ಗುರುವಾರ , ಮಾರ್ಚ್ 23, 2023
22 °C

Ind VS Eng 4th Test: ಭಾರತ 191ಕ್ಕೆ ಆಲೌಟ್, ಆಂಗ್ಲರಿಗೆ ಆಘಾತ ನೀಡಿದ ಬೂಮ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಓವಲ್: ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 191 ರನ್‌ಗಳಿಗೆ ಆಲೌಟ್ ಆಗಿದೆ.

ನಾಯಕ ವಿರಾಟ್ ಕೊಹ್ಲಿ(50) ಬಿಟ್ಟರೆ ಬೇರೆ ಯಾವ ಅಗ್ರ ಕ್ರಮಾಂಕದ ಆಟಗಾರರಿಂದಲೂ ಹೇಳಿಕೊಳ್ಳುವಂತಹ ಆಟ ಬರಲಿಲ್ಲ. ಕೆ.ಎಲ್. ರಾಹುಲ್ 17, ಅಜಿಂಕ್ಯ ರಹಾನೆ 14, ರೋಹಿತ್ ಶರ್ಮಾ 11 ರನ್ ಗಳಿಸಿದರು. 3ನೇ ಟೆಸ್ಟ್ ಪಂದ್ಯದ ಹೀನಾಯ ಪತನವನ್ನು ಮತ್ತೆ ನೆನಪಿಸಿದರು.

ಇನಿಂಗ್ಸ್ ಅಂತ್ಯದಲ್ಲಿ ಅಬ್ಬರಿಸಿದ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಬ್ಯಾಟ್ಸ್‌ಮನ್‌ಗಳೇ ನಾಚುವಂತೆ ಬ್ಯಾಟ್ ಬೀಸಿದರು. 36 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 7 ಬೌಂಡರಿ ಸಹಿತ 57 ರನ್ ಸಿಡಿಸಿ ತಂಡದ ಮೊತ್ತ 190ರ ಗಡಿ ದಾಟುವಲ್ಲಿ ನೆರವಾದರು.

ಭಾರತದ 191 ರನ್‌ಗೆ ಉತ್ತರವಾಗಿ ಮೊದಲ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ದಿನದಾಟದ ಅಂತ್ಯಕ್ಕೆ 17 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 53 ರನ್‌ ಗಳಿಸಿದೆ.

ಆರಂಭಿಕರಾದ ರೋರಿ ಬರ್ನ್ಸ್ ಮತ್ತು ಹಸೀಬ್ ಹಮೀದ್‌ಗೆ ವೇಗಿ ಜಸ್‌ಪ್ರೀತ್ ಬೂಮ್ರಾ ಪೆವಿಲಿಯನ್ ದಾರಿ ತೋರಿಸಿದ್ದಾರೆ. ಇತ್ತ ನಾಯಕ ಜೋ ರೂಟ್‌ ಅವರನ್ನು ಉಮೇಶ್‌ ಯಾದವ್‌ ಔಟ್‌ ಮಾಡಿದ್ದಾರೆ.

ಸಂಕ್ಷಿಪ್ತ ಸ್ಕೋರ್
ಭಾರತ: ಮೊದಲ ಇನಿಂಗ್ಸ್ 191

ಶಾರ್ದೂಲ್ ಠಾಕೂರ್ – 57

ವಿರಾಟ್ ಕೊಹ್ಲಿ – 50

ಬೌಲಿಂಗ್:
ಕ್ರಿಸ್ ವೋಕ್ಸ್: 55/4

ಒಲಿ ರಾಬಿನ್ಸನ್: 38/3

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು