ದುಬೈ: 2025ನೇ ಸಾಲಿನ ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಹಾಂಗ್ಕಾಂಗ್ ವಿರುದ್ಧ ಅಫ್ಗಾನಿಸ್ತಾನ 94 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ.

ಈ ಪಂದ್ಯದಲ್ಲಿ ಬಿರುಸಿನ ಅರ್ಧಶತಕ ಗಳಿಸಿದ ಅಫ್ಗಾನಿಸ್ತಾನದ ಬ್ಯಾಟರ್ ಅಜ್ಮತ್ವುಲ್ಲಾ ಒಮರ್ಝೈ ನೂತನ ದಾಖಲೆ ಬರೆದಿದ್ದಾರೆ.

ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಅತಿ ವೇಗದ ಅರ್ಧಶತಕ ಗಳಿಸಿದ ಬ್ಯಾಟರ್ ಎಂಬ ಹಿರಿಮೆಗೆ ಒಮರ್ಝೈ ಪಾತ್ರರಾಗಿದ್ದಾರೆ.

ಆ ಮೂಲಕ ಟೀಮ್ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ದಾಖಲೆಯನ್ನು ಮುರಿದಿದ್ದಾರೆ.

2022ರಲ್ಲಿ ದುಬೈಯಲ್ಲಿ ಹಾಂಕ್ಕಾಂಗ್ ವಿರುದ್ಧವೇ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.

ಒಮರ್ಝೈ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ನಂತರದ ಎಸೆತದಲ್ಲಿ ಔಟ್ ಆದರು. ಆ ಮೂಲಕ 21 ಎಸೆತಗಳಲ್ಲಿ ಐದು ಸಿಕ್ಸರ್ ಹಾಗೂ ಎರಡು ಬೌಂಡರಿ ನೆರವಿನಿಂದ 53 ರನ್ ಗಳಿಸಿದರು.

ಅಫ್ಗಾನಿಸ್ತಾನ ಒಡ್ಡಿದ 188 ರನ್ಗಳ ಗುರಿ ಬೆನ್ನಟ್ಟಿದ ಹಾಂಕ್ಕಾಂಗ್ ಒಂಬತ್ತು ವಿಕೆಟ್ ನಷ್ಟಕ್ಕೆ 94 ರನ್ ಗಳಿಸಲಷ್ಟೇ ಸಾಧ್ಯವಾಯಿತು.
.ಏಷ್ಯಾ ಕಪ್: ಅಫ್ಗನ್ಗೆ ಮಣಿದ ಹಾಂಗ್ಕಾಂಗ್.ಏಷ್ಯಾ ಕಪ್ ಕ್ರಿಕೆಟ್|ಭಾರತಕ್ಕೆ ಯುಎಇ ಎದುರಾಳಿ: ಸೂರ್ಯ ಬಳಗಕ್ಕೆ ಪ್ರಯೋಗದ ವೇದಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.