ಬೆಂಗಳೂರು: ದುಬೈನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಕ್ರಿಕೆಟ್ ತಂಡದ ‘ರನ್ ಮಷಿನ್’ ಖ್ಯಾತಿಯ ವಿರಾಟ್ ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಅವರ ಹೆಸರಿಗೆ ಅನೇಕ ದಾಖಲೆಗಳು ಸೇರ್ಪಡೆಗೊಂಡಿವೆ.

51: ಏಕದಿನ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಅವರ ದಾಖಲೆಯ ಶತಕಗಳು. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (49) ನಂತರದ ಸ್ಥಾನದಲ್ಲಿದ್ದಾರೆ.

ಏಕದಿನ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ 287 ಇನಿಂಗ್ಸ್ಗಳಲ್ಲಿ 14 ಸಾವಿರ ರನ್ ಪೂರೈಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 14000 ರನ್ ಕಲೆಹಾಕಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

158: ಏಕದಿನ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಪಡೆದ ಒಟ್ಟು ಕ್ಯಾಚ್ಗಳು. ಈ ಮೂಲಕ ಭಾರತದ ಮೊಹಮ್ಮದ್ ಅಜರುದ್ದೀನ್ (156) ದಾಖಲೆಯನ್ನು ಮೀರಿ ನಿಂತರು. ಶ್ರೀಲಂಕಾದ ಮಹೇಲ ಜಯವರ್ಧನೆ (218) ಮತ್ತು ರಿಕಿ ಪಾಟಿಂಗ್ (160) ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದ್ದಾರೆ.

5: ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ಪಡೆದ ‘ಪಂದ್ಯದ ಆಟಗಾರ’ ಗೌರವ. ಯಾವುದೇ ದೇಶದ ಆಟಗಾರ ಒಂದೇ ತಂಡದ ವಿರುದ್ಧ ಮೂರಕ್ಕಿಂತ ಅಧಿಕ ಬಾರಿ ಈ ಗೌರವ ಗಳಿಸಿಲ್ಲ.

11: ಏಕದಿನ ಕ್ರಿಕೆಟ್ನಲ್ಲಿ ಒಂದೇ ಓವರ್ನಲ್ಲಿ ಗರಿಷ್ಠ ಎಸೆತ ಬೌಲಿಂಗ್ ಮಾಡಿದ ದಾಖಲೆಯನ್ನು ಮೊಹಮ್ಮದ್ ಶಮಿ ಅವರು ಇರ್ಫಾನ್ ಪಠಾಣ್ (2006) ಮತ್ತು ಜಹೀರ್ ಖಾನ್ (2003) ಅವರೊಂದಿಗೆ ಹಂಚಿಕೊಂಡರು.

ದುಬೈಯಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾನುವಾರ ಭಾರತ ತಂಡವು 6 ವಿಕೆಟ್ಗಳಿಂದ ಹಾಲಿ ಚಾಂಪಿಯನ್ ಪಾಕಿಸ್ತಾನ ತಂಡವನ್ನು ಮಣಿಸಿತು. ‘ಎ’ ಗುಂಪಿನಲ್ಲಿರುವ ಉಭಯ ತಂಡಗಳಿಗೂ ಗುಂಪು ಹಂತದಲ್ಲಿ ತಲಾ ಒಂದು ಪಂದ್ಯ ಬಾಕಿ ಇದೆ. ಆದರೆ, ಪಾಕ್ ತಂಡವು ಸತತ ಎರಡೂ ಪಂದ್ಯಗಳಲ್ಲಿ ಸೋತು ಹೊರಬಿದ್ದಿದೆ.

ಆತಿಥೇಯ ಪಾಕ್ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಭಾರತ ತಂಡದ ಬೌಲರ್ಗಳ ದಾಳಿಯ ಎದುರು 241 ರನ್ಗಳ ಸಾಧಾರಣ ಗುರಿಯೊಡ್ಡಿತು. ಏಕದಿನ ಕ್ರಿಕೆಟ್ನಲ್ಲಿ 51ನೇ ಶತಕ ದಾಖಲಿಸಿದ ವಿರಾಟ್ ಕೊಹ್ಲಿ ಶತಕ ಮತ್ತು ಶ್ರೇಯಸ್ ಅಯ್ಯರ್ ಅರ್ಧಶತಕದ ಬಲದಿಂದ ತಂಡವು 42.3 ಓವರ್ಗಳಲ್ಲಿ 4 ವಿಕೆಟ್ಗಳಿಗೆ 244 ರನ್ ಗಳಿಸಿ ಗೆಲುವಿನ ನಗೆ ಬೀರಿತು.
.Champions Trophy: ಗತವೈಭವಕ್ಕೆ ಮರಳಿದ ವಿರಾಟ್ ಕೊಹ್ಲಿ; ಪಾಕಿಸ್ತಾನಕ್ಕೆ ಆಘಾತ.IND vs PAK | ಪಾಕ್ ವಿರುದ್ಧ ಕೊಹ್ಲಿ ಅಬ್ಬರ: ಸಚಿನ್ ಸೇರಿ ಗಣ್ಯರಿಂದ ಮೆಚ್ಚುಗೆ.ಕೊಹ್ಲಿ ರನ್ ಗಳಿಸಲು ಹೆಣಗಾಡುತ್ತಿದ್ದಾರೆಂದು ಎಂದಿಗೂ ಭಾವಿಸಬೇಡಿ: ಅಯ್ಯರ್.IND vs PAK | ಕೊಹ್ಲಿ ಆಟಕ್ಕೆ ಮನಸೋತ ಪತ್ನಿ ಅನುಷ್ಕಾರಿಂದ ಪ್ರೀತಿಯ ಮೆಚ್ಚುಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.