ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿರಾಟ್ ಶ್ರೇಷ್ಠ ಆಟಗಾರ: ವೆಸ್ಟ್ ಇಂಡೀಸ್ ಕ್ರಿಕೆಟ್‌ ದಂತಕತೆ ವೆಸ್ಲಿ ಬಣ್ಣನೆ

Published 20 ಜೂನ್ 2024, 2:47 IST
Last Updated 20 ಜೂನ್ 2024, 2:47 IST
ಅಕ್ಷರ ಗಾತ್ರ

ಬಾರ್ಬಡೋಸ್: ‘ಹಲವು ವರ್ಷಗಳಿಂದ ಸಾಕಷ್ಟು ಶ್ರೇಷ್ಠ ಬ್ಯಾಟರ್‌ ಗಳನ್ನು ನಾನು ನೋಡಿದ್ದೇನೆ. ಆದರೆ, ಭಾರತದ ‘ಸೂಪರ್‌ ಸ್ಟಾರ್‌’ ವಿರಾಟ್‌ ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರ’ ಎಂದು ವೆಸ್ಟ್‌ ಇಂಡೀಸ್‌ನ ಕ್ರಿಕೆಟ್‌ ದಂತಕತೆ ವೆಸ್ಲಿ ಹಾಲ್‌ ಬಣ್ಣಿಸಿದರು.

ಮಂಗಳವಾರ ಇಲ್ಲಿನ ಕೆನ್ಸಿಂಗ್ಟನ್ ಓವಲ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಅವರು, ತಮ್ಮ ಆತ್ಮಚರಿತ್ರೆ ಪುಸ್ತಕವನ್ನು ಕೊಹ್ಲಿ, ರೋಹಿತ್‌ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಹಸ್ತಾಕ್ಷರದೊಂದಿಗೆ ಉಡುಗೊರೆಯಾಗಿ ನೀಡಿದರು.

‘ನೀವು ಇನ್ನೂ ಹಲವು ವರ್ಷಗಳ ಕಾಲ ಭಾರತಕ್ಕಾಗಿ ಆಡುತ್ತೀರಿ ಎಂದು ನಾನು ಭಾವಿಸುತ್ತೇನೆ’ ಎಂದು ಕೊಹ್ಲಿಯನ್ನು ಉದ್ದೇಶಿಸಿ 86 ವರ್ಷದ ವೆಸ್ಲಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT