ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

US Election Result 2020: ಟ್ರಂಪ್‌ ಹಿಂದಿಕ್ಕಿದ ಜೋ ಬೈಡನ್

Last Updated 4 ನವೆಂಬರ್ 2020, 10:50 IST
ಅಕ್ಷರ ಗಾತ್ರ
ADVERTISEMENT
""

ವಾಷಿಂಗ್ಟನ್: ಕೊರೊನಾ ವೈರಸ್ ಸಾಂಕ್ರಾಮಿಕದ ನಡುವೆಯೂ ಲಕ್ಷಾಂತರ ಅಮೆರಿಕನ್ನರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ದಾಖಲೆ ಸಂಖ್ಯೆಯಲ್ಲಿ ಮತದಾನವಾಗಿದೆ ಎಂದು ವರದಿಯಾಗಿದೆ. ಅನೇಕ ರಾಜ್ಯಗಳಲ್ಲಿ ಸ್ಥಳೀಯ ಕಾಲಮಾನ ಸಂಜೆ 7ರ ವೇಳೆಗೆ ಮತದಾನ ಮುಕ್ತಾಯಗೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮೇಲ್ ಮೂಲಕ ಮತದಾನವಾಗಿದ್ದು, ಮತ ಎಣಿಕೆ ಪ್ರಕ್ರಿಯೆ ತುಸು ದೀರ್ಘವಾಗುವ ಸಾಧ್ಯತೆ ಇದೆ. ಲೇಟೆಸ್ಟ್‌ ಅಪ್‌ಡೇಟ್ಸ್‌ ಇಲ್ಲಿ ಲಭ್ಯ.

* ದಿ ಅಸೋಸಿಯೇಟೆಡ್‌ ಪ್ರೆಸ್‌ನ ಇತ್ತೀಚಿನ ಮಾಹಿತಿ ಪ್ರಕಾರ, ಡೆಮಾಕ್ರಟಿಕ್‌ ಪಾರ್ಟಿಯ ಜೋ ಬೈಡೆನ್‌ 238 ಮತಗಳು ಹಾಗೂ ರಿಪಬ್ಲಿಕನ್‌ ಪಾರ್ಟಿಯ ಡೊನಾಲ್ಡ್‌ ಟ್ರಂಪ್‌ 213 ಮತಗಳನ್ನು ಗಳಿಸಿದ್ದಾರೆ.

* ಜೋ ಬೈಡೆನ್ ಅವರು ನ್ಯೂಜೆರ್ಸಿ ಮತ್ತು ನ್ಯೂಯಾರ್ಕ್‌ನಲ್ಲಿ ಜಯಗಳಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ಬೈಡೆನ್ ಅವರು 2.2 ಮಿಲಿಯನ್‌ ಮತ ಹಾಗೂ ಟ್ರಂಪ್ 1.2 ಮಿಲಿಯನ್‌ ಮತಗಳನ್ನು ಗಳಿಸಿದ್ದಾರೆ. ಬೈಡನ್ ಅವರು ಕೊಲೊರಾಡೊ, ಕನೆಕ್ಟಿಕಟ್, ಇಲಿನಾಯ್ಸ್‌, ಮಸಾಚುಸೆಟ್ಸ್, ನ್ಯೂ ಮೆಕ್ಸಿಕೊ, ವೆರ್ಮೊಂಟ್‌, ವರ್ಜಿನಿಯಾದಲ್ಲಿ ಮುನ್ನಡೆ ಸಾಧಿಸಿದ್ದಾರೆ.

* ‌ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಲಬಮಾ, ಅರ್ಕನಸ್, ಕೆಂಟುಕಿ, ಲೂಸಿಯಾನಾ, ಮಿಸ್ಸಿಸ್ಸಿಪ್ಪಿ, ನೆಬ್ರಾಸ್ಕಾ, ಒಕ್ಲಾಹಾಮಾ, ಟೆನ್ನೆಸಿ, ಪಶ್ಚಿಮ ವರ್ಜೀನಿಯಾ, ಇಂಡಿಯಾನಾ, ದಕ್ಷಿಣ ಕರೊಲಿನಾದಲ್ಲಿ ಗೆದಿದ್ದಾರೆ.

* 'ನಾವು ಈಗಾಗಲೇ ಚುನಾವಣೆ ಗೆದ್ದಿದ್ದೇವೆ. ಕೋಟ್ಯಂತರ ಜನರು ನನಗೆ ಮತ ಹಾಕಿದ್ದಾರೆ' ಎಂದು ಹೇಳಿಕೊಂಡಿರುವ ಅಮೆರಿಕ ಅಧ್ಯಕ್ಷ ಟ್ರಂಪ್‌, ಅಮೆರಿಕದ ಜನರನ್ನು ವಂಚಿಸಲಾಗುತ್ತಿದೆ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ಗೆ ಹೋಗುತ್ತೇನೆ, ಅಲ್ಲೇ ಹೋರಾಡುತ್ತೇನೆ ಎಂದಿದ್ದಾರೆ.

* ಭಾರತೀಯ ಮೂಲದ ರಾಜಾ ಕೃಷ್ಣಮೂರ್ತಿ ಅವರು ಸತತ ಮೂರನೇ ಬಾರಿಗೆ ಅಮೆರಿಕದ ಜನಪ್ರತಿನಿಧಿಗಳ ಸಭೆಗೆ ಮರು ಆಯ್ಕೆ ಆಗಿದ್ದಾರೆ. ಅವರು ಡೆಮಾಕ್ರಟಿಕ್ ಪಕ್ಷದವರು.

* ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ, 29 ವರ್ಷದ ನೀರಜ್ ಅಂಟಾನಿ ಅವರು ಓಹಿಯೊ ರಾಜ್ಯದಿಂದ ಸೆನೆಟ್‌ಗೆ ಆಯ್ಕೆಯಾಗಿದ್ದು, ಈ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಭಾರತ ಅಮೆರಿಕನ್‌ ಅಭ್ಯರ್ಥಿ ಚುನಾಯಿತರಾಗಿ ಇತಿಹಾಸ ಸೃಷ್ಟಿಸಿದ್ದಾರೆ.

* 213 ಮತಗಳೊಂದಿಗೆ 23 ರಾಜ್ಯಗಳಲ್ಲಿ ಟ್ರಂಪ್‌ಗೆ ಮುನ್ನಡೆ. 224 ಮತಗಳೊಂದಿಗೆ 18 ರಾಜ್ಯಗಳಲ್ಲಿ ಬೈಡನ್‌ಗೆ ಮುನ್ನಡೆ.

*ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಅವರು ಆರಂಭಿಕಮುನ್ನಡೆ ಸಾಧಿಸಿದ್ದರೆ, ಪುನರಾಯ್ಕೆ ಬಯಸಿರುವ ಡೊನಾಲ್ಡ್ ಟ್ರಂಪ್ ಸ್ಥಾನ ಭದ್ರಪಡಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದಾರೆ. ಉಭಯ ನಾಯಕರ ಮಧ್ಯೆತೀವ್ರಹಣಾಹಣಿ ನಡೆದಿದೆ. ತುರುಸಿನ ಸ್ಪರ್ಧೆಯಿಂದಾಗಿ ಫಲಿತಾಂಶ ಕುತೂಹಲ ಕೆರಳಿಸುತ್ತಿದೆ.

*ಒಹಿಯೊದಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಜಯ ಗಳಿಸಿದ್ದು, ನ್ಯೂ ಹ್ಯಾಂಪ್‌ಶೈರ್‌ನಲ್ಲಿ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೊ ಬೈಡೆನ್‌ ಗೆಲುವು ಸಾಧಿಸಿದ್ದಾರೆ.

*116 ಚಲಾಯಿತ ಮತಗಳನ್ನು ಪಡೆದಿರುವ ಡೊನಾಲ್ಡ್‌ ಟ್ರಂಪ್‌ 17 ರಾಜ್ಯಗಳಲ್ಲಿ ಮುನ್ನೆಡೆ ಸಾಧಿಸಿದ್ದರೆ, 209 ಮತಗಳನ್ನು ಪಡೆದಿರುವ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೊ ಬೈಡೆನ್‌ 16 ರಾಜ್ಯಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

*ಕ್ಯಾಲಿಫೋರ್ನಿಯಾ, ಒರೆಗಾನ್, ವಾಷಿಂಗ್ಟನ್‌ನಲ್ಲಿ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೊ ಬೈಡನ್‌ಜಯಸಾಧಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್‌ ಮಾಹಿತಿ ನೀಡಿದೆ.‌

*ವೆಸ್ಟ್‌ ವರ್ಜಿನಿಯಾ ಮತ್ತು ಫ್ಲೊರಿಡಾ ರಾಜ್ಯಗಳಲ್ಲಿ ಡೊನಾಲ್ಡ್‌ ಟ್ರಂಪ್‌ ಮುನ್ನೆಡೆ ಸಾಧಿಸಿದ್ದಾರೆ.

*ವೈಟ್‌ ಹೌಸ್‌ ಪ್ರತಿನಿಧಿಗಳ ಮೇಲಿನ ನಿಯಂತ್ರಣವನ್ನು ಡೆಮಾಕ್ರಟಿಕ್‌ ಪಕ್ಷವು ಉಳಿಸಿಕೊಂಡಿದೆ ಎಂದು ನ್ಯೂರ್ಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ

*ಮತ ಎಣಿಕೆಯ ಇತ್ತೀಚಿನ ವರದಿ ಪ್ರಕಾರ ಟ್ರಂಪ್ ಅವರಿಗೆ 2,83,12,958 ಮತಗಳು ದೊರೆತಿದ್ದು, ಬೈಡೆನ್‌ಗೆ 2,77,29,886 ಮತಗಳು ದೊರೆತಿವೆ. ಆದರೆ, ಮುಂದಿನ ಸುತ್ತುಗಳಲ್ಲಿ ಬೈಡೆನ್‌ಗೆ ಹೆಚ್ಚು ಮತ ದೊರೆಯುವ ನಿರೀಕ್ಷೆ ಇದೆ ಎನ್ನಲಾಗಿದೆ.

* ಟೆಕ್ಸಾಸ್‌ನಲ್ಲಿ ಶೇ 57 ಮತ ಎಣಿಕೆ ಪೂರ್ಣ. ಬೈಡೆನ್‌ಗೆ ಶೇ 2.5ರ ಮುನ್ನಡೆ

* ನಾರ್ತ್ ಕೆರೊಲಿನಾದಲ್ಲಿ ಶೇ 60ರಷ್ಟು ಮತ ಎಣಿಕೆ ಪೂರ್ಣ, ಬೈಡೆನ್‌ಗೆ ಶೇ 5.7 ಮುನ್ನಡೆ

* ಅರ್ಕಾನ್ಸಾಸ್‌ನಲ್ಲಿ ಡೊನಾಲ್ಡ್ ಟ್ರಂಪ್‌ಗೆ ಜಯ ಸಾಧ್ಯತೆ

* ಟೆಕ್ಸಾಸ್‌ನಲ್ಲಿ ಶೇ 42ರಷ್ಟು ಮತ ಎಣಿಕೆ ಪೂರ್ಣ, ಬೈಡೆನ್‌ಗೆ ಶೇ 3.6 ಮತಗಳ ಮುನ್ನಡೆ

* ಟೆಕ್ಸಾಸ್‌ನಲ್ಲಿ ದಾಖಲೆ ಸಂಖ್ಯೆಯಲ್ಲಿ ಮೇಲ್ ಮೂಲಕ ಮತದಾನ – ಅಮೆರಿಕ ಮಾಧ್ಯಮ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT