ನವದೆಹಲಿ:ಪಾಕಿಸ್ತಾನದಲ್ಲಿ ಭಯೋತ್ಪಾದಕರು ಇರುವವರೆಗೂ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಸಾಧ್ಯವೇ ಇಲ್ಲ ಎಂದುಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಚೇತನ್ ಚೌಹಾಣ್ ಹೇಳಿದ್ದಾರೆ.

ಈ ಮೊದಲು ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಎರಡೂ ದೇಶಗಳತಂಡಗಳು ಅಭಿಮಾನಿಗಳನ್ನು ಸೆಳೆಯಲು ಕ್ರಿಕೆಟ್ ಆಡುವತ್ತ ಗಮನ ಹರಿಸಬೇಕು ಎಂದು ಹೇಳಿದ್ದರು. ಅದಕ್ಕೆ ಸಂಬಂಧಿಸಿದಂತೆಚೇತನ್ ಪ್ರತಿಕ್ರಿಯೆ ನೀಡಿದ್ದಾರೆ.

‘ಸದ್ಯದ ಸ್ಥಿತಿಯಲ್ಲಿಭಾರತ–ಪಾಕಿಸ್ತಾನ ದ್ವಿಪಕ್ಷೀಯ ಸರಣಿಗಳನ್ನು ಆಯೋಜಿಸಬಾರದು. ಏಕೆಂದರೆ, ಉಭಯ ದೇಶಗಳ ನಡುವಣ ಸಂಬಂಧ ಉತ್ತಮವಾಗಿಲ್ಲ. ಪಾಕಿಸ್ತಾನದಲ್ಲಿ ಆಡುವುದು ಸುರಕ್ಷಿತವೂ ಅಲ್ಲ. ಉಗ್ರರಿಗೆ ಕ್ರಿಕೆಟ್ ಬಗ್ಗೆ ಕಾಳಜಿಯಿಲ್ಲ. ಎಲ್ಲಿಯವರೆಗೆ ಪಾಕಿಸ್ತಾನದಲ್ಲಿ ಉಗ್ರರು ಇರುತ್ತಾರೋ ಅಲ್ಲಿಯವರೆಗೂ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಕ್ರಿಕೆಟ್ ಆಡಲು ಸಾಧ್ಯವಿಲ್ಲ’ ಎಂದು ಚೇತನ್ ಅಭಿಪ್ರಾಯಪಟ್ಟಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ವೈಟ್ ವಾಷ್ ಆಗಿರುವ ಭಾರತ ತಂಡದ ಬಗ್ಗೆ ಮಾತನಾಡಿರುವ ಅವರು, ಅಜಿಂಕ್ಯ ರಹಾನೆಗೆ ತಂಡದಲ್ಲಿ ಸ್ಥಾನ ನೀಡಬೇಕಿತ್ತು ಎಂದಿದ್ದಾರೆ.

‘ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಗಾಯಾಳಾಗಿ ತಂಡದಿಂದ ಹೊರಗಿರುವಾಗ ತಂಡಕ್ಕೆ ಸ್ಥಿರತೆ ತಂದುಕೊಡಬಲ್ಲ ಅಜಿಂಕ್ಯ ರಹಾನೆಗೆ ಅವಕಾಶಬೇಕು ಎಂದು ನಾನು ಬಯಸುತ್ತೇನೆ’ ಎಂದಿದ್ದಾರೆ.

‘ಏಕದಿನ ಸರಣಿಯಲ್ಲಿ ವೇಗಿ ಜಸ್‌ಪ್ರೀತ್‌ಬೂಮ್ರಾ ದಣಿದಂತೆ ಕಾಣುತ್ತಿದ್ದರು. ಆದಾಗ್ಯೂ ಟೀಂ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಪುಟೆದೇಳುವ ಭರವಸೆ ಇದೆ.ಅನುಭವಿ ರಹಾನೆ ತಂಡ ಕೂಡಿಕೊಳ್ಳಲಿದ್ದಾರೆ. ಆದರೆ, ರೋಹಿತ್ ಮತ್ತು ಧವನ್ ಹೊರಗುಳಿಯಲಿದ್ದಾರೆ’ ಎಂದು ಹೇಳಿದ್ದಾರೆ.

‘ರಿಷಭ್ ಪಂತ್‌ಗೆ ಸಾಕಷ್ಟು ಅವಕಾಶಗಳನ್ನು ನೀಡಲಾಯಿತು. ಅವರು ಉತ್ತಮ ಪ್ರದರ್ಶನ ನೀಡಲೇಬೇಕಿದೆ. ಅವಕಾಶಗಳು ಸಿಕ್ಕಾಗ ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ’ ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.