ವಿಧಾನಪರಿಷತ್‌: ತೆರವಾದ 3 ಸ್ಥಾನಗಳಿಗೆ ಅ. 3ರಂದು ಚುನಾವಣೆ

ಬೆಂಗಳೂರು: ವಿಧಾನಪರಿಷತ್‌ನಲ್ಲಿ ತೆರವಾದ ಮೂರು ಸ್ಥಾನಗಳಿಗೆ ಅ. 3ರಂದು ಚುನಾವಣೆ ನಡೆಯಲಿದೆ.

ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಆಯ್ಕೆಯಾಗಿರುವ ಬಿಜೆಪಿಯ ಕೆ.ಎಸ್‌. ಈಶ್ವರಪ್ಪ ಮತ್ತು ವಿ. ಸೋಮಣ್ಣ ಹಾಗೂ ಕಾಂಗ್ರೆಸ್‌ನ ಜಿ. ಪರಮೇಶ್ವರ ಅವರು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಹೀಗೆ ಖಾಲಿಯಾದ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇದೇ 14ರಂದು ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಲಿದೆ.

ಸೆ. 22 ನಾಮಪತ್ರ ಸಲ್ಲಿಸಲು ಕೊನೆಯ ದಿನ. 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 26ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನ. ಅ. 3ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು, 5 ಗಂಟೆಗೆ ಮತಎಣಿಕೆ ನಡೆಯಲಿದೆ.

ಈಶ್ವರಪ್ಪ ಮತ್ತು ಪರಮೇಶ್ವರ ಅವಧಿ 2020ರ ಜೂನ್‌ 30ರ ವರೆಗೆ ಮತ್ತು ಸೋಮಣ್ಣ ಅವರ ಅವಧಿ 2022ರ ಜೂನ್‌ 14ರ ವರೆಗೆ ಇತ್ತು.

 

ಪ್ರಮುಖ ಸುದ್ದಿಗಳು