ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲ ವಾರಗಳಲ್ಲಿಯೇ ಐಎಸ್ ಉಗ್ರ ಸಂಘಟನೆಯಿಂದ ಹೊಸ ನಾಯಕನ ಘೋಷಣೆ: ಅಮೆರಿಕ

Last Updated 31 ಅಕ್ಟೋಬರ್ 2019, 2:09 IST
ಅಕ್ಷರ ಗಾತ್ರ

ವಾಷಿಂಗ್‌ಟನ್: ಸಿರಿಯಾದಲ್ಲಿ ಅಮೆರಿಕ ಸೇನೆಯ ದಾಳಿಯಿಂದ ಸಾವಿಗೀಡಾದ ಇಸ್ಲಾಮಿಕ್‌ ಸ್ಟೇಟ್‌ ಉಗ್ರಗಾಮಿ ಸಂಘಟನೆಯ ನಾಯಕ ಅಬುಬಕರ್ ಅಲ್‌ ಬಾಗ್ದಾದಿಯ ಉತ್ತರಾಧಿಕಾರಿ ಇನ್ನು ಕೆಲವೇ ವಾರಗಳಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಅಮೆರಿಕ ಸೇನೆಯ ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

‘ಇಸ್ಲಾಮಿಕ್ ಸ್ಟೇಟ್‌ನಲ್ಲಿ ಸಾಕಷ್ಟು ನಾಯಕರಿದ್ದಾರೆ. ಈ ಪೈಕಿ ಯಾರು ಬಾಗ್ದಾದಿ ಉತ್ತರಾಧಿಕಾರಿಯಾಗುತ್ತಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಇಂದಿಗೂ ಈ ಸಂಘಟನೆಗೆ ಸುಮಾರು 14 ಸಾವಿರ ಹೋರಾಟಗಾರರು ಇರಾಕ್ ಮತ್ತು ಸಿರಿಯಾದ ವಿವಿಧ ಪ್ರಾಂತ್ಯಗಳಲ್ಲಿ ಚದುರಿದ್ದಾರೆ’ ಎಂದು ಅಮೆರಿಕದ ಭಯೋತ್ಪಾದಕ ನಿಗ್ರಹ ಕೇಂದ್ರದ ನಿರ್ದೇಶಕ ರಸ್‌ ಟ್ರಾನರ್ಸ್‌ ಹೇಳಿದ್ದಾರೆ.

ಐಎಸ್‌ನ ನಾಯಕ ಬಾಗ್ದಾದಿ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಯುವಕರನ್ನು ಆಕರ್ಷಿಸುತ್ತಿದ್ದ ವಕ್ತಾರ ಅಬು ಹಸನ್ ಅಲ್ ಮುಹಾಜಿರ್‌ ಸಾವು ಸಂಘಟನೆಗೆ ದೊಡ್ಡ ಹೊಡೆತ ಕೊಟ್ಟಿದೆ. ಇದರಿಂದ ಚೇತರಿಸಿಕೊಳ್ಳಲು ಐಎಸ್‌ಗೆ ಸಮಯ ಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಇಸ್ಲಾಮಿಕ್‌ ಸ್ಟೇಟ್‌ ಸದ್ಯ ವಿರೋಧಿ ಬಣವಾಗಿರುವ ಅಲ್‌ಖೈದಾ ಸಂಘಟನೆಯ ಜೊತೆಗೆ ಹೊಸ ನಾಯಕ ಕೈಜೋಡಿಸುವ ಸಾಧ್ಯತೆ ಇದ್ದು, ವಿಶ್ವಕ್ಕೆ ಹೊಸರೀತಿಯಲ್ಲಿ ಆಪತ್ತು ತಂದೊಡ್ಡಬಹುದು ಎಂದು ಅವರು ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT