ಒಂಟೆ ಮಾಂಸ ಸಾಗಿಸುತ್ತಿದ್ದ ಐವರ ಬಂಧನ

ಬೀದರ್: ಹುಮನಾಬಾದ್‌ ತಾಲ್ಲೂಕಿನ ನಂದಗಾಂವದ ಹೊಲದಲ್ಲಿ 60 ಒಂಟೆಗಳನ್ನು ಕಡಿದು ಅವುಗಳ ಮಾಂಸ ಮಾರಾಟ ಮಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಒಂಟೆಗಳನ್ನು ಹರಿಯಾಣದಿಂದ ಲಾರಿಗಳಲ್ಲಿ ನಂದಗಾಂವಕ್ಕೆ ತರಲಾಗಿತ್ತು. ಹೈದರಾಬಾದ್‌ಗೆ ಮಾಂಸ ಸಾಗಣೆ ಮಾಡಲು ಒಂಟೆಗಳನ್ನು ಕೊಲ್ಲಲಾಗಿದೆ ಎನ್ನುವ ಖಚಿತ ಮಾಹಿತಿ ಬಂದ ಮೇಲೆ ಹುಮನಾಬಾದ್‌ ತಹಶೀಲ್ದಾರ್‌ ಡಿ.ಎಂ.ಪಾಣಿ, ಹಳ್ಳಿಖೇಡ(ಬಿ) ಠಾಣೆಯ ಪಿಎಸ್‌ಐ ಖಾಜಾ ಹುಸೇನಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ₹ 90 ಲಕ್ಷ ಮೌಲ್ಯದ ಮಾಸ ವಶಪಡಿಸಿಕೊಂಡಿದ್ದಾರೆ.

ಹರಿಯಾಣ ಮೂಲದ ಶಾಹೇಜ್‌ ಎನ್ನುವ ವ್ಯಕ್ತಿ ಬೀದರ್‌ನ ಉಮರ್ ಫಾರೂಖ ಹಾಗೂ ಅಮರ್‌ ಲತೀಫ್‌ ನೆರವಿನೊಂದಿಗೆ ಆದಿಲ್‌ಶಿರಾಜ್ ಹಾಗೂ ರಫಿಯೊದ್ದಿನ್‌ ಹೊಲದಲ್ಲಿ ಒಂಟೆಗಳನ್ನು ಕಡಿದಿದ್ದರು. ಇವರೆಲ್ಲರನ್ನೂ ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಪ್ರಮುಖ ಸುದ್ದಿಗಳು