ಪೋರ್ಟ್ ಆಫ್ ಸ್ಪೇನ್, ಟ್ರಿನಿಡಾಡ್:ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯನ್ನು ಭಾರತ ತಂಡ 2–0 ರನ್ ಅಂತರದಿಂದ ಗೆದ್ದುಕೊಂಡಿದೆ. ಇದರೊಂದಿಗೆ ತಂಡವೊಂದರ ವಿರುದ್ಧ ಸತತ 12 ಸರಣಿ ಜಯಿಸಿದ ವಿಶ್ವದಾಖಲೆ ಬರೆದಿದೆ.

ಇಲ್ಲಿನ ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್, ಶಾಯ್ ಹೋಪ್ ಗಳಿಸಿದ ಶತಕದ ನೆರವಿನಿಂದ 311 ರನ್ ಗಳಿಸಿತ್ತು.

ಈ ಸವಾಲಿನ ಗುರಿ ಬೆನ್ನತ್ತಿದ ಭಾರತ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಶ್ರೇಯಸ್ ಅಯ್ಯರ್ (63), ಸಂಜು ಸಾಮ್ಸನ್ (54) ಹಾಗೂ ಅಕ್ಷರ್ ಪಟೇಲ್(ಅಜೇಯ 64) ಅರ್ಧಶತಕ ಸಿಡಿಸಿ ಇನ್ನೂ 2 ವಿಕೆಟ್ ಬಾಕಿ ಇರುವಂತೆಯೇ ಗೆಲುವು ತಂದುಕೊಟ್ಟರು.

ಟೀಂ ಇಂಡಿಯಾ ವಿಶ್ವದಾಖಲೆ
2007ರಿಂದ ಇಲ್ಲಿಯವರೆಗೆ ವೆಸ್ಟ್ ಇಂಡೀಸ್ ವಿರುದ್ಧ 12 ಬಾರಿ ದ್ವಿಪಕ್ಷೀಯಏಕದಿನ ಸರಣಿಯಲ್ಲಿ ಮುಖಾಮುಖಿಯಾಗಿರುವ ಭಾರತ, ಎಲ್ಲ ಸಲವೂ ಮೇಲುಗೈ ಸಾಧಿಸಿದೆ. ಈ ಮೊದಲು ಯಾವುದೇ ತಂಡ ಮತ್ತೊಂದು ತಂಡದ ವಿರುದ್ಧ ಇಷ್ಟು ಸರಣಿಗಳನ್ನು ಸತತವಾಗಿ ಜಯಿಸಿಲ್ಲ.

ಪಾಕಿಸ್ತಾನ, ಜಿಂಬಾಬ್ವೆ ವಿರುದ್ಧ1996ರಿಂದ 2021ರ ನಡುವೆ 11 ಸರಣಿಗಳನ್ನು ಗೆದ್ದಿದ್ದು ನಂತರದ ಸ್ಥಾನದಲ್ಲಿದೆ.

1999ರಿಂದ 2022ರ ವರೆಗೆ ವೆಸ್ಟ್ ಇಂಡೀಸ್ ವಿರುದ್ಧ ಆಡಿರುವ 10 ಸರಣಿಗಳಲ್ಲಿ ಗೆಲುವು ಸಾಧಿಸಿರುವಪಾಕ್ ಪಡೆಗೆ ದಾಖಲೆ ಮುಂದುವರಿಸುವ ಅವಕಾಶವೂ ಇದೆ.

ಉಳಿದಂತೆ, ದಕ್ಷಿಣ ಆಫ್ರಿಕಾ ತಂಡ (1995-2018) ಜಿಂಬಾಬ್ವೆ ವಿರುದ್ಧ ಹಾಗೂ ಭಾರತ ತಂಡ (2007-2021) ಶ್ರೀಲಂಕಾ ವಿರುದ್ಧ ತಲಾ 9 ಸರಣಿಗಳನ್ನು ಜಯಿಸಿರುವುದೂ ಉತ್ತಮ ದಾಖಲೆಗಳಾಗಿವೆ.

Koo App
An innings to remember from #AxarPatel! Lucky to commentate on the moment with #RaviShastri in the Commentary🎙box @FanCode & as he said, it’s a moment that could define the future of Axar Patel, the Batsman! Another series win for this #TeamIndia who are filled with BELIEF #WIvIND #WIvsIND #INDvWI #CricketOnKoo #Axar #Cricket #ODI
View attached media content
- Suhail Chandhok (@SuhailChandhok) 25 July 2022

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.