ವಾಷಿಂಗ್ಟನ್: ಅಲ್– ಕೈದಾ ಮತ್ತು ಪಾಕಿಸ್ತಾನದ ತಾಲಿಬಾನಿ ಉಗ್ರ ಗುಂಪುಗಳ ನಾಲ್ವರು ಭಯೋತ್ಪಾದಕರನ್ನು ಜಾಗತಿಕ ಭಯೋತ್ಪಾದಕ ನಾಯಕರೆಂದು ಅಮೆರಿಕ ಘೋಷಿಸಿದೆ.

ಭಾರತೀಯ ಉಪಖಂಡಕ್ಕೆ ಅಲ್–ಕೈದಾ ಸಂಘಟನೆಯ (ಎಕ್ಯುಐಎಸ್) ಮುಖ್ಯಸ್ಥನಾದ ಒಸಾಮಾ ಮೆಹಮೂದ್, ಉಪ ಮುಖ್ಯಸ್ಥ ಅತೀಫ್ ಯಹ್ಯಾ ಘೋರಿ ಹಾಗೂ ಉಗ್ರರ ಗುಂಪುಗಳಿಗೆ ನೇಮಕಾತಿ ನಡೆಸುವ ವಿಭಾಗದ ಮುಖ್ಯಸ್ಥ ಮುಹಮ್ಮದ್ ಮರೂಫ್, ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿ ಮತ್ತುಸಾಗರೋತ್ತರದಲ್ಲಿ ಉಗ್ರ ಚಟುವಟಿಕೆ ಹಾಗೂ ಉಗ್ರರನ್ನು ನಿಭಾಯಿಸುತ್ತಿರುವಪಾಕಿಸ್ತಾನದ ತೆಹ್ರೀಕ್ –ಐ –ತಾಲಿಬಾನ್ (ಟಿಟಿಪಿ) ಉಪ ಮುಖ್ಯಸ್ಥಖಾರಿ ಅಮ್ಜದ್ ಅವರಿಗೆ ಅಮೆರಿಕ ಜಾಗತಿಕ ಉಗ್ರ ನಾಯಕರ ಹಣೆಪಟ್ಟಿ ನೀಡಿದೆ. ಈ ನಾಲ್ವರು ಜಾಗತಿಕ ಭಯೋತ್ಪಾದಕರಿಗೆ ನಿರ್ಬಂಧ ಹೇರಿದೆ.

ಅಫ್ಗಾನಿಸ್ತಾನದಲ್ಲಿಭಯೋತ್ಪಾದಕರು ನಿರ್ಭಯದಿಂದ ಕಾರ್ಯಾಚರಿಸಲು ಅವಕಾಶ ಕೊಡುವುದಿಲ್ಲ.ಅಫ್ಗಾನಿಸ್ತಾನವನ್ನು ಅಂತರರಾಷ್ಟ್ರೀಯ ಭಯೋತ್ಪಾದನೆಗೆ ವೇದಿಕೆಯಾಗಿ ಬಳಸಲೂ ಬಿಡುವುದಿಲ್ಲ.ಇದನ್ನು ಜೋ ಬೈಡನ್ ಆಡಳಿತವು ಖಾತ್ರಿಪಡಿಸಲು ಭಯೋತ್ಪಾದನೆ ನಿಗ್ರಹದ ಎಲ್ಲ ಸಾಧನಗಳನ್ನು ಬಳಸುತ್ತದೆಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಗುರುವಾರ ಹೇಳಿದ್ದಾರೆ.

‘ನಿಷೇಧ ಪಟ್ಟಿಗೆ ಸೇರಿಸಿದ ಈ ನಾಲ್ವರು ಭಯೋತ್ಪಾದಕರಿಗೆ ಸಂಬಂಧಿಸಿದ ಅಮೆರಿಕ ವ್ಯಾಪ್ತಿಯಲ್ಲಿನ ಆಸ್ತಿ–ವ್ಯವಹಾರವನ್ನು ನಿರ್ಬಂಧಿಸಲಾಗಿದೆ. ದೇಶದ ಪ್ರಜೆಗಳು ಈ ಭಯೋತ್ಪಾದಕರ ಜತೆಗೆ ಯಾವುದೇ ರೀತಿಯ ವ್ಯವಹಾರ ಮತ್ತು ವಹಿವಾಟು ನಡೆಸುವುದನ್ನು ನಿಷೇಧಿಸಲಾಗಿದೆ’ ಎಂದು ಬ್ಲಿಂಕನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.