ಮಂಗಳವಾರ, ಆಗಸ್ಟ್ 16, 2022
28 °C

ತೈವಾನ್‌: ತರಬೇತಿ ವೇಳೆ ಯುದ್ಧವಿಮಾನ ಕಣ್ಮರೆ, ಪತನದ ಶಂಕೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ತೈಪೆ (ರಾಯಿಟರ್ಸ್‌): ದ್ವೀಪ ರಾಷ್ಟ್ರ ತೈವಾನ್‌ನ ವಾಯುಪಡೆ ಮಂಗಳವಾರ ಸಮುದ್ರದಲ್ಲಿ ನಡೆಸಿದ ತರಬೇತಿ ಕಾರ್ಯಾಚರಣೆಯೊಂದರ ವೇಳೆ ಸಂಭವಿಸಿದ ಅಪಘಾತದಲ್ಲಿ ಎಫ್‌–16 ಯುದ್ಧ ವಿಮಾನವೊಂದು ಕಣ್ಮರೆಯಾಗಿದೆ.

ಯುದ್ಧವಿಮಾನವು ಪತನಗೊಂಡಿರುವುದಾಗಿ ಶಂಕಿಸಲಾಗಿದೆ. ವಿಮಾನ ಮತ್ತು ಪೈಲಟ್‌ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಸರ್ಕಾರ ಹೇಳಿದೆ.

ತೈವಾನ್‌ ಯುದ್ಧ ವಿಮಾನಗಳಲ್ಲಿ ಎಫ್‌–16ವಿ ಅತ್ಯಾಧುನಿಕ ಮಾದರಿಯದ್ದಾಗಿದೆ.

ದಕ್ಷಿಣ ತೈವಾನ್‌ನ ಚಿಯಾಯಿ ವಾಯುನೆಲೆಯಿಂದ ಹಾರಿದ ಈ ವಿಮಾನ ನಂತರ ರೆಡಾರ್‌ ಪರದೆಯಿಂದ ಕಣ್ಮರೆಯಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು