ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧದಲ್ಲಿ ನಮ್ಮ 498 ಸೈನಿಕರು ಹತರಾಗಿದ್ದಾರೆ: ಸಾವು ನೋವು ಒಪ್ಪಿಕೊಂಡ ರಷ್ಯಾ

Last Updated 3 ಮಾರ್ಚ್ 2022, 2:05 IST
ಅಕ್ಷರ ಗಾತ್ರ

ಮಾಸ್ಕೋ: ಉಕ್ರೇನ್‌ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಲ್ಲಿ ತನ್ನ ಕಡೆ ಒಟ್ಟು 498 ಸೈನಿಕರು ಹತರಾಗಿದ್ದಾರೆ ಎಂದು ರಷ್ಯಾ ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದೆ. ಜತೆಗೆ, 1,597 ಹೆಚ್ಚು ಮಂದಿಗೆ ಗಾಯಗಳಾಗಿವೆ ಎಂದೂ ರಕ್ಷಣಾ ಸಚಿವಾಲಯ ಬುಧವಾರ ಹೇಳಿದೆ.

ಮೃತರ ಕುಟುಂಬಗಳಿಗೆ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ಸಚಿವಾಲಯದ ವಕ್ತಾರ ಇಗೊರ್ ಕೊನಾಶೆಂಕೋವ್ ತಿಳಿಸಿದರು. ರಷ್ಯಾ ಕಡೆ ಲೆಕ್ಕ ಹಾಕಲಾಗದಷ್ಟು ನಷ್ಟವಾಗಿದೆ ಎಂಬ ವಾದಗಳನ್ನು ಅಪಪ್ರಚಾರ ಎಂದು ಅವರು ಪ್ರತಿಪಾದಿಸಿದರು.

2,870ಕ್ಕೂ ಹೆಚ್ಚು ಉಕ್ರೇನ್‌ ಸೈನಿಕರನ್ನು ಯುದ್ಧದಲ್ಲಿ ಕೊಲ್ಲಲಾಗಿದೆ. 3,700 ಮಂದಿ ಗಾಯಗೊಂಡಿದ್ದಾರೆ. 572 ಮಂದಿಯನ್ನು ಸೆರೆಹಿಡಿಯಲಾಗಿದೆ ಎಂದು ಕೊನಾಶೆಂಕೋವ್ ಮಾಹಿತಿ ನೀಡಿದರು.

ಉಕ್ರೇನಿಯನ್ ಅಧಿಕಾರಿಗಳು ರಷ್ಯಾದ ಈ ಅಂಕಿಅಂಶಗಳ ಬಗ್ಗೆ ಪ್ರತಿಕ್ರಿಯಿಸಿಲ್ಲ. ಆದರೆ, 6000ಕ್ಕೂ ಹೆಚ್ಚು ರಷ್ಯಾ ಆಕ್ರಮಣಕಾರರನ್ನು ಕೊಂದಿರುವುದಾಗಿ ಉಕ್ರೇನ್‌ ಬುಧವಾರ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT