ಯುದ್ಧ ವಿಮಾನ: ಉಕ್ರೇನ್‌ನಿಂದ ಹೆಚ್ಚಿದ ಒತ್ತಡ

ಕೀವ್: ರಷ್ಯಾದ ಆಕ್ರಮಣಕಾರಿ ಪಡೆಯನ್ನು ಹಿಮ್ಮೆಟ್ಟಿಸಲು ಉಕ್ರೇನ್ ಯುದ್ಧವಿಮಾನಗಳ ಮೊರೆ ಹೋಗಿದ್ದು, ಮಿತ್ರರಾಷ್ಟ್ರಗಳ ಮೇಲೆ ಒತ್ತಡ ತೀವ್ರಗೊಳಿಸಿದೆ.
ಉಕ್ರೇನ್– ರಷ್ಯಾ ನಡುವಿನ ಯುದ್ಧ ವರ್ಷವಿಡೀ ಮುಂದುವರಿಯುವ ಹಾಗೂ ಇನ್ನಷ್ಟು ತೀವ್ರಗೊಳ್ಳುವ ಆತಂಕದ ನಡುವೆಯೇ ಉಕ್ರೇನ್ ಮಿತ್ರರಾಷ್ಟ್ರಗಳ ಮುಂದೆ ಈ ಬೇಡಿಕೆ ಇಟ್ಟಿದೆ.
ಉಕ್ರೇನ್‌ನ ರಕ್ಷಣಾ ಸಚಿವ ಒಲೆಕ್ಸಿ ರೆಜ್ನಿಕೋವ್ ಅವರು ಮಂಗಳವಾರ ಪ್ಯಾರಿಸ್‌ಗೆ ತೆರಳಿದ್ದು, ಅಲ್ಲಿ ಉಕ್ರೇನ್‌ಗೆ ಯುದ್ಧವಿಮಾನಗಳ ಪೂರೈಕೆ ಕುರಿತು ಚರ್ಚಿಸಬಹುದೆಂದು ನಿರೀಕ್ಷಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.