ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ದಾಖಲೆ ಇಲ್ಲದ ಜೊಕೊವಿಕ್ ವೀಸಾ ರದ್ದುಗೊಳಿಸಿದ ಆಸ್ಟ್ರೇಲಿಯ

Last Updated 6 ಜನವರಿ 2022, 5:25 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಕೋವಿಡ್ -19 ವಿರುದ್ಧ ಸಂಪೂರ್ಣವಾಗಿ ಲಸಿಕೆ ಪಡೆದ ಪುರಾವೆಗಳಿಲ್ಲದ ಹೊರತಾಗಿಯೂ ಮೆಲ್ಬರ್ನ್‌ಗೆ ಬಂದಿಳಿದಿದ ಜಗತ್ತಿನ ನಂ. 1 ಟೆನಿಸ್‌ ಆಟಗಾರ ನೊವಾಕ್‌ ಜಾಕೊವಿಚ್‌ ಅವರ ವೀಸಾವನ್ನು ಆಸ್ಟ್ರೇಲಿಯಾ ಬುಧವಾರ ರದ್ದು ಮಾಡಿದೆ.

ಪಂದ್ಯಾವಳಿಯಲ್ಲಿ ಆಡಲು ವೈದ್ಯಕೀಯ ವಿನಾಯಿತಿ ಪಡೆದಿರುವುದಾಗಿ ಅವರು ಇದಕ್ಕೂ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಸಂಭ್ರಮ ವ್ಯಕ್ತಪಡಿಸಿದ್ದರು.

ಆಸ್ಟ್ರೇಲಿಯ ಓಪನ್‌ ಟೆನಿಸ್‌ ಕ್ರೀಡಾ ಕೂಟದಲ್ಲಿ ಆಡಲು ಅನುಮತಿ ನೀಡಬೇಕಾಗಿ ಕೋರಿ ಜಾಕೊವಿಚ್‌ ಸಲ್ಲಿಸಿದ್ದ ಅರ್ಜಿಯನ್ನು ವೈದ್ಯಕೀಯ ಮಂಡಳಿಗಳು ಅನುಮೋದಿಸಿದ್ದವು. ಹೀಗಾಗಿ ಕೂಟದ ಆಯೋಜಕರು ಜಾಕೊವಿಚ್‌ಗೆ ಲಸಿಕೆ ವಿನಾಯಿತಿ ನೀಡಿದ್ದರು. ಇದು ಆಸ್ಟ್ರೇಲಿಯಾದಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು.

‘ಆಸ್ಟ್ರೇಲಿಯಾಕ್ಕೆ ಪ್ರವೇಶ ಪಡೆಯಲು ಅಗತ್ಯವಿರುವ ದಾಖಲೆಗಳನ್ನು ಪೂರೈಸಲು ಜೊಕೊವಿಕ್ ವಿಫಲರಾಗಿದ್ದಾರೆ. ಹೀಗಾಗಿ ಅವರ ವೀಸಾವನ್ನು ರದ್ದುಗೊಳಿಸಲಾಗಿದೆ,’ ಎಂದು ಆಸ್ಟ್ರೇಲಿಯನ್ ಗಡಿ ರಕ್ಷಣಾ ಪಡೆ ಪ್ರಕಟಣೆಯಲ್ಲಿ ತಿಳಿಸಿದೆ.

‘ಪ್ರವೇಶಕ್ಕೆ ಮಾನ್ಯವಾದ ವೀಸಾ ಹೊಂದಿರದ ಅಥವಾ ಅವರ ವೀಸಾ ರದ್ದುಗೊಂಡವರನ್ನು ಮೊದಲಿಗೆ ಬಂಧಿಸಲಾಗುತ್ತದೆ ಮತ್ತು ಆಸ್ಟ್ರೇಲಿಯಾದಿಂದ ಹೊರಗೆ ಕಳುಹಿಸಲಾಗುತ್ತದೆ,’ ಎಂದು ಗಡಿ ರಕ್ಷಣಾ ಪಡೆ ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌, ’ ನಿಯಮಗಳು ನಿಯಮಗಳೇ. ಗಡಿಗೆ ಸಂಬಂಧಿಸಿದ ವಿಚಾರದಲ್ಲಿ ಅದು ಇನ್ನೂ ಕಠಿಣವಾಗಿರುತ್ತವೆ,’ ಎಂದು ಅವರು ಹೇಳಿದ್ದಾರೆ.

‘ವೈಯಕ್ತಿಕವಾಗಿ ನಾನು ಲಸಿಕೆಗಳ ಪರ ಅಲ್ಲ‘ ಎಂದು ಜೊಕೊವಿಕ್ ಹಿಂದೊಮ್ಮೆ ಹೇಳಿದ್ದರು. ‘ಲಸಿಕೆ ಪಡೆಯುವಂತೆ ನನ್ನನ್ನು ಒತ್ತಾಯಿಸುವುದನ್ನು ನಾನು ಇಷ್ಟಪಡಲಾರೆ,’ ಎಂದು ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT