ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕ್‌ಟಾಕ್‌ ನಿಷೇಧದ ಬಗ್ಗೆ ಸಾಮಾಜಿಕ ತಾಣದ ಮಂದಿ ಪ್ರತಿಕ್ರಿಯಿಸಿದ್ದು ಹೀಗೆ...

ಅಕ್ಷರ ಗಾತ್ರ

ಚೀನಾ ಮೂಲದ 59 ಮೊಬೈಲ್‌ ಆ್ಯಪ್‌ಗಳನ್ನು ಭಾರತ ಸರ್ಕಾರ ಸೋಮವಾರ ರಾತ್ರಿ ನಿಷೇಧಿಸಿದೆ. ಇದರಲ್ಲಿ ಜನಪ್ರಿಯ ಸಾಮಾಜಿಕ ತಾಣ ಟಿಕ್‌ ಟಾಕ್‌ ಕೂಡ ಒಂದು.

ಪೂರ್ವ ಲಡಾಕ್‌ನ ಗಾಲ್ವಾನ್‌ ಕಣಿವೆಯಲ್ಲಿ ಭಾರತ–ಚೀನಾ ನಡುವೆ ಸಂಭವಿಸಿದ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾದರು. ಚೀನಾ ಕಡೆಯಲ್ಲೂ ಸಾವು ನೋವು ಸಂಭವಿಸಿದ ಕುರಿತು ವರದಿಗಳಾಗಿವೆಯಾದರೂ, ನಿಖರ ಅಂಕಿಸಂಖ್ಯೆಗಳನ್ನು ಚೀನಾ ಬಿಡುಗಡೆ ಮಾಡಿಲ್ಲ. ಅಂದಿನಿಂದ ಇಂದಿನ ವರೆಗೆ ಚೀನಾದ ಉತ್ಪನ್ನಗಳು ಮತ್ತು ಚೀನಾದ ಆ್ಯಪ್‌ಗಳ ನಿಷೇಧದ ಕುರಿತು ಭಾರತದಲ್ಲಿ ಗಹನ ಚರ್ಚೆಗಳು ನಡೆದಿದ್ದವು. ಈ ಮಧ್ಯೆ ಮಂಗಳವಾರ ರಾತ್ರಿ ಚೀನಾದ 59 ಆ್ಯಪ್‌ಗಳನ್ನು ಭಾರತ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ.

59 ಆ್ಯಪ್‌ಗಳ ಪೈಕಿ ಹೆಚ್ಚು ಚರ್ಚೆಯಾಗುತ್ತಿರುವುದು ಟಿಕ್‌ ಟಾಕ್‌.ಭಾರತದ ಯುವ ಸಮುದಾಯದಲ್ಲಿ ಅತ್ಯಂತ ಜನಪ್ರಿಯತೆ ಪಡೆದಿದ್ದ ಟಿಕ್‌ ಟಾಕ್‌ ನಿಷೇಧಕ್ಕೆ ಸಾಮಾಜಿಕ ತಾಣದ ಬಳಕೆದಾರರೂ ಬಗೆಬಗೆಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ವ್ಯಂಗ್ಯ, ಕುಚೋದ್ಯಗಳು ಈ ಪ್ರತಿಕ್ರಿಯೆಗಳಲ್ಲಿವೆ. ಬಗೆ ಬಗೆಯ ಮೀಮ್‌ಗಳೂ ಹರಿದಾಡುತ್ತಿವೆ.

ಟಿಕ್‌ ಟಾಕ್‌ ನಿಷೇಧದ ಬಗ್ಗೆ ಸಾಮಾಜಿಕ ತಾಳದ ಬಳಕೆದಾರರು ಅಭಿಪ್ರಾಯಗಳಿಂತಲೂ ಹೆಚ್ಚಾಗಿ ಮೀಮ್‌ ಮತ್ತು ವ್ಯಂಗ್ಯದ ಮೂಲಕವೇಪ್ರತಿಕ್ರಿಯಿಸಿರುವುದು ಕಂಡು ಬಂದಿದೆ.

#RIPTiktok, #tiktok, #tiktokbanindia ಎಂಬ ಹ್ಯಾಷ್‌ ಟ್ಯಾಗ್‌ಗಳು ಮಂಗಳವಾರ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದ್ದವು.

ರಾಷ್ಟ್ರದ ಹಿತಕ್ಕಾಗಿ, ಸರ್ಕಾರ ಹೊರಡಿಸಿದ ಆದೇಶಕ್ಕೆ ಮನ್ನಣೆ ನೀಡಿ ನಾವು ಟಿಕ್‌ ಟಾಕ್‌ ಅನ್ನು ಅನ್‌ಇನ್‌ಸ್ಟಾಲ್‌ ಮಾಡುತ್ತಿರುವುದಾಗಿ ಹಲವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಟಿಕ್‌ ಟಾಕ್‌ ನಿಷೇಧದ ಕುರಿತಾದ ಟ್ವಿಟರ್‌ ಪೋಸ್ಟ್‌ಗಳು ಇಲ್ಲಿವೆ

ನಿಷೇಧದ ಕುರಿತು ಪ್ರತಿಕ್ರಿಯಿಸಿರುವ ಟಿಕ್‌ ಟಾಕ್‌ ಇಂಡಿಯಾ, ನಾವು ಸರ್ಕಾರದ ಆದೇಶವನ್ನು ಪಾಲಿಸುತ್ತಿದ್ದೇವೆ. ಈ ಬಗ್ಗೆ ಸಂಬಂಧಪಟ್ಟವರ ಬಳಿ ಮಾತನಾಡಲು ಭಾರತ ಸರ್ಕಾರವು ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಮಂಗಳವಾರ ಬೆಳಗ್ಗೆ ಟ್ವೀಟ್‌ ಮಾಡಿದೆ.

ಇನ್ನೊಂದೆಡೆ ಭಾರತದಿಂದ ನಿಷೇಧಕ್ಕೊಳಗಾದ ಚೀನಾದ ಆ್ಯಪ್‌ಗಳಿಗೆ ಬದಲಾಗಿ ದೇಶಿಯ ಮತ್ತು ಇತರೆ ಪರ್ಯಾಯ ಆ್ಯಪ್‌ಗಳ ಹುಡುಕಾಟದಲ್ಲಿ ನೆಟ್ಟಿಗರು ತೊಡಗಿದ್ದಾರೆ. ಟಿಕ್‌ ಟಾಕ್‌ಗೆ ಬದಲಾಗಿ ಬೆಂಗಳೂರು ಮೂಲದ ಚಿಂಗಾರಿ ಆ್ಯಪ್‌ ದಿಢೀರ್ ಜನಪ್ರಿಯತೆ ಗಳಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT