ಶುಕ್ರವಾರ, ಮಾರ್ಚ್ 31, 2023
23 °C
ಟಿ20 ಕ್ರಿಕೆಟ್: ಭಾರತ–ನ್ಯೂಜಿಲೆಂಡ್ ಪಂದ್ಯ ಇಂದಿನಿಂದ: ಸೂರ್ಯಕುಮಾರ್ ಮೇಲೆ ಕಣ್ಣು

ಟಿ20 ಕ್ರಿಕೆಟ್: ಭಾರತ–ನ್ಯೂಜಿಲೆಂಡ್ ಸರಣಿ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಂಚಿ: ಏಕದಿನ ಕ್ರಿಕೆಟ್ ಸರಣಿಯಲ್ಲಿ ಭರ್ಜರಿ ಜಯ ಸಾಧಿಸಿದ ಸಂಭ್ರಮದಲ್ಲಿರುವ ಭಾರತ ತಂಡವು ನ್ಯೂಜಿಲೆಂಡ್ ಎದುರಿನ ಟಿ20  ಸರಣಿಯಲ್ಲಿ ಕಣಕ್ಕಿಳಿಯಲಿದೆ. 

ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಯುವ ಆಟಗಾರರು ತಮ್ಮ ಸಾಮರ್ಥ್ಯ ಮೆರೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ. ಮುಂದಿನ ತಿಂಗಳು ಆಸ್ಟ್ರೇಲಿಯಾ ತಂಡವು ಭಾರತದಲ್ಲಿ ಟೆಸ್ಟ್ ಸರಣಿ ಆಡಲಿದೆ.  ಫೆ 2ರಿಂದ ನಾಗಪುರದಲ್ಲಿ ಭಾರತ ತಂಡದ ಶಿಬಿರ ಆರಂಭವಾಗಲಿದೆ.  ಅದರಿಂದಾಗಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. 

ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ಟಿ20 ಸರಣಿಯಲ್ಲಿ ಆಡಿ ನಂತರ ಶಿಬಿರಕ್ಕೆ ಹೋಗಲಿದ್ದಾರೆ. ಏಕದಿನ ಸರಣಿಯಲ್ಲಿ ಒಂದು ದ್ವಿಶತಕ ಹಾಗೂ ಒಂದು ಶತಕ ಹೊಡೆದು ದಾಖಲೆ ಬರೆದಿರುವ ಗಿಲ್ ಮತ್ತು ಐಸಿಸಿ ವರ್ಷದ ಆಟಗಾರ ಗೌರವ ಗಳಿಸಿರುವ ಸೂರ್ಯಕುಮಾರ್ ಕಿವೀಸ್ ಬೌಲಿಂಗ್ ಪಡೆಗೆ ಪ್ರಮುಖ ಸವಾಲಾಗುವ ನಿರೀಕ್ಷೆ ಇದೆ.  ಇಶಾನ್ ಕಿಶನ್, ಹಾರ್ದಿಕ್ ಮತ್ತು ದೀಪಕ್ ಹೂಡಾ ಕೂಡ ಉತ್ತಮ ಲಯದಲ್ಲಿದ್ಧಾರೆ. 

ಆಲ್‌ರೌಂಡರ್ ಮಿಚೆಲ್ ಸ್ಯಾಂಟನರ್ ಈ ಸರಣಿಯಲ್ಲಿ ಕಿವೀಸ್ ಬಳಗವನ್ನು ಮುನ್ನಡೆಸಲಿದ್ದಾರೆ. ಡೆವೊನ್ ಕಾನ್ವೆ, ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್  ಮತ್ತು ಗ್ಲೆನ್ ಫಿಲಿಪ್ಸ್‌ ಮೇಲೆ ಕಿವೀಸ್ ಬ್ಯಾಟಿಂಗ್ ಅವಲಂಬಿತವಾಗಿದೆ.  

ತಂಡಗಳು

ಭಾರತ: ಹಾರ್ದಿಕ್ ಪಾಂಡ್ಯ (ನಾಯಕ), ಸೂರ್ಯಕುಮಾರ್ ಯಾದವ್ (ಉಪನಾಯಕ), ಇಶಾನ್ ಕಿಶನ್ (ವಿಕೆಟ್‌ಕೀಪರ್), ಶುಭಮನ್ ಗಿಲ್, ಪೃಥ್ವಿ ಶಾ, ಋತುರಾಜ್ ಗಾಯಕವಾಡ, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಜಿತೇಶ್ ಶರ್ಮಾ (ವಿಕೆಟ್‌ಕೀಪರ್), ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಆರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಖೇಶ್ ಕುಮಾರ್ 

ನ್ಯೂಜಿಲೆಂಡ್: ಮಿಚೆಲ್ ಸ್ಯಾಂಟನರ್ (ನಾಯಕ), ಫೀನ್ ಅಲೆನ್, ಮೈಕಲ್  ಬ್ರೇಸ್‌ವೆಲ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೆ,  ಡೇನ್ ಕ್ಲೇವರ್, ಡೇನ್ ಕ್ಲೀವರ್, ಗ್ಲೆನ್ ಫಿಲಿಪ್ಸ್ (ನಾಲ್ವರೂ ವಿಕೆಟ್‌ಕೀಪರ್‌), ಮಿಚೆಲ್ ರಿಪನ್, ಹೆನ್ರಿ ಶಿಪ್ಲಿ, ಈಶ್ ಸೋಧಿ, ಬ್ಲೇರ್ ಟಿಕ್ನರ್. 

ಪಂದ್ಯ ಆರಂಭ: ರಾತ್ರಿ 7.30

-

ಬಲಾಬಲ

ಪಂದ್ಯ;22

ಭಾರತ ಜಯ;12

ನ್ಯೂಜಿಲೆಂಡ್ ಜಯ;9

ಟೈ;1

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು