರು ಹಾಗೂ ಸಂಬಂಧಿಕರ ಹೆಸರಿನಲ್ಲಿ 2 ಕೆ.ಜಿ. 744 ಗ್ರಾಂ ನಕಲಿ ಚಿನ್ನಾಭರಣವನ್ನು ತಾನೇ ಅಡವಿಟ್ಟುಕೊಂಡು ₹1.52 ಕೋಟಿ ಸಾಲ ಪಡೆದಿದ್ದ ಸಂಗತಿ ಕೂಡ ತನಿಖೆ ವೇಳೆ ಬೆಳಕಿಗೆ ಬಂದಿದೆ.

‘ಆರೋಪಿ 2024ರ ಅಕ್ಟೋಬರ್ನಿಂದ ಕ್ಯಾಥೊಲಿಕ್ ಸಿರಿಯನ್ ಬ್ಯಾಂಕ್ನ ಚಿನ್ನ ಸಾಲದ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಚಿನ್ನಾಭರಣವನ್ನು ಪರಿಶೀಲಿಸಿ ಅಡವಿಟ್ಟುಕೊಂಡು ದಾಖಲೆಗಳನ್ನು ಸೃಜಿಸುವುದು ಆರೋಪಿಯ ಜವಾಬ್ದಾರಿಯಾಗಿತ್ತು. ಇದೇ ಅವಕಾಶವನ್ನು ಬಳಸಿಕೊಂಡು ಅಸಲಿ ಚಿನ್ನಾಭರಣವನ್ನು 6 ತಿಂಗಳಲ್ಲಿ ಹಂತಹಂತವಾಗಿ ಕಳವು ಮಾಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಕಳವು ಮಾಡಿದ ಚಿನ್ನವನ್ನು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಖಾಸಗಿ ಫೈನಾನ್ಸ್ನಲ್ಲಿ ತಂದೆ, ತಾಯಿ ಹಾಗೂ ತನ್ನ ಹೆಸರಿನಲ್ಲಿ ಅಡವಿಟ್ಟು ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದರು. ಆನ್ಲೈನ್ ಜೂಜು ಹಾಗೂ ಮೋಜು– ಮಸ್ತಿಗೆ ಬಹುತೇಕ ಹಣವನ್ನು ಖರ್ಚು ಮಾಡಿದ್ದಾರೆ. ಗೋವಾ ಮತ್ತಿತರ ಕಡೆ ಪ್ರವಾಸಕ್ಕೆ ತೆರಳಿ ದುಂದುವೆಚ್ಚ ಮಾಡಿದ್ದಾರೆ’ ಎಂದು ವಿವರಿಸಿದರು.

‘ಬ್ಯಾಂಕ್ನ ಅಧಿಕಾರಿಗಳು ಏಪ್ರಿಲ್ನಲ್ಲಿ ಚಿನ್ನಾಭರಣ ಸಾಲದ ಲೆಕ್ಕ ಪರಿಶೋಧನೆ ನಡೆಸಿದಾಗ ಗ್ರಾಹಕರು ಅಡವಿಟ್ಟಿದ್ದ ಚಿನ್ನ ಕಳವಾಗಿರುವುದು ಗೊತ್ತಾಗಿತ್ತು. ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದ ಇತರ ಅಧಿಕಾರಿಗಳು ಕೆ.ಟಿ.ಜೆ ನಗರ ಠಾಣೆಯ ಮೆಟ್ಟಿಲೇರಿದ್ದರು. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿದ ಚಿನ್ನಾಭರಣವನ್ನು ಬೇರೆಡೆ ಅಡವಿಟ್ಟದ್ದು ಗೊತ್ತಾಯಿತು. ನ್ಯಾಯಾಲಯದ ಅನುಮತಿ ಪಡೆದು ಆಯಾ ಬ್ಯಾಂಕ್ಗಳು ಮತ್ತು ಫೈನಾನ್ಸ್ ಕಂಪನಿಗಳಿಂದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಅವರು ವಿವರಿಸಿದರು.

ಬಿಸಿಎ ಪದವೀಧರನಾಗಿರುವ ಆರೋಪಿ ಸಂಜಯ್, ಇದಕ್ಕಿಂತ ಮೊದಲು ಖಾಸಗಿ ಫೈನಾನ್ಸ್ ಕಂಪನಿಗಳಲ್ಲಿ ಚಿನ್ನಾಭರಣ ಸಾಲ ಅಡವಿಟ್ಟುಕೊಳ್ಳುವ ಕೆಲಸ ಮಾಡುತ್ತಿದ್ದರು. ಕಳೆದ ವರ್ಷವಷ್ಟೇ ಆರೋಪಿಗೆ ಕ್ಯಾಥೊಲಿಕ್ ಸಿರಿಯನ್ ಬ್ಯಾಂಕ್ನಲ್ಲಿ ಉದ್ಯೋಗ ದೊರೆತಿತ್ತು. ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಮಾಣದ ಚಿನ್ನಾಭರಣ ಅಡ ಇರಿಸಿಕೊಂಡು ಸಾಲ ವಿತರಿಸಿದ ಬಗ್ಗೆ ಬ್ಯಾಂಕ್ ಮೆಚ್ಚುಗೆ ಸೂಚಿಸಿತ್ತು. ಕೃತ್ಯದ ಬಗ್ಗೆ ಅನುಮಾನ ಮೂಡದಂತೆ ಆರೋಪಿ ವರ್ತಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹಂತಹಂತವಾಗಿ 6 ತಿಂಗಳಲ್ಲಿ ಚಿನ್ನಾಭರಣ ಕಳವು | ಚಿನ್ನ ಸಾಲದ ಲೆಕ್ಕ ಪರಿಶೋಧನೆ ವೇಳೆ ಕೃತ್ಯ ಬಯಲು | ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳಿಂದ ಸಿಕ್ಕ ಸುಳಿವು

ನಕಲಿ ಚಿನ್ನ ಅಡವಿಟ್ಟು ಸಾಲ

ಆರೋಪಿಯು ಅತ್ಯಂತ ಕಡಿಮೆ ಅವಧಿಯಲ್ಲಿ ಬ್ಯಾಂಕ್ನ ಎಲ್ಲ ಅಧಿಕಾರಿಗಳ ವಿಶ್ವಾಸ ಗಳಿಸಿದ್ದರು. ಚಿನ್ನಾಭರಣ ಸಾಲಕ್ಕೆ ಸಂಬಂಧಿಸಿದ ಎಲ್ಲ ಜವಾಬ್ದಾರಿಯನ್ನು ಪಡೆದುಕೊಂಡಿದ್ದರು. ಇದೇ ಅವಕಾಶವನ್ನು ಬಳಸಿಕೊಂಡು ನಕಲಿ ಚಿನ್ನವನ್ನು ಅಡವಿಟ್ಟುಕೊಂಡು ತಾನೇ ಸಾಲ ಪಡೆದಿದ್ದ ಸಂಗತಿ ತನಿಖೆಯ ವೇಳೆ ಪತ್ತೆಯಾಗಿದೆ. ‘ಸ್ನೇಹಿತರು ಹಾಗೂ ಸಂಬಂಧಿಕರ ಹೆಸರಿನಲ್ಲಿ ಹಂತ–ಹಂತವಾಗಿ ನಕಲಿ ಚಿನ್ನಾಭರಣಗಳನ್ನು ತನ್ನದೇ ಬ್ಯಾಂಕಿನಲ್ಲಿ ಅಡವಿಟ್ಟುಕೊಂಡಿದ್ದರು. ಚಿನ್ನಾಭರಣ ಪರಿಶೀಲನೆ ದಾಖಲೆಗಳ ಸೃಷ್ಟಿಯ ಕೆಲಸವನ್ನು ನಿರ್ವಹಿಸಿದ್ದರು. ಇಂತಹ 2 ಕೆ.ಜಿ 744 ಗ್ರಾಂ ನಕಲಿ ಚಿನ್ನಾಭರಣವನ್ನು ಅಡವಿಟ್ಟು ₹1.52 ಕೋಟಿ ಸಾಲ ಪಡೆದಿದ್ದರು’ ಎಂದು ಪೊಲೀಸರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.