ರಣಜಿ ಫೈನಲ್: ಚೊಚ್ಚಲ ಪ್ರಶಸ್ತಿ ಗೆಲ್ಲಲು ಮಧ್ಯಪ್ರದೇಶಕ್ಕೆ 108 ರನ್ ಗುರಿ

ಬೆಂಗಳೂರು: ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿಗಾಗಿ ಎದುರು ನೋಡುತ್ತಿರುವ ಮಧ್ಯಪ್ರದೇಶ ತಂಡಕ್ಕೆ 41 ಬಾರಿಯ ಚಾಂಪಿಯನ್ ಮುಂಬೈ ಫೈನಲ್ ಪಂದ್ಯದ ಗೆಲುವಿಗೆ 108 ರನ್ಗಳ ಅಲ್ಪ ಗುರಿ ನೀಡಿದೆ.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 22ರಂದು ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಮುಂಬೈ ತಂಡ, ಮೊದಲ ಇನಿಂಗ್ಸ್ನಲ್ಲಿ 374ರನ್ ಗಳಿಸಿ ಆಲೌಟ್ ಆಗಿತ್ತು. ಪೃಥ್ವಿ ಶಾ ಪಡೆಗೆ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (78) ಅರ್ಧಶತಕ ಹಾಗೂ ಸರ್ಫರಾಜ್ ಖಾನ್ (134) ಶತಕ ಸಿಡಿಸಿ ನೆರವಾಗಿದ್ದರು.
ಇದನ್ನೂ ಓದಿ: ರಣಜಿ ಫೈನಲ್ ಇಂದಿನಿಂದ: 42ನೇ ಪ್ರಶಸ್ತಿಯತ್ತ ಮುಂಬೈ ಚಿತ್ತ
ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಮಧ್ಯಪ್ರದೇಶ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 536 ರನ್ ಕಲೆಹಾಕಿತ್ತು. ಯಶ್ ದುಬೆ (133), ಶುಭಂ ಎಸ್. ಶರ್ಮಾ (116) ಮತ್ತು ರಜತ್ ಪಾಟೀದಾರ್ (122) ಶತಕ ಭಾರಿಸಿ ಮಿಂಚಿದ್ದರು. ಹೀಗಾಗಿ, ಆದಿತ್ಯ ಶ್ರೀವಾಸ್ತವ ಬಳಗಕ್ಕೆ ಮೊದಲ ಇನಿಂಗ್ಸ್ನಲ್ಲಿ 162 ರನ್ಗಳ ಮುನ್ನಡೆ ಲಭಿಸಿತ್ತು.
ಬಳಿಕ ಇನಿಂಗ್ಸ್ ಆರಂಭಿಸಿದ ಮುಂಬೈ ತಂಡವನ್ನು ಮಧ್ಯಪ್ರದೇಶ ಬೌಲರ್ಗಳು ಸಾಧಾರಣ ಮೊತ್ತಕ್ಕೆ ಆಲೌಟ್ ಮಾಡಿದರು. ಅರ್ಧಶತಕ ಗಳಿಸಿದ ಸುವೇದ್ ಪಾರ್ಕರ್ (51), ನಾಯಕ ಪೃಥ್ವಿ ಶಾ (44) ಮತ್ತು ಸರ್ಫರಾಜ್ ಖಾನ್ (41) ಹೊರತುಪಡಿಸಿ ಉಳಿದವರಿಂದ ಉತ್ತಮ ಆಟ ಮೂಡಿಬರಲಿಲ್ಲ. ಹೀಗಾಗಿ ಈ ತಂಡ ಎರಡನೇ ಇನಿಂಗ್ಸ್ನಲ್ಲಿ 269 ರನ್ ಗಳಿಗೆ ಸರ್ವಪತನ ಕಂಡಿದೆ.
ಮಧ್ಯಪ್ರದೇಶ ಪರ ಕುಮಾರ ಕಾರ್ತಿಕೇಯ 4 ವಿಕೆಟ್ ಕಬಳಿಸಿದರೆ, ಗೌರವ್ ಯಾದವ್ ಮತ್ತು ಪಾರ್ಥ್ ಸಹಾನಿ ತಲಾ ಎರಡೆರಡು ವಿಕೆಟ್ ಹಂಚಿಕೊಂಡರು.
ಸುಲಭ ಗುರಿ ಎದುರು ಎದುರಾಳಿ ಬ್ಯಾಟರ್ಗಳನ್ನು ಮುಂಬೈ ಬೌಲರ್ಗಳು ನಿಯಂತ್ರಿಸುವರೇ ಕಾದು ನೋಡಬೇಕಿದೆ.
That's Lunch on Day 5 of the @Paytm #RanjiTrophy #Final. #MPvMUM
Mumbai post 269 runs on the board in the second innings & lead Madhya Pradesh by 107 runs.
We will be back for the final innings of the summit clash shortly.
Scorecard ▶️ https://t.co/xwAZ13D0nP pic.twitter.com/7aYC24z03z
— BCCI Domestic (@BCCIdomestic) June 26, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.