ಗುರುವಾರ , ಡಿಸೆಂಬರ್ 3, 2020
23 °C

ಅಮೆರಿಕ ಅಧ್ಯಕ್ಷೀಯ ಚುನಾವಣೆ| ಬೈಡನ್‌ಗೆ ಇನ್ನಷ್ಟು ಮುನ್ನಡೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ನಿಖರ ಫಲಿತಾಂಶ ಇನ್ನೂ ಹೊರಬಿದ್ದಿಲ್ಲ. ಆದರೆ, ಈಗ ಚಿತ್ರಣ ಹೆಚ್ಚು ಸ್ಪಷ್ಟವಾಗಿದೆ. ಡೆಮಾಕ್ರಟ್‌ ಅಭ್ಯರ್ಥಿ ಜೋ ಬೈಡನ್‌ ಗೆಲುವಿನತ್ತ ಸಾಗುತ್ತಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

538 ಪ್ರತಿನಿಧಿಗಳ ಪೈಕಿ 270 ಸದಸ್ಯರ ಬೆಂಬಲ ಪಡೆಯುವವರು ಅಧ್ಯಕ್ಷ ರಾಗುತ್ತಾರೆ. ಬೈಡನ್‌ ಅವರ ಪಕ್ಷದ 253 ಪ್ರತಿನಿಧಿಗಳ ಆಯ್ಕೆ ಖಚಿತವಾ
ಗಿದೆ. ನಿರ್ಣಾಯಕವಾದ ಪೆನ್ಸಿಲ್ವೇನಿಯಾದಲ್ಲಿ ಬೈಡನ್‌ ಅವರಿಗೆ ಅಲ್ಪ ಮುನ್ನಡೆ ದೊರೆತಿದೆ. ಗುರುವಾರದ ವರೆಗೆ ಇಲ್ಲಿ ಟ್ರಂಪ್‌ಗೆ ಏಳು ಲಕ್ಷ ಮತಗಳ ಮುನ್ನಡೆ ಇತ್ತು. 20 ಪ್ರತಿನಿಧಿಗಳನ್ನು ಹೊಂದಿ ರುವ ಪೆನ್ಸಿಲ್ವೇನಿಯಾದಲ್ಲಿ ಗೆದ್ದರೆ ಬೈಡನ್‌ ಅವರೇ ಅಧ್ಯಕ್ಷರಾಗಲಿದ್ದಾರೆ. 

ಕ್ರಮವಾಗಿ 16 ಮತ್ತು ಆರು ಪ್ರತಿನಿಧಿಗಳಿರುವ ಜಾರ್ಜಿಯಾ ಮತ್ತು ನೆವಾಡಾ ರಾಜ್ಯದಲ್ಲಿಯೂ ಬೈಡನ್‌ಗೆ ಮುನ್ನಡೆ ಇದೆ.

ಟ್ರಂಪ್‌ ಗೋಷ್ಠಿ ನೇರಪ್ರಸಾರ ಇಲ್ಲ

ಟ್ರಂಪ್‌ ಅವರು ಶ್ವೇತಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಡೆಮಾಕ್ರಟ್‌ ಪಕ್ಷವು ಮತ ಎಣಿಕೆಯಲ್ಲಿ ವಂಚನೆ ನಡೆಸಿದೆ ಎಂದು ಆರೋಪಿಸಿದ್ದಾರೆ. ಆದರೆ ಅದಕ್ಕೆ ಅವರು ಯಾವುದೇ ಪುರಾವೆ ಕೊಟ್ಟಿಲ್ಲ. ಬೈಡನ್‌ ಅವರು ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ.

ಟ್ರಂಪ್‌ ಅವರು ಶ್ವೇತಭವನದಿಂದ ನಡೆಸುವ ಮಾಧ್ಯಮಗೋಷ್ಠಿಯನ್ನು ನೇರ ಪ್ರಸಾರ ಮಾಡದಿರಲು ಅಮೆರಿಕದ ಹಲವು ಸುದ್ದಿ ವಾಹಿನಿಗಳು ನಿರ್ಧರಿಸಿವೆ. ಅವರು ಯಾವುದೇ ಸಾಕ್ಷಿ ಆಧಾರ ಇಲ್ಲದ ಆರೋಪ ಮಾಡು
ತ್ತಿದ್ದಾರೆ ಎಂಬುದು ಈ ನಿರ್ಧಾರಕ್ಕೆ ಕಾರಣ. 

***

ಅಮೆರಿಕದ ಜನರ ಇಚ್ಛೆಯಂತೆಯೇ ಅಧ್ಯಕ್ಷರ ಆಯ್ಕೆ ನಡೆಯುತ್ತದೆ. ಹಾಗಾಗಿ, ಪ್ರತಿ ಮತವನ್ನೂ ಎಣಿಕೆ ಮಾಡಬೇಕು. ಈಗ ಹಾಗೆಯೇ ಮಾಡಲಾಗುತ್ತಿದೆ

- ಜೋ ಬೈಡನ್‌, ಡೆಮಾಕ್ರಟ್‌ ಅಭ್ಯರ್ಥಿ

ಕಾನೂನುಬದ್ಧ ಮತಗಳನ್ನು ಮಾತ್ರ ಎಣಿಸಿದರೆ ನಾನು ಗೆಲ್ಲುತ್ತೇನೆ. ಕಾನೂನುಬಾಹಿರ ಮತ ಎಣಿಸಿದರೆ ಅವರು ನಮ್ಮಿಂದ ಗೆಲುವನ್ನು ಕಸಿದುಕೊಳ್ಳಬಹುದು

- ಡೊನಾಲ್ಡ್‌ ಟ್ರಂಪ್‌, ರಿಪಬ್ಲಿಕನ್‌ ಅಭ್ಯರ್ಥಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು