ಮ್ಯಾಂಚೆಸ್ಟರ್: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲೂ ಭಾರತ ಮಹಿಳಾ ಕ್ರಿಕೆಟ್ ತಂಡವು ಆರು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಆ ಮೂಲಕ ನಾಯಕಿ ಹರ್ಮನ್ಪ್ರೀತ್ ಪಡೆಯು ಐದು ಪಂದ್ಯಗಳ ಟಿ20 ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 3-1ರ ಅಂತರದಲ್ಲಿ ವಶಪಡಿಸಿಕೊಂಡಿದೆ.

ಭಾರತ ಮಹಿಳಾ ಕ್ರಿಕೆಟ್ ತಂಡದ ಚಾರಿತ್ರಿಕ ಸಾಧನೆ ಇದಾಗಿದ್ದು, ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟಿ20 ಸರಣಿ ಗೆಲುವನ್ನು ದಾಖಲಿಸಿದೆ.

2006ರಲ್ಲಿ ಡರ್ಬಿಯಲ್ಲಿ ನಡೆದ ಏಕಮಾತ್ರ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದ್ದರೂ, ಅದಾದ ನಂತರ ನಡೆದ ಎಲ್ಲ ಉಭಯ ಸರಣಿಗಳಲ್ಲೂ (ತವರಿನ ಅಂಗಳ ಸೇರಿದಂತೆ) ಸೋಲನುಭವಿಸಿತ್ತು.

ಓಲ್ಡ್ ಟ್ರಾಫರ್ಡ್ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡವನ್ನು ಏಳು ವಿಕೆಟ್ ನಷ್ಟಕ್ಕೆ 126 ರನ್ಗಳಿಗೆ ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಯಿತು.

ಭಾರತದ ಪರ ನಾಲ್ಕು ಓವರ್ಗಳಲ್ಲಿ ಕೇವಲ 15 ರನ್ ಮಾತ್ರ ಬಿಟ್ಟುಕೊಟ್ಟಿದ್ದ ರಾಧಾ ಯಾದವ್ ಎರಡು ವಿಕೆಟ್ ಗಳಿಸಿದ್ದರಲ್ಲದೆ, ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜರಾದರು.

ಬಳಿಕ ಸುಲಭ ಗುರಿ ಬೆನ್ನಟ್ಟಿದ ಭಾರತ 17 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಭಾರತದ ಪರ ಸ್ಮೃತಿ ಮಂದಾನ (32), ಶೆಫಾಲಿ ವರ್ಮಾ (31), ಜೆಮಿಮಾ ರಾಡ್ರಿಗಸ್ (24*) ಹಾಗೂ ಹರ್ಮನ್ಪ್ರೀತ್ ಕೌರ್ (26) ಉಪಯುಕ್ತ ಕಾಣಿಕೆ ನೀಡಿದರು.

ಭಾರತ, ಟ್ರೆಂಟ್ ಬ್ರಿಡ್ಜ್ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ 97 ರನ್ ಅಂತರದ ಜಯ ಗಳಿಸಿದ್ದರೆ ಕೌಂಟಿ ಗ್ರೌಂಡ್ನಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ 24 ರನ್ ಅಂತರದ ಜಯಭೇರಿ ಮೊಳಗಿಸಿತ್ತು. ಆದರೆ ಲಂಡನ್ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಐದು ರನ್ ಅಂತರದ ಸೋಲಿಗೆ ಶರಣಾಗಿತ್ತು.

ಸರಣಿಯ ಅಂತಿಮ ಪಂದ್ಯವು ಜುಲೈ 12ರಂದು ಎಜ್ಬಾಸ್ಟನ್ನಲ್ಲಿ ನಡೆಯಲಿದೆ.
.IND vs ENG 3rd Test: ಲಾರ್ಡ್ಸ್ ಅಂಗಳದಲ್ಲಿಯೂ ‘ಶುಭ ಆಶಯ’.ಟೆನಿಸ್ ಆಟಗಾರರು ಭಾರತ-ಪಾಕ್ ಪಂದ್ಯಕ್ಕೆ ಸಮನಾದ ಒತ್ತಡ ನಿಭಾಯಿಸುತ್ತಾರೆ: ಕೊಹ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.