ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಶ್ರೀಲಂಕಾ ಬ್ಯಾಟರ್ ತಿರಿಮನ್ನೆ

Published 23 ಜುಲೈ 2023, 12:30 IST
Last Updated 23 ಜುಲೈ 2023, 12:30 IST
ಅಕ್ಷರ ಗಾತ್ರ

ಕೊಲಂಬೊ: ಶ್ರೀಲಂಕಾ ಬ್ಯಾಟರ್ ಲಾಹಿರು ತಿರಿಮನ್ನೆ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ನಿವೃತ್ತಿ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ‘ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದಕ್ಕೆ ತುಂಬಾ ಸಂತೋಷವಾಗಿದೆ. 13 ವರ್ಷಗಳ ಅದ್ಭುತ ನೆನಪುಗಳಿಗೆ ತುಂಬಾ ಧನ್ಯವಾದಗಳು’ ಎಂದು ಬರೆದಿದ್ದಾರೆ.

33 ವರ್ಷದ ಲಾಹಿರು ತಿರಿಮನ್ನೆ, ಶ್ರೀಲಂಕಾ ಪರ 197 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಏಳು ಶತಕ ಮತ್ತು 31 ಅರ್ಧಶತಕಗಳೊಂದಿಗೆ 5,573 ರನ್ ಗಳಿಸಿದ್ದಾರೆ.

‘ಆಟಗಾರನಾಗಿ ತಂಡಕ್ಕೆ ಅತ್ಯುತ್ತಮ ಕೊಡುಗೆ ನೀಡಲು ನಿರಂತರ ಪ್ರಯತ್ನ ಮಾಡಿದ್ದೇನೆ. ನಾನು ಆಟವನ್ನು ಗೌರವಿಸುತ್ತೇನೆ ಮತ್ತು ನನ್ನ ತಾಯ್ನಾಡಿಗೆ ಪ್ರಾಮಾಣಿಕವಾಗಿ ಮತ್ತು ನೈತಿಕವಾಗಿ ನನ್ನ ಕರ್ತವ್ಯವನ್ನು ಮಾಡಿದ್ದೇನೆ’ ಎಂದು ಬರೆದುಕೊಂಡಿದೆ.

‘ನಿವೃತ್ತಿ ಘೋಷಿಸುವುದು ಕಷ್ಟಕರವಾದ ನಿರ್ಧಾರವಾಗಿತ್ತು. ಆದರೆ, ಈ ನಿರ್ಧಾರವನ್ನು ಸ್ವಇಚ್ಛೆಯಿಂದ ಅಥವಾ ಇಷ್ಟವಿಲ್ಲದೆ ತೆಗೆದುಕೊಳ್ಳಲು ನನ್ನ ಮೇಲೆ ಪ್ರಭಾವ ಬೀರಿದ ಅನಿರೀಕ್ಷಿತ ಕಾರಣಗಳನ್ನು ಉಲ್ಲೇಖಿಸಲಾರೆ’ ಎಂದು ವಿವರಿಸಿದ್ದಾರೆ.

ತಮ್ಮ ಕ್ರಿಕೆಟ್ ಪಯಣದಲ್ಲಿ ತಮ್ಮನ್ನು ಬೆಂಬಲಿಸಿದ ಕೋಚ್‌ಗಳು, ಸಹ ಆಟಗಾರರು ಸೇರಿದಂತೆ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT