ಗುರುವಾರ , ಜೂನ್ 17, 2021
29 °C

ವಿಶಾಖಪಟ್ಟಣ ಅನಿಲ ದುರಂತ: ಸೋರಿಕೆಯಾದ ಸ್ಟೈರೀನ್‌ ಬಗ್ಗೆ ಇಲ್ಲಿದೆ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶಾಖಪಟ್ಟಣ: ವಿಶಾಖಪಟ್ಟಣದ ಎಲ್‌ಜಿ ಪಾಲಿಮರ್ಸ್‌ ಘಟಕದಲ್ಲಿ ಉಂಟಾದ ಸ್ಟೈರಿನ್‌ ರಾಸಾಯನಿಕ ಸೋರಿಕೆಯಿಂದಾಗಿ ಅಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಸಾವಿರಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ. ಜನರ ಪ್ರಾಣ ಕಸಿದ ಸ್ಟೈರಿನ್‌ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: 

ಸಿಂಥೆಟಿಕ್‌ ರಬ್ಬರ್‌ ಮತ್ತು ರಾಳ ತಯಾರಿಕೆಗೆ ಈ ರಾಸಾಯನಿಕವನ್ನು ಬಳಸಲಾಗುತ್ತದೆ. ಇದನ್ನು ಉಸಿರಾಡಿದರೆ ನರವ್ಯೂಹದ ಮೇಲೆ ಪರಿಣಾಮ ಉಂಟಾಗುತ್ತದೆ. ಗಂಟಲು, ಚರ್ಮ, ಕಣ್ಣು ಮತ್ತು ದೇಹದ ಇತರ ಕೆಲವು ಭಾಗಗಳಲ್ಲಿ ಉರಿ ಉಂಟಾಗುತ್ತದೆ. ವೆಂಕಟಾಪುರದಲ್ಲಿ ಕೂಡ ಗ್ರಾಮಸ್ಥರು ಮತ್ತು ಮಕ್ಕಳಲ್ಲಿ ಇಂತಹ ಲಕ್ಷಣಗಳೇ ಕಾಣಿಸಿಕೊಂಡಿವೆ.

ಇದನ್ನೂ ಓದಿ: 

ಎಲ್‌.ಜಿ. ಕೆಮ್‌ನಲ್ಲಿ ತಯಾರಿಸಲಾಗುವ ಪಾಲಿಸ್ಟೈರೀನ್‌ ಎಂಬ ಪದಾರ್ಥ ರೆಫ್ರಿಜರೇಟರ್‌, ವಾಷಿಂಗ್‌ ಮೆಷೀನ್‌, ಹವಾ ನಿಯಂತ್ರಣ ಯಂತ್ರ, ಟಿ.ವಿ., ಕಂಪ್ಯೂಟರ್‌, ವೈದ್ಯಕೀಯ ಉಪಕರಣಗಳೆಲ್ಲದರಲ್ಲಿಯೂ ಬಳಕೆಯಾಗುತ್ತದೆ. 

ಆಂಧ್ರ ಪ್ರದೇಶದ ವಿಶಾಖಪಟ್ಟಣದ ಆರ್‌.ಆರ್‌. ವೆಂಕಟಾಪುರಂ ಗ್ರಾಮದಲ್ಲಿರುವ ದಕ್ಷಿಣ ಕೊರಿಯಾದ ಎಲ್‌.ಜಿ. ಕೆಮ್‌ ಕಂಪನಿಯ ಮಾಲೀಕತ್ವದ ಎಲ್‌.ಜಿ. ಪಾಲಿಮರ್ಸ್‌ ಘಟಕದಿಂದ ಗುರವಾರ ನಸುಕಿನ 2.30ರ ಹೊತ್ತಿಗೆ ಸ್ಟೈರೀನ್‌ ಮೊನೊಮರ್‌ ಅನಿಲ ಸೋರಿಕೆ ಸಂಭವಿಸಿತ್ತು. ವಿಷಾನಿಲದ ಪರಿಣಾಮವಾಗಿ ಜನರು ರಸ್ತೆ, ರಸ್ತೆ ಬದಿ, ಚರಂಡಿಗಳಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ದೃಶ್ಯ ಮನ ಕಲಕುವಂತಿತ್ತು. ಘಟನೆಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಅನಿಲ ಸೋರಿಕೆಯಿಂದ ಸುಮಾರು ಸಾವಿರ ಮಂದಿ ಅಸ್ವಸ್ಥರಾಗಿದ್ದಾರೆ. ಮೃತಪಟ್ಟವರಲ್ಲಿ ಒಂದು ಮಗುವೂ ಸೇರಿದೆ. ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದ್ದ ಇಬ್ಬರು ಚರಂಡಿಗೆ ಬಿದ್ದು ಸತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು