ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 ಪ್ರಭಾವ | 157 ಕೋಟಿ ವಿದ್ಯಾರ್ಥಿಗಳಿಗೆ ಕಷ್ಟ

Last Updated 18 ಏಪ್ರಿಲ್ 2020, 0:49 IST
ಅಕ್ಷರ ಗಾತ್ರ

ಜಗತ್ತಿನ ವಿದ್ಯಾರ್ಥಿ ಸಮುದಾಯದ ಪೈಕಿಶೇ 91ರಷ್ಟು ವಿದ್ಯಾರ್ಥಿಗಳು ಕೋವಿಡ್–19 ಪ್ರಭಾವಕ್ಕೆ ಸಿಲುಕಿ ತೊಂದರೆ ಎದುರಿಸುತ್ತಿದ್ದಾರೆ ಎಂದು ಯುನೆಸ್ಕೊ ವರದಿ ತಿಳಿಸಿದೆ. 191 ದೇಶಗಳ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕೊರೊನಾ ವೈರಸ್ ಭಾರಿ ಪರಿಣಾಮ ಉಂಟು ಮಾಡಿದೆ. ಭಾರತದಲ್ಲಿ ಲಾಕ್‌ಡೌನ್ ವಿಧಿಸಿರುವ ಕಾರಣ, ಸುಮಾರು 32 ಕೋಟಿ ಮಕ್ಕಳು ಮನೆಯಲ್ಲಿ ಒತ್ತಾಯದ ರಜೆ ಕಳೆಯುತ್ತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಆನ್‌ಲೈನ್ ಶಿಕ್ಷಣವೊಂದೇ ಪರಿಹಾರ ಎಂದು ಸಲಹೆ ನೀಡಿದೆ.

ಯುನೆಸ್ಕೊ ಪರಿಹಾರ

ಲಾಕ್‌ಡೌನ್‌ನಿಂದ ಮನೆಯಲ್ಲೇ ಉಳಿದಿರುವ ಮಕ್ಕಳಿಗಾಗಿ ದೂರ ಶಿಕ್ಷಣ ಕಾರ್ಯಕ್ರಮಗಳ ಮೂಲಕ ಶಿಕ್ಷಣ ನೀಡುವಂತೆ ಯುನೆಸ್ಕೊ ಸೂಚಿಸಿದೆ. ನೇರ ಭೇಟಿ ಸಾಧ್ಯವಾಗದಿದ್ದರೂ, ಆನ್‌ಲೈನ್‌ನಲ್ಲೇ ಮಕ್ಕಳಿಗೆ ಬೋಧಿಸುವ ಮೂಲಕ ಶಿಕ್ಷಣದಿಂದ ಅವರು ವಂಚಿತರಾಗದಂತೆ ಕೊಂಚ ಮಟ್ಟಿಗೆ ತಡೆಯಬಹುದು. ಲಾಕ್‌ಡೌನ್ ತೆರವುಗೊಳ್ಳುವವರೆಗೆ ಇದೇ ಪರಿಹಾರ ಎಂದು ಸೂಚಿಸಿದೆ. ಇದಕ್ಕಾಗಿ ಜಾಗತಿಕ ಶೈಕ್ಷಣಿಕ ಒಕ್ಕೂಟ ಎಂಬ ವೇದಿಕೆಯನ್ನುಯುನೆಸ್ಕೊ ರಚಿಸಿದೆ.

ಭಾರತದಲ್ಲಿ ಈಗಾಗಲೇ ಆನ್‌ಲೈನ್ ತರಗತಿಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಕ್ರಮ ತೆಗೆದುಕೊಂಡಿದೆ. ಆನ್‌ಲೈನ್ ಪೋರ್ಟಲ್ ಹಾಗೂ ಶೈಕ್ಷಣಿಕ ವಾಹಿನಿಗಳ ಮೂಲಕ ಕಲಿಕಾರ್ಥಿಗಳನ್ನು ತಲುಪುವ ಯತ್ನ ಮಾಡಲಾಗುತ್ತಿದೆ.

ಶಿಕ್ಷಣ ಏನು–ಏತ್ತ?

*ಮಕ್ಕಳಿಗೆ ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ಶಾಲೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ಸುಮಾರು 1 ತಿಂಗಳಿನಿಂದ
ಮುಚ್ಚಲಾಗಿದೆ

*9ರಿಂದ 12ನೇ ತರಗತಿಯ ವಿದ್ಯಾರ್ಥಿಗಳ ಮೇಲೆ ಲಾಕ್‌ಡೌನ್‌ನಿಂದ ಗಂಭೀರ ಪರಿಣಾಮ. ಭಾರತದಲ್ಲಿ ಈ ವರ್ಗಗಳಿಗೆ ಸೇರಿದ 13 ಕೋಟಿ ಮಕ್ಕಳಿದ್ದಾರೆ

*ಲಾಕ್‌ಡೌನ್‌ನಿಂದಾಗಿ ಬೋರ್ಡ್ ಪರೀಕ್ಷೆ ಹಾಗೂ ಕಾಲೇಜು ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಗೊಂದಲಗೊಂಡಿದ್ದಾರೆ

*ಎಂಜಿನಿಯರಿಂಗ್‌ಗೆ ಪ್ರವೇಶ ದೊರಕಿಸುವ ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮ್ (ಜೆಇಇ), ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ನಡೆಯುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ಸೇರಿದಂತೆ ಹಲವು ಪ್ರವೇಶ ಪರೀಕ್ಷೆಗಳು ನಡೆದಿಲ್ಲ

*ಲಾಕ್‌ಡೌನ್ ತೆರವುಗೊಳ್ಳುವುದನ್ನೇ ನಿರೀಕ್ಷಿಸಲಾಗುತ್ತಿದೆ. ಬೋರ್ಡ್ ಪರೀಕ್ಷೆ, ಕಾಲೇಜು, ಪ್ರವೇಶ ಪರೀಕ್ಷೆಗಳ ದಿನಾಂಕಗಳು ದಿಗ್ಬಂಧನ ತೆರವಾದ ಬಳಿಕ ಪ್ರಕಟವಾಗಲಿವೆ

ಮಕ್ಕಳ ಶಿಕ್ಷಣ ಮೇಲೆ ಪರಿಣಾಮ

*ಲಾಕ್‌ಡೌನ್‌ನಿಂದಾಗಿ ಮಕ್ಕಳು ತರಗತಿ ಬೋಧನೆಯ ಪ್ರಯೋಜನ ಕಳೆದುಕೊಳ್ಳುತ್ತಿದ್ದಾರೆ

*ಶಾಲೆಗಳು ತೆರೆಯದ ಕಾರಣ, ಮಕ್ಕಳ ನಡುವಿನ ಸಾಮಾಜಿಕ ಸಂವಹನ ಸಾಧ್ಯವಾಗುತ್ತಿಲ್ಲ

*ಮನೆಯಲ್ಲೇ ಉಳಿಯುವುದರಿಂದ ಕೆಲವರು ಮಾನಸಿಕ ಸಮಸ್ಯೆಗೆ ಒಳಗಾಗುವ ಸಾಧ್ಯತೆ

*ಆನ್‌ಲೈನ್ ಶಿಕ್ಷಣದಿಂದಾಗಿ ಮಕ್ಕಳು ಇಂಟರ್ನೆಟ್‌ ಗೀಳು ಅಂಟಿಸಿಕೊಳ್ಳುವ ಅಪಾಯ

*ಓದುತ್ತಲೇ ಅರೆಕಾಲಿಕ ಕೆಲಸ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಹಣ ಸಂಪಾದನೆಗೆ ಅಡ್ಡಿ ಆಗಿದೆ

*ಉದ್ಯೋಗದ ಹುಡುಕಾಟದಲ್ಲಿದ್ದ ಪದವಿಯ ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ನಿರಾಸೆ

*ದೀರ್ಘಕಾಲದ ಲಾಕ್‌ಡೌನ್‌ನಿಂದಾಗಿ ಶಾಲೆ ಪುನರಾರಂಭದ ಬಳಿಕವೂ ಕೆಲ ಮಕ್ಕಳು ಶಾಲೆಗಳಿಂದ ಹೊರಗುಳಿಯುವ ಸಾಧ್ಯತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT