ಶುಕ್ರವಾರ, ಡಿಸೆಂಬರ್ 2, 2022
19 °C

ಉತ್ತರ ಕೊರಿಯಾ ಪೂರ್ವ ಕರಾವಳಿಯತ್ತ ಖಂಡಾಂತರ ಕ್ಷಿಪಣಿ ಸಿಡಿಸಿದೆ: ದಕ್ಷಿಣ ಕೊರಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಯೋಲ್: ಉತ್ತರ ಕೊರಿಯಾ ತನ್ನ ಪೂರ್ವ ಕರಾವಳಿಯ ಸಮುದ್ರದತ್ತ ಭಾನುವಾರ ಅನಿರ್ದಿಷ್ಟ ಖಂಡಾಂತರ ಕ್ಷಿಪಣಿಯನ್ನು ಉಡಾಯಿಸಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ.

ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರು ಮುಂದಿನ ವಾರ ದಕ್ಷಿಣ ಕೊರಿಯಾಗೆ ಆಗಮಿಸಲಿದ್ದಾರೆ. ಅಷ್ಟಲ್ಲದೆ, ಯುಎಸ್‌ ಯುದ್ಧ ವಿಮಾನವಾಹಕ ನೌಕೆಯು ಜಂಟಿ ಸಮರಾಭ್ಯಾಸ ನಡೆಸಲು ದೇಶಕ್ಕೆ ಆಗಮಿಸಿರುವ ಸಂದರ್ಭದಲ್ಲಿ ಈ ಕ್ಷಿಪಣಿ ಹಾರಿಸಿದೆ ಎಂದು ದಕ್ಷಿಣ ಕೊರಿಯಾ ಕಿಡಿಕಾರಿದೆ.

ಉತ್ತರ ಕೊರಿಯಾ ಶಸ್ತ್ರಾಸ್ತ್ರ ಪರೀಕ್ಷೆಯನ್ನು ಮುಂದುವರಿಸಿದೆ ಎಂದು ದಕ್ಷಿಣ ಕೊರಿಯಾ ಜೂನ್‌ ತಿಂಗಳಲ್ಲಿಯೂ ಆರೋಪಿಸಿತ್ತು. 'ಉತ್ತರ ಕೊರಿಯಾ ಅಪರಿಚಿತ ಕ್ಷಿಪಣಿಯೊಂದನ್ನು ಪೂರ್ವ ಸಮುದ್ರದತ್ತ ಹಾರಿಸಿಸಲಾಗಿದೆ' ಎಂದು ಜಪಾನ್‌ನ ಮಾಹಿತಿ ಉಲ್ಲೇಖಿಸಿ ಹೇಳಿಕೆ ಬಿಡುಗಡೆ ಮಾಡಿತ್ತು.

ಇವನ್ನೂ ಓದಿ


ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು