ಚಂದ್ರನ ಮೇಲೆ ನೀರು ಪತ್ತೆಗೆ 2024ರಲ್ಲಿ ರೋವರ್ ರವಾನೆ: ಆಸ್ಟ್ರೇಲಿಯಾ

ಸಿಡ್ನಿ, ಆಸ್ಟ್ರೇಲಿಯಾ: ಚಂದ್ರನ ಮೇಲೆ ನೀರಿನ ಅಂಶ ಇದೆಯೇ ಎಂಬುದನ್ನು ಪತ್ತೆ ಹಚ್ಚುವ ಸಲುವಾಗಿ ಸಿಡ್ನಿಯ ಯುನಿವರ್ಸಿಟಿ ಆಫ್ ಟೆಕ್ನಾಲಜಿ ಸಹಯೋಗದಲ್ಲಿ ಆಸ್ಟ್ರೇಲಿಯಾ ಮತ್ತು ಕೆನಡಾ ಮೂಲದ ಖಾಸಗಿ ಕಂಪನಿಗಳು 2024ರ ಮಧ್ಯಭಾಗದಲ್ಲಿ ರೋವರ್‌ವೊಂದನ್ನು ಕಳುಹಿಸುವ ಬಾಹ್ಯಾಕಾಶ ಯೋಜನೆಯನ್ನು ರೂಪಿಸಿವೆ.
ಅಲ್ಲದೆ, ಕಳೆದ ತಿಂಗಳು ಅಮೆರಿಕನ್ ಬಾಹ್ಯಾಕಾಶ ಸಂಸ್ಥೆ ನಾಸಾ ಸಹಭಾಗಿತ್ವದಲ್ಲಿ ಆಸ್ಟ್ರೇಲಿಯಾ ನಿರ್ಮಿತ ರೋವರ್‌ವೊಂದನ್ನು ಕಳುಹಿಸುವುದಾಗಿ ಆಸ್ಟ್ರೇಲಿಯನ್ ಬಾಹ್ಯಾಕಾಶ ಸಂಸ್ಥೆ ಪ್ರಕಟಿಸಿತ್ತು. ರೋವರ್ ಚಂದ್ರನ ಮೇಲ್ಮೈನಲ್ಲಿನ ಆಮ್ಲಜನಕ ಅಂಶವಿರುವ ಮಣ್ಣನ್ನು ಸಂಗ್ರಹಿಸಲಿದೆ. ಜೀವಿಗಳಿಗೆ ಪೂರಕವಾದ ಅಂಶಗಳ ಇರುವಿಕೆ ಪತ್ತೆಯು ಇದರ ಗುರಿಯಾಗಿದೆ.
ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ಇದು ಚಂದ್ರನ ಮೇಲೆ ಇಳಿದ ಆಸ್ಟ್ರೇಲಿಯಾ ನಿರ್ಮಿತ ಮೊದಲ ರೋವರ್ ಎನಿಸಿಕೊಳ್ಳಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.