ಲಾಸ್ ಏಂಜಲೀಸ್/ಮೆಲ್ಬರ್ನ್: ಲಾಸ್ ಏಂಜಲೀಸ್ನ ಕಾಳ್ಗಿಚ್ಚು ದುರಂತದಲ್ಲಿ ಒಟ್ಟು 11 ಮಂದಿ ಮೃತಪಟ್ಟಿದ್ದು ಹಲವರು ಕಾಣೆಯಾಗಿದ್ದಾರೆ. ಕಾಣೆಯಾದವರ ಬಗ್ಗೆ ದೂರು ನೀಡಲು ನಗರದಲ್ಲಿ ಕೇಂದ್ರವೊಂದನ್ನು ಸ್ಥಾಪಿಸಲಾಗಿದೆ. ಲಾಸ್ ಏಂಜಲೀಸ್ನಲ್ಲಿ ಕಳೆದು ಎಂಟು ತಿಂಗಳಿಂದ ಒಮ್ಮೆಯೂ ಮಳೆ ಸುರಿದಿಲ್ಲ.

‘ಶುಕ್ರವಾರವೂ ನಗರದಾದ್ಯಂತ ಅಲ್ಲಲ್ಲಿ ಸಣ್ಣ ಸಣ್ಣ ಕಾಳ್ಗಿಚ್ಚು ಹಬ್ಬಿದ ಪ್ರಕರಣಗಳು ನಡೆದಿವೆ. ಅವುಗಳನ್ನು ನಂದಿಸಲಾಗಿದೆ’ ಎಂದು ಲಾಸ್ ಏಂಜಲೀಸ್ನ ಮೇಯರ್ ಕ್ಯಾರೆನ್ ಬಾಸ್ ಮಾಹಿತಿ ನೀಡಿದರು. ಐದು ಪ್ರದೇಶಗಳಲ್ಲಿ ಹಬ್ಬಿದ ಕಾಳ್ಗಿಚ್ಚು ವ್ಯಾಪಿಸುತ್ತಲೇ ಇದೆ. ಇನ್ನೂ ಸಾವಿರಾರು ಜನರನ್ನು ಸರ್ಕಾರ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುತ್ತಿದೆ.

‘ಸಂತಾ ಆನಾ’ ಗಾಳಿಯ ವೇಗವು ತಗ್ಗುತ್ತಿಲ್ಲ. ಬೆಂಕಿಯು ವ್ಯಾಪಿಸದಂತೆ ತಡೆಯಲು ಹೆಲಿಕಾಪ್ಟರ್ ಮೂಲಕ ರಾಸಾಯನಿಕವನ್ನು ಹಿಂಪಡಿಸಲಾಗುತ್ತಿದೆ. ಈಟನ್ ಕೆಯಾನ್ನಲ್ಲಿ ಹಬ್ಬಿದ ಕಾಳ್ಗಿಚ್ಚು ನಿಯಂತ್ರಣಕ್ಕೆ ಬರುತ್ತಿಲ್ಲ. ಮಂಗಳವಾರ ಹತ್ತಿದ ಬೆಂಕಿಯನ್ನು ನಂದಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಶೇ 3ರಷ್ಟು ಪ್ರದೇಶದಲ್ಲಿನ ಬೆಂಕಿಯನ್ನು ಮಾತ್ರ ಶುಕ್ರವಾರ ನಂದಿಸಲಾಗಿದೆ.

ಹೊಗೆಯಾಡುತ್ತಿರುವ ಮನೆಗಳು...

ಎರಡು ಜೊತೆ ಬಟ್ಟೆ ಮಗು ಗಂಡನೊಂದಿಗೆ ಮಂಗಳವಾರ ಮನೆ ತೊರೆದಿದ್ದ ಬ್ರಿಗೆಟ್ ಬರ್ಗ್ ಶುಕ್ರವಾರ ತನ್ನ ಹೊಗೆಯಾಡುತ್ತಿರುವ ಮನೆಯ ಮುಂದೆ ನಿಂತಾಗ ಕಣ್ಣೀರಾದರು. ಮನೆ ಸುಟ್ಟ ಬೆಂಕಿ ಇನ್ನೂ ನಂದಿರಲಿಲ್ಲ ಆಕೆಯ ಒಡಲಬೆಂಕಿ ಕೂಡ. ಇದು ಬ್ರಿಗೆಟ್ನ ಕಥೆ ಮಾತ್ರವಲ್ಲ ಲಾಸ್ ಏಂಜಲೀಸ್ನ ನೂರಾರು ಕುಟುಂಬಗಳ ಕಥೆ. ಟಿ.ವಿ.ಗಳ ಮುಂದೆ ಕೂತು ತಮ್ಮ ಮನೆ ಭಸ್ಮವಾಗುವುದನ್ನು ಕಂಡಿದ್ದ ಕುಟುಂಬಗಳು ಬೆಂಕಿಯ ತಾಪ ತುಸು ಕಡಿಮೆಯಾಗುತ್ತಲೇ ಮನೆಗಳ ಬಳಿಗೆ ಬರುತ್ತಿದ್ದಾರೆ. ಮನೆಯೊಂದಿಗಿನ ನೆನಪುಗಳು ಸುರುಳಿಯಾಗಿ ತಲೆಯಲ್ಲಿ ಸುತ್ತುತ್ತಿದ್ದರೆ ಸುಟ್ಟು ಭಸ್ಮವಾದ ಮನೆಯ ಅಳಿದುಳಿದ ವಸ್ತುಗಳನ್ನು ತೆಗೆದುಕೊಳ್ಳುವತ್ತ ಕೈ ಮುಂದಾಗುತ್ತಿತ್ತು.

2024: ಅತೀ ಬಿಸಿಯ ವರ್ಷ

‘2024ನೇ ಇಸವಿಯು ಅತ್ಯಂತ ಬಿಸಿಯ ವರ್ಷಾವಾಗಿತ್ತು’ ಎಂದು ಐರೋಪ್ಯ ಒಕ್ಕೂಟದ ‘ಕೊಪರ್ನಿಕಸ್ ಕ್ಲೈಮೇಟ್ ಚೇಂಚ್ ಸರ್ವೀಸ್’ ಸಂಸ್ಥೆಯು ಶುಕ್ರವಾರ ಘೋಷಿಸಿದೆ. 1850ರಲ್ಲಿ ಜಾಗತಿಕ ತಾಪಮಾನ ದಾಖಲಾತಿ ಆರಂಭಿಸಿದ ನಂತರ ಕೈಗಾರಿಕಾಪೂರ್ವ ಕಾಲದ ಜಾಗತಿಕ ತಾಪಮಾನಕ್ಕಿಂತ ಸರಾಸರಿ 1.5 ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ತಾಪಮಾನವು 2024ರಲ್ಲಿ ದಾಖಲಾಗಿದೆ ಎಂದು ಸಂಸ್ಥೆ ಹೇಳಿದೆ. 1.6 ಡಿಗ್ರಿ ಸೆಲ್ಸಿಯಸ್ನಷ್ಟು ಜಾಗತಿಕ ತಾಪಮಾನವನ್ನು 2024ನೇ ಇಸವಿ ದಾಖಲಿಸಿತ್ತು ಎಂದು ಸಂಸ್ಥೆ ಹೇಳಿದೆ. ಒಂದೆಡೆ ಲಾಸ್ ಏಂಜಲೀಸ್ನಲ್ಲಿ ಹಬ್ಬುತ್ತಿರುವ ಕಾಳ್ಗಿಚ್ಚಿಗೆ ಹವಾಮಾನ ವೈಪರಿತ್ಯವೇ ಮುಖ್ಯ ಕಾರಣ ಎಂದು ವಿಜ್ಞಾನಿಗಳು ಹೇಳುತ್ತಿದ್ದರೆ ಇನ್ನೊಂದೆಡೆ ಜಾಗತಿಕ ತಾಪಮಾನವು ಏರಿಕೆಯಾಗುತ್ತಿದೆ. 2024ರ ಜುಲೈ 22ರಂದು ನಿತ್ಯದ ಜಾಗತಿಕ ತಾಪಮಾನದ ಸರಾಸರಿಯು 17.16 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಇದು ಕೂಡ ದಾಖಲೆಯೇ ಆಗಿತ್ತು. ‘ಕಳೆದ ಒಂದು ದಶಕಗಳಲ್ಲಿ ಪ್ರತೀ ವರ್ಷವೂ ಜಾಗತಿಕ ತಾಪಮಾನ ಏರಿಕೆಯು ದಾಖಲೆಯನ್ನೇ ಬರೆದಿದೆ’ ಎಂದು ಸಂಸ್ಥೆ ಹೇಳಿದೆ.

ಪ್ಯಾರಿಸ್ ಒಪ್ಪಂದಕ್ಕೆ ಸೋಲಾಯಿತೇ?

ಜಾಗತಿಕ ತಾಪಮಾನ ಸರಾಸರಿಯು 1.5 ಡಿಗ್ರಿ ಸೆಲ್ಸಿಯಸ್ಗಿಂತ ಅಧಿಕವಾಗುವುದನ್ನು ತಡೆಯಬೇಕು ಎಂಬುದು ಪ್ಯಾರಿಸ್ ಒಪ್ಪಂದದ ಮೂಲ ಉದ್ದೇಶವಾಗಿತ್ತು. ಈಗ ಜಗತ್ತು ಈ ಮಿತಿಯನ್ನು ದಾಟಿದೆ. ಹಾಗಾದರೆ ಒಪ್ಪಂದವನ್ನು ಪಾಲಿಸುವಲ್ಲಿ ಎಲ್ಲ ದೇಶಗಳು ಸೋತಿವೆಯೇ ಎನ್ನುವ ಪ್ರಶ್ನೆ ಮೂಡುತ್ತಿದೆ. ಒಂದರ್ಥದಲ್ಲಿ ದೇಶಗಳು ಸೋತಿರುವುದು ನಿಜವೇ ಆಗಿದೆ.

‘ಆದರೆ ಈಗಲೇ ಎಲ್ಲವೂ ಅಂತ್ಯವಾಗಿಲ್ಲ. ಒಂದು ವರ್ಷದ ಜಾಗತಿಕ ತಾಪಮಾನದ ಸರಾಸರಿಯನ್ನು ಮಾತ್ರವೇ ಪರಿಗಣಿಸಿ ಚರ್ಚೆ ಮಾಡುವುದು ಸರಿಯಲ್ಲ. ಪ್ಯಾರಿಸ್ ಒಪ್ಪಂದವು ಒಂದು ವರ್ಷದ ಸರಾಸರಿಯನ್ನು ಮಾತ್ರವೇ ಪರಿಗಣಿಸುವುದಿಲ್ಲ. ಇದೊಂದು ಸುದೀರ್ಘ ಪಯಣ. ಆದರೆ ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು ನಾವು ಇನ್ನೂ ಹೆಚ್ಚಿನ ಶ್ರಮ ಹಾಕಬೇಕು ಎಂಬುದನ್ನು 2024ನೇ ಇಸವಿಯು ಸಾಬೀತುಮಾಡಿದೆ’ ಎನ್ನುತ್ತಾರೆ ವಿಜ್ಞಾನಿಗಳು.

‘ಹಸಿರುಮನೆ ಅನಿಲ ಸೋರಿಕೆಗೆ ಇಂಬು ನೀಡುವಂಥ ನಮ್ಮ ನಿತ್ಯದ ಕಾರ್ಯಚಟುವಟಿಕೆಗಳೂ ಜಾಗತಿಕ ತಾಪಮಾನ ಏರಿಕೆಗೆ ಒಂದೊಂದೇ ಕಾರಣಗಳಾಗುತ್ತವೆ ಎಂಬುದನ್ನು ಮರೆಯಬಾರದು’ ಎಂದೂ ವಿಜ್ಞಾನಿಗಳು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.