ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆ ಪತ್ರ ಜೇಬಿನಲ್ಲಿಟ್ಟುಕೊಂಡಿದ್ದ ಸಭಾಧ್ಯಕ್ಷ

Last Updated 23 ಜುಲೈ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ಇವತ್ತು ಸದನದಲ್ಲಿ ಏನಾದರೂ ಆಗಬಹುದು ಎಂದುಕೊಂಡು ಜೇಬಿನಲ್ಲಿ ರಾಜೀನಾಮೆ ಪತ್ರ ಇಟ್ಟುಕೊಂಡೇ ಬಂದಿದ್ದೆ’ ಎಂದು ಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ಅಂಗಿ ಜೇಬಿನಿಂದ ರಾಜೀನಾಮೆ ಪತ್ರ ಹೊರ ತೆಗೆದು ತೋರಿಸಿದರು.

ಬಳಿಕ ಕಾಗದವನ್ನು ನೋಡುವಂತೆ ವಿರೋಧ ಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರಿಗೆ ತಿಳಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸ ನಿರ್ಣಯದ ಮೇಲೆ ಮಾತನಾಡಿ,‘ಎಚ್‌.ವಿಶ್ವನಾಥ್‌ ಅತ್ಯಂತ ನೋವು ತಂದಿದ್ದಾರೆ. ರಾಕ್ಷಸ ರಾಜಕಾರಣದ ವಿರುದ್ಧ ಹೋರಾಟ ಮಾಡುತ್ತಿರುವು ದಾಗಿ ಹೇಳಿದ್ದಾರೆ. ಇವರನ್ನು ಸಂಸದೀಯ ಪಟು ಎನ್ನುತ್ತೀರಾ? ಅವರ ಬಗ್ಗೆ ಏನೋ ಅಂದುಕೊಂಡಿದ್ದೆ’ ಎಂದರು.

‘ಅವರ ಬಗ್ಗೆ ಬಹಳ ಗೌರವ ಇತ್ತು. ಆದರೆ, ಇತ್ತೀಚಿನ ನಡವಳಿಕೆ ಸರಿ ಇರಲಿಲ್ಲ, ಸಾರ್ವಜನಿಕವಾಗಿ ಹೇಳುವುದೇ ಒಂದು ನಡೆದುಕೊಳ್ಳುವುದೇ ಬೇರೆ’ ಎಂದು ಹೇಳಿದರು.

ಆಗ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ರಮೇಶ್‌ ಕುಮಾರ್‌, ‘ನೂರು ಜನ್ಮ ಎತ್ತಿ ಬಂದರೂ ಅವರಿಗೆ ನನ್ನ ಥರ ಬದುಕಲು ಆಗುವುದಿಲ್ಲ. ಇಂತಹವರು ನನ್ನ ಬಗ್ಗೆ ವ್ಯಾಖ್ಯಾನ ಮಾಡುತ್ತಾರೆ. ರಾಜೀನಾಮೆ ಹೇಗೆ ಬರೆಯಬೇಕು ಎಂಬುದು ಗೊತ್ತಿಲ್ಲದವರು ಸಭಾನಿಂದನೆ ಮಾಡುತ್ತಾರೆ. ನನ್ನ ರಕ್ತ ಕುದಿಯುತ್ತಿದೆ’ ಎಂದರು.

‘ರಾಜೀನಾಮೆ ಪತ್ರ ಜೇಬಿನಲ್ಲೇ ಇಟ್ಟುಕೊಂಡು ಕೂತಿದ್ದೇನೆ. ನಾನು ಛಲದಿಂದ ಬದುಕುವವನು. ಯಾವುದೇ ಕ್ಷಣದಲ್ಲಾದರೂ ರಾಜೀನಾಮೆ ಕೊಟ್ಟು ಹೋಗಲು ಸಿದ್ಧನಿದ್ದೆ. ನಾನು ಕೆ.ಎಸ್‌.ರಂಗನಾಥ್‌ ಅವರ ನೆರಳಿನಲ್ಲಿ ಬೆಳೆದವನು. ಅವರಿಂದ ರಾಜಕೀಯ ದೀಕ್ಷೆ ಪಡೆದವನು. ದೇವರಾಜ ಅರಸು ಅವರನ್ನು ನಡು ದಾರಿಯಲ್ಲಿ ಬಿಟ್ಟು ಹೋದವರ ಬಗ್ಗೆ ಹುಷಾರಾಗಿರಿ’ ಎಂದು ಹೇಳಿದರು.

‘ಪ್ರಜಾವಾಣಿ’ ಸುದ್ದಿ, ಬರಹಗಳಲ್ಲಿ ರಾಜಕೀಯ ಬೆಳವಣಿಗೆಗಳ ಸಮಗ್ರ ನೋಟ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT