ನೇಪಲ್ಸ್: ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಯುದ್ಧ ಆರಂಭವಾಗುವುದಕ್ಕೂ ಕೆಲವೇ ತಿಂಗಳು ಮುಂಚೆ ಹುಟ್ಟಿ, ಈಗ ಎರಡು ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಶಾಮ್ ಖುದೇ ಎಂಬ ಹೆಣ್ಣುಮಗುವಿಗೆ ಇಟಲಿಯ ಆಸ್ಪತ್ರೆಯಲ್ಲಿ ಆರೈಕೆ ನಡೆಯುತ್ತಿದೆ.

ಹುಟ್ಟಿನಿಂದಲೇ ಆಕೆಗೆ ಪಚನ ಸಂಬಂಧಿ ಕಾಯಿಲೆ ಇತ್ತು. ಯುದ್ಧ ಆರಂಭವಾದ ಬಳಿಕ ಈ ಕುಟುಂಬವು ಹಲವು ಬಾರಿ ಅಲ್ಲಿಂದ ಇಲ್ಲಿಗೆ ಓಡಾಡಿ, ನಿರಾಶ್ರಿತರಾಗಿದ್ದಾರೆ. ಮಗುವಿಗೆ ಪೌಷ್ಠಿಕ ಊಟವನ್ನೇ ನೀಡಲು ಕುಟುಂಬಕ್ಕೆ ಸಾಧ್ಯವಾಗಿರಲಿಲ್ಲ.

ಚರ್ಮವು ಮೂಳೆಗೆ ಅಂಟಿ ಹೋಗಿ, ಎದೆಗೂಡಿನ ಮೂಳೆಗಳು ಹೊರಗೆ ಬಂದಿದ್ದ ಸ್ಥಿತಿಯಲ್ಲಿ ಶಾಮ್ಳನ್ನು ಕೆಲವು ವಾರಗಳ ಹಿಂದಷ್ಟೇ ಇಟಲಿ ಆಸ್ಪತ್ರೆಗೆ ಕರೆತರಲಾಗಿತ್ತು. ಈಕೆಯೊಂದಿಗೆ ಗಾಜಾದ ಇನ್ನೂ 181 ಮಕ್ಕಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಾಮ್ ಈಗ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದಾಳೆ. ಆಸ್ಪತ್ರೆಗೆ ಬರುವಾಗ ಅಮ್ಮನ ಎದೆಗವಚಿಕೊಂಡು ಬಂದಿದ್ದ ಇವಳು 4 ಕೆ.ಜಿ. ಇದ್ದಳು. ಈಗ ಒಂದು ವಾರದಲ್ಲಿ 5.5 ಕೆ.ಜಿ ಆಗಿದ್ದಾಳೆ. ಅಮ್ಮ, ಅಕ್ಕ ಕರೆದರೆ ನಗುತ್ತಾಳೆ. ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.