Video | ತುಳುನಾಡಿನಲ್ಲಿ ಕಂಬಳ ಸಂಭ್ರಮ: ಕೋಣಗಳೇ ಇಲ್ಲಿಯ ಸೆಲಿಬ್ರಿಟಿಗಳು
ತುಳುನಾಡಿನಲ್ಲಿ ಈಗ ಕಂಬಳದ ಸಡಗರ. ವಾರಾಂತ್ಯ ಬಂತೆಂದರೆ ಸಾಕು ಕರಾವಳಿಯ ಮಣ್ಣಿನ ಕ್ರೀಡೆಯಲ್ಲಿ ಜನ ಮಿಂದೇಳುತ್ತಾರೆ. ಕಂಬಳದ ಕೋಣಗಳೇ ಇಲ್ಲಿಯ ‘ಸೆಲಿಬ್ರಿಟಿ’ಗಳು. ಮಾತ್ರವಲ್ಲ, ಕೋಣ ಓಡಿಸುವವರಿಗೋ ‘ಜಾಕಿ’ಯ ಪಟ್ಟ ಸಿಕ್ಕಿದೆ. ಕಂಬಳದ ಕೋಣಗಳನ್ನು ಸಾಕಲು ಲಕ್ಷ ಲಕ್ಷ ಖರ್ಚು ಮಾಡುವ ಮಾಲೀಕರಿಗೆ ಅದು ಪ್ರತಿಷ್ಠೆ.