ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ ವಿರುದ್ಧ ಯುದ್ಧ ಮಾಡುವ ಉದ್ದೇಶವಿಲ್ಲ: ರಷ್ಯಾ

Last Updated 28 ಜನವರಿ 2022, 15:37 IST
ಅಕ್ಷರ ಗಾತ್ರ

ಮಾಸ್ಕೋ: ‘ಉಕ್ರೇನ್‌ ಮೇಲೆ ಯುದ್ಧ ಮಾಡುವ ಉದ್ದೇಶವಿಲ್ಲ’ ಎಂದು ರಷ್ಯಾದ ಉನ್ನತ ರಾಜತಾಂತ್ರಿಕರು ಶುಕ್ರವಾರ ಹೇಳಿದ್ದಾರೆ. ಆದರೆ ನಮ್ಮ ಭದ್ರತಾ ಹಿತಾಸಕ್ತಿಗಳಿಗೆ ಧಕ್ಕೆ ತರಲು ಪಾಶ್ಚಾತ್ಯ ರಾಷ್ಟ್ರಗಳಿಗೆ ಅವಕಾಶ ನೀಡುವುದಿಲ್ಲ ಎಂದೂ ರಷ್ಯಾ ಸ್ಪಷ್ಟಪಡಿಸಿದೆ.

‘ಫೆಬ್ರುವರಿಯಲ್ಲಿ ರಷ್ಯಾ ಮಿಲಿಟರಿಯು ಉಕ್ರೇನ್‌ ಮೇಲೆ ಆಕ್ರಮಣ ನಡೆಸುವ ಸಾಧ್ಯತೆ ಇದೆ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಉಕ್ರೇನ್‌ ಅಧ್ಯಕ್ಷರಿಗೆ ಗುರುವಾರವಷ್ಟೇ ಎಚ್ಚರಿಕೆ ನೀಡಿದ್ದರು. ಈ ಮಧ್ಯೆ ತನಗೆ ಯುದ್ಧದ ಉದ್ದೇಶವಿಲ್ಲ ಎಂದು ರಷ್ಯಾ ತಿಳಿಸಿದೆ.

‘ರಷ್ಯಾ ಒಕ್ಕೂಟ ವ್ಯವಸ್ಥೆಯನ್ನು ಅವಲಂಬಿಸಿರುವವರೆಗೆ ಯುದ್ಧ ನಡೆಯುವುದಿಲ್ಲ. ನಮಗೆ ಯುದ್ಧ ಬೇಕಾಗಿಯೂ ಇಲ್ಲ’ ಎಂದು ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ರಷ್ಯಾದ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ‘ಆದರೆ ನಮ್ಮ ಹಿತಾಸಕ್ತಿಗಳಿಗೆ ಧಕ್ಕೆಯಾಗಲು ನಾವು ಬಿಡುವುದಿಲ್ಲ’ ಎಂದು ಅವರು ಹೇಳಿದರು.

ರಷ್ಯಾ ಉಕ್ರೇನ್‌ ಗಡಿಯಲ್ಲಿ 1,00,000 ಕ್ಕಿಂತಲೂ ಅಧಿಕ ಸೇನಾ ತುಕಡಿಗಳನ್ನು ನಿಯೋಜಿಸಿದೆ. ಹೀಗಾಗಿ ಯುದ್ಧಭೀತಿ ತೀವ್ರಗೊಂಡಿದೆ. ರಷ್ಯಾದ ಸೇನಾ ನಿಯೋಜನೆಯು ಇತ್ತ, ಅಮೆರಿಕ ಮತ್ತು ನ್ಯಾಟೋ ಪಡೆಗಳ ಹುಬ್ಬೇರುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT