ಕ್ವಾಲಾಲಂಪುರ (ಮಲೇಷ್ಯಾ): ಭಯೋತ್ಪಾದನೆ ವಿರುದ್ಧ ಜಾಗತಿಕ ಸಮುದಾಯ ಒಮ್ಮತದ ನಿಲುವು ಹೊಂದಿರಬೇಕು ಎಂದು ಒತ್ತಿ ಹೇಳಿರುವ ಸರ್ವಪಕ್ಷಗಳ ಸಂಸದರ ನಿಯೋಗಗಳು, ಭಾರತವು ಪಾಕಿಸ್ತಾನದೊಂದಿಗೆ ಭವಿಷ್ಯದಲ್ಲಿ ನಡೆಸುವ ಮಾತುಕತೆಗಳು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ವಾಪಸ್ ಪಡೆಯುವುದಕ್ಕಷ್ಟೇ ಸೀಮಿತವಾಗಿರಲಿವೆ ಎಂದು ಭಾನುವಾರ ಹೇಳಿವೆ.

ನಿಯೋಗದಲ್ಲಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಅಭಿಷೇಕ್ ಬ್ಯಾನರ್ಜಿ ಅವರು, ಕ್ವಾಲಾಲಂಪುರದಲ್ಲಿ ಭಾರತ ಮೂಲದವರೊಂದಿಗಿನ ಸಂವಾದ ನಡೆಸುತ್ತಾ, ಪಾಕ್ ಜೊತೆಗಿನ ಮುಂದಿನ ಮಾತುಕತೆಗಳು ಪಿಒಕೆಯನ್ನು ಹಿಂಪಡೆಯುವುದಕ್ಕಷ್ಟೇ ಸೀಮಿತವಾಗಿರಬೇಕು ಎಂದು ಹೇಳಿದ್ದಾರೆ.

'ಹಲವು ಸರ್ಕಾರಗಳು ಬದಲಾಗಿದ್ದರೂ, ದಶಕಗಳಿಂದಲೂ ಅವರೊಂದಿಗೆ (ಪಾಕ್ ಜೊತೆ) ಮಾತುಕತೆ ನಡೆಸುತ್ತಲೇ ಇದ್ದೇವೆ. ಆದಾಗ್ಯೂ ಪಾಕ್ ಜೊತೆಗಿನ ಸಂಘರ್ಷ ಹಾಗೆಯೇ ಇದೆ. ಏಪ್ರಿಲ್ 22ರಂದು 26 ಜನರನ್ನು ಅವರ ಧರ್ಮ ಹಾಗೂ ಲಿಂಗದ ಆಧಾರದಲ್ಲಿ ಹತ್ಯೆ ಮಾಡಿದ ನಂತರ ಏನಾಯಿತು? ಕೇಂದ್ರ ಸರ್ಕಾರವು ಪಿಒಕೆಯನ್ನು ಹಿಂಪಡೆಯುವ ಕುರಿತಷ್ಟೇ ಪಾಕಿಸ್ತಾನ ಜೊತೆ ಚರ್ಚಿಸಬೇಕೆಂದು ಬಯಸುತ್ತೇನೆ. ಇಲ್ಲದಿದ್ದರೆ, ಭಯೋತ್ಪಾದನಾ ದಾಳಿಗಳು ಮುಂದುವರಿಯುತ್ತವೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಬ್ಯಾನರ್ಜಿ ಅವರು ಜೆಡಿಯು ಸಂಸದ ಸಂಜಯ್ ಕುಮಾರ್ ಝಾ ನೇತೃತ್ವದ ನಿಯೋಗದಲ್ಲಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ಏಪ್ರಿಲ್ 22ರಂದು ಉಗ್ರರು ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಭಾರತೀಯ ಸೇನಾಪಡೆಗಳು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿದ್ದವು. ಇದರ ಬೆನ್ನಲ್ಲೇ, ಪಾಕ್ ಸೇನೆ ಗಡಿಯುದ್ದಕ್ಕೂ ದಾಳಿ ನಡೆಸಿತ್ತು. ಇದರಿಂದಾಗಿ, ಉಭಯ ರಾಷ್ಟ್ರಗಳ ನಡುವೆ ಸಂಘರ್ಷದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ, ಕದನ ವಿರಾಮ ಒಪ್ಪಂದ ಜಾರಿಯಲ್ಲಿದೆ.

ಇದೀಗ ಕೇಂದ್ರ ಸರ್ಕಾರವು, ಭಯೋತ್ಪಾದನೆಗೆ ಪ್ರಾಯೋಜಕತ್ವ ವಹಿಸಿರುವ ಪಾಕಿಸ್ತಾನದ ಮುಖವನ್ನು ಜಾಗತಿಕ ಮಟ್ಟದಲ್ಲಿ ಬಯಲು ಮಾಡುವ ಸಲುವಾಗಿ ಸರ್ವಪಕ್ಷಗಳ ಸಂಸದರನ್ನೊಳಗೊಂಡ 7 ನಿಯೋಗಗಳನ್ನು ರಚಿಸಿದೆ.

ಭಾನುವಾರ ಅಲ್ಜೀರಿಯಾ ಭೇಟಿ ಪೂರ್ಣಗೊಳಿಸಿರುವ ಈ ನಿಯೋಗ, 'ಭಯೋತ್ಪಾದನೆಯು ಜಾಗತಿಕ ಪಿಡುಗಾಗಿದ್ದು, ಇದರ ವಿರುದ್ಧ ಇಡೀ ಮನುಕುಲ ಒಗ್ಗಟ್ಟಿನಿಂದ ಹೋರಾಡಬೇಕು' ಎಂಬ ಸಂದೇಶ ಸಾರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.