ಮಂಗಳವಾರ, ಅಕ್ಟೋಬರ್ 27, 2020
19 °C

IPL 2020| ಇದಿನ್ನೂ ಎರಡನೇ ಪಂದ್ಯ: ಯಜುವೇಂದ್ರ ಚಾಹಾಲ್‌

ಎಎನ್‌ಐ‌ Updated:

ಅಕ್ಷರ ಗಾತ್ರ : | |

ದುಬೈ: ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧದ ಸೋಲಿನ ನಂತರ ಮಾತನಾಡಿರುವ ರಾಯಲ್‌ ಚಾಲೆಂಜರ್‌ ತಂಡದ ಸ್ಪಿನ್ನರ್‌ ಯಜುವೇಂದ್ರ ಚಾಹಾಲ್‌, ‘ಇದಿನ್ನು ಎರಡನೇ ಪಂದ್ಯ,’ ಎಂದು ಹೇಳಿದ್ದಾರೆ.

ಪಂದ್ಯದ ಬಳಿಕೆ ಮಾಧ್ಯಮಗಳೊಂದಿಗೆ ‌ಅವರು ಮಾತನಾಡಿದರು. ‘ ಇದಿನ್ನು ಎರಡನೇ ಪಂದ್ಯ. ತೀಕ್ಷ್ಣ ಬೌಲಿಂಗ್‌ ದಾಳಿಯಿಂದಾಗಿ ನಾವು ಮೊದಲ ಪಂದ್ಯವನ್ನು ಗೆದ್ದಿದ್ದೆವು. ಈ ಬಾರಿ ಕೆ ಎಲ್‌ ರಾಹುಲ್‌ ಅತ್ಯುತ್ತಮವಾಗಿ ಆಡಿದರು,’ ಎಂದು ಚಹಾಲ್‌ ಹೇಳಿದರು.

ಗುರುವಾರದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಉತ್ತಮವಾಗಿ ಆಡುತ್ತಿದ್ದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ನ ಆರಂಭಿಕರ ಜೊತೆಯಾಟವನ್ನು ಮೊದಲಿಗೆ ಮುರಿದಿದ್ದು ಯಜುವೇಂದ್ರ ಚಾಹಲ್‌. ಮಯಂಕ್ ಅಗರವಾಲ್ (25; 20ಎ, 4ಬೌಂ) ಅವರ ವಿಕೆಟ್‌ ಕಿತ್ತು ಆಟಕ್ಕೆ ಅವರು ತಿರುವು ನೀಡಿದ್ದರು. ಆದರೆ, ರಾಹುಲ್‌ ಆಟದ ಮುಂದೆ ಬೇರೆಲ್ಲವೂ ಮರೆಯಾದವು.

ಅಂತಿಮವಾಗಿ ಪಂಜಾಬ್‌ ತಂಡ ಮೂರು ವಿಕೆಟ್‌ ನಷ್ಟದೊಂದಿಗೆ 206ರನ್‌ ಗಳಿಸಿತ್ತು. ಇದನ್ನು ಬೆನ್ನು ಹತ್ತಿದ ರಾಯಲ್‌ ಚಾಲೆಂಜರ್‌ ತಂಡ 17 ಓವರ್‌ಗಳಲ್ಲಿ ಕೇವಲ 109 ರನ್‌ ಗಳಿಗೆ ಸರ್ವಪತನ ಕಂಡು, ಪಂದ್ಯದಲ್ಲಿ ಹೀನಾಯವಾಗಿ ಸೋಲು ಅನುಭವಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು