ಬೆಂಗಳೂರು: ಆ್ಯಪಲ್ ಕಂಪನಿಯು ತನ್ನ ವಾರ್ಷಿಕ ಕಾರ್ಯಕ್ರಮದಲ್ಲಿ ಐಫೋನ್ 17 ಹೊಸ ಸರಣಿಯ ಹಲವು ಫೋನ್ಗಳನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ತನ್ನ ಫೋನ್ಗಳ ಕಾರ್ಯಾಚರಣೆ ವ್ಯವಸ್ಥೆಗೆ ಅಗತ್ಯವಿರುವ ಹೊಸ ಆವೃತ್ತಿಯ iOS26 ಕೂಡಾ ಅನಾವರಣಗೊಳಿಸಿದೆ.

ಈವರೆಗೂ iOS 18.6.2 ಆವೃತ್ತಿ ಬಳಕೆಯಲ್ಲಿದೆ. ಇದೇ ಮೊದಲ ಬಾರಿಗೆ ಬರಲಿರುವ ವರ್ಷದ ಸಂಖ್ಯೆಯೊಂದಿಗೆ ಆಪರೇಟಿಂಗ್ ಸಿಸ್ಟಂ ಅನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ಆ್ಯಪಲ್ ತೆಗೆದುಕೊಂಡಿದ್ದರಿಂದ ಈ ಬಾರಿ iOS 26 ಬಿಡುಗಡೆ ಮಾಡಲಾಗಿದೆ. ಹೊಸ ಆಪರೇಟಿಂಗ್ ಸಿಸ್ಟಂ ಆ್ಯಪಲ್ ತಯಾರಿಸುವ ಐಫೋನ್ ಮತ್ತು ಐಪ್ಯಾಡ್ಗಳ ಕಾರ್ಯಾಚರಣೆಗೆ ಅತ್ಯಗತ್ಯ.

ಹೊಸ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನದ ಅನುಭವ ಮತ್ತು ಬಳಕೆದಾರರು ನಿತ್ಯ ಬಳಸುವ ಆ್ಯಪ್ಗಳ ಕಾರ್ಯ ವ್ಯವಸ್ಥೆಯಲ್ಲಿ ಹೊಸತನವನ್ನು ತರುವ ಪ್ರಯತ್ನವನ್ನು ಆ್ಯಪಲ್ ಮಾಡಿದೆ. ನ್ಯಾವಿಗೇಷನ್ ಮತ್ತು ಬಳಸುವ ಕಂಟ್ರೋಲ್ಗಳ ರೂಪವನ್ನು ಆ್ಯಪಲ್ ಬದಲಿಸಿದೆ. ಅರೆಪಾರದರ್ಶಕವಾಗಿ ಕಾಣುವಂತೆ ಹೊಸ ಸ್ಪರ್ಶ ನೀಡಲಾಗಿದೆ.

ಹೊಸ ಐಒಎಸ್ನಲ್ಲಿ ಏನೆಲ್ಲಾ ಇದೆ

ಆ್ಯಪಲ್ನ ಹೊಸ ಕಾರ್ಯಾಚರಣೆ ವ್ಯವಸ್ಥೆಯ ಬಹುದೊಡ್ಡ ಬದಲಾವಣೆಯೇ ವಿನ್ಯಾಸ. ‘ಲಿಕ್ವಿಡ್ ಗ್ಲಾಸ್’ ಎಂಬ ಪರಿಕಲ್ಪನೆಯ ವಿನ್ಯಾಸವನ್ನು iOS 26ರಲ್ಲಿ ಮಾಡಲಾಗಿದೆ. ವಿಷನ್ಒಎಸ್ನಿಂದ ಪಡೆದಿರುವ ಅರೆಪಾರದರ್ಶಕ ಸಂವಹನದಿಂದ ಪ್ರೇರಣೆ ಪಡೆದ ವಿನ್ಯಾಸ ಇದಾಗಿದೆ.

ಮೆನು, ಆಯ್ಕೆಗಳು, ನೋಟಿಫಿಕೇಷನ್, ಕಂಟ್ರೋಲ್ ಸೆಂಟರ್ ಮತ್ತು ನೇಟಿವ್ ಆ್ಯಪ್ಗಳಾದ ಮೆಸೇಜ್, ಫೋನ್, ಕ್ಯಾಮೆರಾಗಳ ವಿನ್ಯಾಸವನ್ನೂ ಆ್ಯಪಲ್ ಬದಲಿಸಿದೆ. ಮೆನು ಆಯ್ಕೆಯೂ ಹೊಸ ಆವೃತ್ತಿಯಲ್ಲಿ ಗಮನಾರ್ಹ ಬದಲಾವಣೆ ಕಂಡಿದೆ.

iOS26ರಲ್ಲಿ ಲಾಕ್ಸ್ಕ್ರೀನ್ನಲ್ಲೂ ಬದಲಾವಣೆಯನ್ನು ಗಮನಿಸಬಹುದು. ದಿನಾಂಕ ಮತ್ತು ಸಮಯ ವಿಜೆಟ್ ಬದಲಾಗಿದೆ. ಸ್ಕ್ರೀನ್ ಲಾಕ್ ತೆಗೆಯುವಾಗ ವಾಲ್ಪೇಪರ್ ಸಹಿತ ಇವುಗಳ ಗಾತ್ರದಲ್ಲೂ ಬದಲಾವಣೆಯಾಗುವಂತೆ ಡೈನಾಮಿಕ್ ಸ್ಪರ್ಶ ನೀಡಲಾಗಿದೆ. ಐಕಾನ್ಗಳೂ ಅರೆಪಾರದರ್ಶಕವಾಗಿ ಕಾಣುವಂತೆ ವಿನ್ಯಾಸ ಮಾಡಲಾಗಿದೆ.

ಆ್ಯಪಲ್ ಇಂಟಲಿಜೆನ್ಸ್ ಪ್ರೇರಣೆಯಿಂದ ಕ್ಯಾಮೆರಾ ಆ್ಯಪ್ಗೆ ಹೊಸ ಸ್ಪರ್ಶ ನೀಡಲಾಗಿದೆ. ಕೃತಕ ಬುದ್ಧಿಮತ್ತೆ ಆಧಾರಿತ ಕಾಲ್ ಸಮ್ಮರಿ, ಹೊಸ ಮಾದರಿಯ ಗೇಮ್ಸ್ ಆ್ಯಪ್ ಮತ್ತು ವಿಷುಯಲ್ ಇಂಟಲಿಜೆನ್ಸ್ ಅನ್ನು ಮೇಲ್ದರ್ಜೆಗೆ ಏರಿಸಿದ್ದನ್ನು ಗಮನಿಸಬಹುದು. ಇವುಗಳ ಜತೆಗೆ ಇನ್ನೂ ಹಲವು ಬದಲಾವಣೆಯನ್ನು ಆ್ಯಪಲ್ iOS26ರಲ್ಲಿ ತಂದಿದೆ.
.Apple Event 2025: iPhone 17, 17 ಪ್ರೊ ಮ್ಯಾಕ್ಸ್, ವಾಚ್ ಹಲವು ನಿರೀಕ್ಷೆ....Apple Event 2025: iPhone 17, 17 ಪ್ರೊ ಮ್ಯಾಕ್ಸ್, ವಾಚ್ ಹಲವು ನಿರೀಕ್ಷೆ....
ಆ್ಯಪಲ್ನ ಯಾವೆಲ್ಲಾ ಫೋನ್ಗಳಿಗೆ iOS26 ಲಭ್ಯ?

ಎ13 ಅಥವಾ ಅದಕ್ಕಿಂತ ಆಧುನಿಕ ಚಿಪ್ಸೆಟ್ ಇರುವ ಫೋನ್ಗಳಿಗೆ ಐಒಎಸ್26 ಕಾರ್ಯಾಚರಣೆ ವ್ಯವಸ್ಥೆ ಲಭ್ಯ. ಐಫೋನ್ XR, XS26 ಮತ್ತು XS Max ಫೋನ್ಗಳು ಹೊಸ ಅಪ್ಡೇಟ್ನಿಂದ ವಂಚಿತವಾಗಲಿವೆ. iOS26 ಪಡೆಯುವ ಫೋನ್ಗಳ ಪಟ್ಟಿ ಈ ಕೆಳಗಿನಂತಿವೆ.

ಐಫೋನ್ 11

ಐಫೋನ್ 11 pro

ಐಫೋನ್ 11 pro Max

ಐಫೋನ್ SE (2nd Generation)

ಐಫೋನ್ 12

ಐಫೋನ್ 12 mini

ಐಫೋನ್ 12 pro

ಐಫೋನ್ 12 pro Max

ಐಫೋನ್ 13

ಐಫೋನ್ 13 mini

ಐಫೋನ್ 13 Pro

ಐಫೋನ್ Pro Max

ಐಫೋನ್ 14

ಐಫೋನ್ 14 Plus

ಐಫೋನ್ 14 pro

ಐಫೋನ್ 14 Pro Max

ಐಫೋನ್ 15

ಐಫೋನ್ 15 Plus

ಐಫೋನ್ 15 Pro

ಐಫೋನ್ 15 Pro Max

ಐಫೋನ್ 16

ಐಫೋನ್ 16 Plus

ಐಫೋನ್ 16 Pro

ಐಫೋನ್ 16 Pro Max

ಐಫೋನ್ 16e
.ಆ್ಯಪಲ್ ವಾಚ್ ಸೀರಿಸ್ 11, ಆ್ಯಪಲ್ ವಾಚ್ ಅಲ್ಟ್ರಾ 3 ಬಿಡುಗಡೆ: ಇಲ್ಲಿದೆ ಮಾಹಿತಿ.ಆ್ಯಪಲ್ ಹೆಬ್ಬಾಳ: ದೇಶದ 3ನೇ ಮಳಿಗೆ ಬೆಂಗಳೂರಿನಲ್ಲಿ; ಇಲ್ಲಿ ಏನೆಲ್ಲಾ ಇವೆ?.
ಎಂದಿನಿಂದ ಲಭ್ಯವಾಗಲಿದೆ iOS26 ?

ಹೊಸ ಮಾದರಿಯ ಐಫೋನ್ ಮಾರುಕಟ್ಟೆಗೆ ಬಿಡುಗಡೆಯಾದ ನಂತರ ಆ್ಯಪಲ್ನ ಹೊಸ ಕಾರ್ಯಾಚರಣೆ ವ್ಯವಸ್ಥೆ iOS26 ಲಭ್ಯವಾಗಲಿದೆ ಎಂದೆನ್ನಲಾಗಿದೆ. ಅಂದರೆ ಸೆ. 16ರ ಸುಮಾರಿಗೆ ಇದು ಮೇಲಿನ ಎಲ್ಲಾ ಫೋನ್ಗಳಿಗೆ ಲಭ್ಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.