ರಾಹು ಗ್ರಹ ಸಾಮಾನ್ಯವಾಗಿ ಅಶುಭ ಗ್ರಹ ಎಂಬ ಪ್ರತೀತಿ ಇದೆ. ಆದರೆ ರಾಹು ಗ್ರಹ ಧಾರಾಳಿಯಾದಾಗ ಬಸ್ ಕಂಡಕ್ಟರ್ ಆಗಿದ್ದ ಒಬ್ಬ ರಜನಿಕಾಂತ್ನಂಥವರು ನಾಲ್ಕೂವರೆ ದಶಕಗಳಿಂದ ಜನಪ್ರಿಯತೆಯ ಮೇರು ಶಿಖರದಲ್ಲಿ ರಾರಾಜಿಸಿ ಸಿನಿಮಾ ರಂಗದ ದೊರೆಯಾಗಬಲ್ಲರು. ಸಾಮಾನ್ಯವಾಗಿ ರಾಹು ಎಂಬ ಗ್ರಹವೇ ಇಲ್ಲ. ಸೂರ್ಯ ಚಂದ್ರರ ನೆಳಲು ಬೆಳಕಿನ ಫಲವಾದ ಖಗೋಳ ಶೂನ್ಯಗಳು ಪೃಥ್ವಿಯ ಜೀವ ಜಾಲದ ಮೇಲೆ ಪ್ರಭಾವ ಬೀರುವ ಮತ್ತು ಅಸಾಮಾನ್ಯ ಶಕ್ತಿಯನ್ನು ತೋರಬಲ್ಲ ರಾಹು ಹಾಗೂ ಕೇತು ಗ್ರಹಗಳಾಗಿ ಪರಿವರ್ತನೆಗೊಳ್ಳಬಲ್ಲವು. ಆಯಾ ಜಾತಕ ಕುಂಡಲಿಯಲ್ಲಿ ರಾಹು ಕೇತುಗಳ ಬಲಾಬಲ ಹೇಗೆ, ಎಷ್ಟು ಎಂಬುದರ ಮೇಲೆ ನಿರ್ಣಯ ಆಗಬೇಕು. ಹಾಗೆ ನೋಡಿದರೆ ರಜನಿಕಾಂತ್ ಸುಮಾರು 26ನೇ ವಯಸ್ಸಿನವರೆಗೂ ಪೂರ್ತಿ ಅಜ್ಞಾತರಾಗಿದ್ದರು. ಬದುಕಿನ ದಾರಿಗಾಗಿ ಬೆಂಗಳೂರಿನ ಸಿಟಿ ಬಸ್ ಕಂಡಕ್ಟರ್ ಆಗಿ ಸೇವೆ. ಆದರೆ ಚುರುಕಾದ ಅವರ ಕಾರ್ಯ ನಿರ್ವಹಣೆಯ ರೀತಿಯಿಂದಾಗಿ ಮೆಜೆಸ್ಟಿಕ್ - ಹನುಮಂತ ನಗರ ಸಿಟಿ ಬಸ್ ರೂಟಲ್ಲಿ ಅವರು ಜನಪ್ರಿಯತೆಯನ್ನು ಪಡೆದ ಕಂಡಕ್ಟರ್. 26ನೇ ವಯಸ್ಸಿನ ಹುರುಪು, ಒಂದೆರಡು ಸಿನಿಮಾಗಳಲ್ಲಿ ಕೂಡಾ ಅವರಿಗೆ ಅವಕಾಶಗಳನ್ನು ಒದಗಿಸಿತು. ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್, ಹಾಗೆಯೇ ತಮಿಳು ಚಿತ್ರರಂಗದ ಖ್ಯಾತ ಎಸ್.ಬಾಲಚಂದರ್ ಅವರ ನಿರ್ದೇಶನದ ಸಿನಿಮಾಗಳಲ್ಲಿ ರಜನಿಕಾಂತ್ ಸಿನಿಮಾ ಪ್ರಿಯರ ಗಮನ ಸೆಳೆದರು.

ಆದರೆ ಅದೇ ಕಂಡಕ್ಟರ್ ಶಿವಾಜಿ ರಾವ್ ಗಾಯಕ್ವಾಡ್ ಆಗಿದ್ದ ವ್ಯಕ್ತಿ ರಾಹು ದಶಾ ಕಾಲದ ಅಂತ್ಯದ ಹೊತ್ತಿಗೆ (ಸುಮಾರು 1980ರ ಹೊತ್ತಿಗೆ) ಬೆಳ್ಳಿ ಪರದೆಯ ರಜನಿಕಾಂತ್ ಆಗಿ ಕಾಲೂರಿದರು. ಬಿಲ್ಲಾ ಎಂಬ ತಮಿಳು ಸಿನಿಮಾ ಇನ್ನು ಹಿಂತಿರುಗಿ ನೋಡದಂತೆ ಅದ್ಭುತ ಯಶಸ್ಸನ್ನು ರಜನಿಕಾಂತರಿಗೆ ತಂದು ಕೊಟ್ಟಿತ್ತು.

ಬಿಲ್ಲಾ ಸಿನಿಮಾ ಡಾನ್ ಎಂಬ ಹಿಂದಿ ಚಿತ್ರದ ರೀಮೇಕ್. ಈ ಚಿತ್ರ ಹಿಂದಿ ಚಿತ್ರರಂಗದಲ್ಲಿ ಸೂಪರ್ ಡ್ಯೂಪರ್ ಯಶಸ್ಸಿನೊಂದಿಗೆ ಗಲ್ಲಾಪೆಟ್ಟಿಗೆಯನ್ನು ದೊಡ್ಡ ಪ್ರಮಾಣದಲ್ಲಿ ತುಂಬಿಸಿದ (ಅಮಿತಾಭ್ ಬಚ್ಚನ್ ನಾಯಕ ನಟ) ಯಶಸ್ವಿ ಚಿತ್ರವಾಗಿತ್ತು. ಬಿಲ್ಲಾ ಚಿತ್ರದಲ್ಲಿ ವಿಶಿಷ್ಟ ಬಗೆಯ ಆ್ಯಕ್ಷನ್ ಕಿಂಗ್ ಆಗಿ ರಜನಿಕಾಂತ್ ಪರಿವರ್ತನೆಗೊಂಡರು. ಯಶಸ್ಸೇ ಹಾಗೆ! ಅದು ಬರುವಾಗ ಒಬ್ಬ ವ್ಯಕ್ತಿಗೆ ತುಲನೆ ಇರದ ಹೊಸ ಬಗೆಯನ್ನೇ ಅನುಗ್ರಹಿಸುತ್ತದೆ. ಎಗ್ಗಿಲ್ಲದೆ ಬೌಂಡರಿ, ಸಿಕ್ಸರ್ ಹೊಡೆಯುವ ಶಕ್ತಿ ವೀರೇಂದ್ರ ಸೆಹ್ವಾಗ್ಗೆ ಆವಾಹನೆ ಆಗಿ, ಎರಡು ಬಾರಿ ತ್ರಿವಳಿ ಶತಕ ಹೊಡೆದರು ಟೆಸ್ಟ್ ಪಂದ್ಯದಲ್ಲಿ. ಇವರಿಗೆ ನೆರವಿಗೆ ಬಂದದ್ದು ಕೂಡ ರಜನಿಕಾಂತ್ಗೆ ಒದಗಿ ಬಂದ ರಾಹು ಗ್ರಹವೇ. ಗುರು ಗ್ರಹದ ಒಡೆತನದ ಪೂರ್ವಾಭಾದ್ರ ನಕ್ಷತ್ರದಲ್ಲಿ ಸ್ಥಿತನಾಗಿದ್ದ ರಾಹು, ರಜನೀಕಾಂತ್ಗೆ ಹಿಂತಿರುಗಿ ನೋಡದ ಯಶಸ್ಸಿನ ಏಣಿಯೊಂದನ್ನು ನೀಡಿ, ತಮಿಳು ಜನಸ್ತೋಮದ ನಡುವೆ ಹೀರೋ ಆಗಿಸಿ ಮುಂದಕ್ಕೆ, ಖ್ಯಾತಿಯ ಮೇರು ಶಿಖರಕ್ಕೆ ತಳ್ಳಿದ್ದ. ಕರ್ನಾಟಕದಿಂದ ಬಂದ ರಜನಿಕಾಂತ್ ಅವರನ್ನು ತಮಿಳಿನ ಜನ ಇಂದೂ, ಈಗಲೂ ಇನ್ನಿಲ್ಲದ ರೀತಿಯಲ್ಲಿ ಆರಾಧಿಸುತ್ತಾರೆ.

ಗುರು ಗ್ರಹದ ರಕ್ಷೆ ಅಕ್ಷಯವಾಯ್ತು

ವಾಸ್ತವವಾಗಿ ಪೂರ್ವ ಪುಣ್ಯ ಸ್ಥಾನದ ಯಜಮಾನ ಗುರು ಗ್ರಹವು, ರಾಹು ದಶಾ ನಂತರದಲ್ಲಿ ಕಂಡರಿಯದ, ಕೇಳರಿಯದ ಮಹತ್ವದ ತಾರಾ ಮೌಲ್ಯವನ್ನು ರಜನಿಕಾಂತ್ ಅವರಿಗೆ ನೀಡಿತು. ಈ ಸಂದರ್ಭದಲ್ಲಿ ಬಂದ ಪಡಿಯಪ್ಪ ಸಿನಿಮಾ ಬಾಕ್ಸ್ ಆಫೀಸಿನ ವಿಚಾರದಲ್ಲಿ ಕಂಡ ಯಶಸ್ಸಂತೂ ಅಪೂರ್ವ. ತೀವ್ರ ಸ್ವರೂಪದ ಆರೋಗ್ಯದ ಏರುಪೇರಾದಾಗಲೂ ಮಹಾ ಮೃತ್ಯುಂಜಯನ ಸ್ವರೂಪದಲ್ಲಿ ಗುರು ಗ್ರಹವು ರಜನಿಕಾಂತ್ ಅವರನ್ನು ಪ್ರಾಣಾಪಾಯದಿಂದ ಹೊರ ತಂದು 73 ನೇ ವಯಸ್ಸಿನಲ್ಲಿಯೂ ಜೈಲರ್ ಅಂತಹ ಮೆಗಾ ಹಿಟ್ ಸಿನಿಮಾದಲ್ಲಿ ನಟಿಸುವಂತಾದದ್ದು ಈಗ ಇತಿಹಾಸ. 2024 ರಲ್ಲಿ ಹೊರ ಬಂದ ಲಾಲ್ ಸಲಾಂ ಸೋಲು ಕಂಡಿತು. ಆದರೆ ವೆಟ್ಟೈಯಾನ್ ಯಶಸ್ವಿಯಾಯ್ತು. 1983ರಿಂದ 1999 ರವರೆಗಿನ ಕಾಲಘಟ್ಟದಲ್ಲಿ ರಜನಿಕಾಂತ್ ಬಹುತೇಕವಾಗಿ ಮುಟ್ಟಿದ್ದೆಲ್ಲ ಚಿನ್ನವೇ ಆಗಿತ್ತು. ಇದು ಗುರು ಗ್ರಹದ ಅಕ್ಷಯ ರಕ್ಷೆಯಾಯ್ತು. ಬೆಂಗಳೂರಿನ ಸಿಟಿ ಬಸ್ ತೆರೆದು ತೋರಿದ ದಾರಿ ತಮಿಳುನಾಡಿನತ್ತ ರಜನಿಯವರನ್ನು ಮುಖ ಮಾಡಿಸಿತು. ತಮಿಳಿಗರಿಗೆ ರಜನೀಕಾಂತ್ ಪ್ರೀತಿಯ ತಲೈವ ಆದರು. ಇದು ಸಾಧ್ಯವಾದದ್ದು ಗುರು ದಶಾ ಕಾಲದ 16 ವರ್ಷದ ಅವಧಿಯಲ್ಲಿ. ಕಳತ್ರ ಸ್ಥಾನದಲ್ಲಿ (ದಾಂಪತ್ಯದ ಸ್ಥಳ) ಇರುವ ಗುರು ಗ್ರಹ ರಜನಿಯವರ ಜೀವನದ ಪರಮೋಚ್ಚ ಯಶಸ್ಸಿಗೆ ಸಿದ್ಧಿಕಲಶವಾಗಿ ವರ್ಚಸ್ಸನ್ನು ಹಿಗ್ಗಿಸಿತು. ಶನಿ ಗ್ರಹ ಒದಗಿಸತೊಡಗಿದ್ದ ಪ್ರತಿ ಬಿಕ್ಕಟ್ಟುಗಳನ್ನೂ ನಿಯಂತ್ರಿಸುವ ಸಂಜೀವಿನಿಯಾದದ್ದು ಗುರು ಗ್ರಹ.

ಶನಿ ದಶಾ ಕಾಲದ ಅಗ್ನಿ ದಿವ್ಯ

ಶನಿ ಗ್ರಹದ ಮಹಾ ದಶಾಕಾಲವು ಗಣನೀಯವಾದ ಏಳ್ಗೆಯನ್ನು ತಾರಾ ಮೌಲ್ಯದ ವಿಚಾರದಲ್ಲಿ ಕಾಪಾಡಿಕೊಂಡು ಬಂದಿತ್ತಾದರೂ ಆರೋಗ್ಯದ ವಿಚಾರದಲ್ಲಿ ಕೆಲವು ತೊಂದರೆಗಳನ್ನು ಸೃಷ್ಟಿಸತೊಡಗಿತ್ತು. ಆರೋಗ್ಯ, ಲವಲವಿಕೆ, ಚೈತನ್ಯಗಳನ್ನು ರಜನಿಕಾಂತ್ ಅವರಿಗೆ ಒದಗಿಸಬೇಕಾದ ಸೂರ್ಯ ಗ್ರಹವು ರಜನಿಯವರ ಜನ್ಮ ಕುಂಡಲಿಯಲ್ಲಿ ಶನಿ ಗ್ರಹದ ದೃಷ್ಟಿಗೆ ಬಿದ್ದಿದ್ದ ಕಾರಣ ಆರೋಗ್ಯದ ವಿಷಯದಲ್ಲಿ ತಾಪತ್ರಯಕ್ಕೆ ಒಡ್ಡಿತ್ತು. ರಾಜಕೀಯ ರಂಗದಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕೆಂಬ ವಿಚಾರ ಗಟ್ಟಿಯಾದ ಒಂದು ನೆಲೆಯನ್ನು ನಿರ್ಮಿಸಿಕೊಳ್ಳಲು ರಜನಿಯವರಿಗೆ ಒಂದು ಹೊಯ್ದಾಟವನ್ನು ನೀಡಿದ್ದು ಸುಳ್ಳಲ್ಲ. ಶನಿ ದಶಾ 1990 ರಲ್ಲಿ ಶುರುಗೊಳ್ಳುತ್ತಿದ್ದಂತೆ ಹೊರ ಬಂದ ರಜನಿಯವರ ಬುಲಂದಿ ಫಿಲಂ ಕೂಡಾ ಬಾಕ್ಸ್ ಆಫೀಸಿನಲ್ಲಿ ಸೋತಿತ್ತು. ಆದಾಗ್ಯೂ ನಾಯಕ ನಟನಾಗಿ ರಜನಿ ಪ್ರಶ್ನಾತೀತ ವ್ಯಕ್ತಿಯಾಗಿ ಏರು ಯಶಸ್ಸನ್ನು ಸಂಪಾದಿಸಿಕೊಂಡಿದ್ದರು. ಶನಿ ಗ್ರಹ ಕೆಳಗೆ ತಳ್ಳುವ ವಿಚಾರ ದಟ್ಟವಾಗಿಯೇ ಇತ್ತಾದರೂ ಭಾಗ್ಯಾಧಿಪತಿ ಮಂಗಳನ ಕಾರಣದಿಂದಾಗಿ, ಪೂರ್ವ ಪುಣ್ಯಾಧಿಪತಿ ಗುರು ಗ್ರಹದ ಕಾರಣದಿಂದಾಗಿಯೂ, ಕೆಲಸದ ವಿಷಯದಲ್ಲಿ, ಪ್ರಾಪ್ತಿಯ ವಿಚಾರಗಳಲ್ಲಿ ಗರಿಷ್ಠ ಯಶಸ್ಸನ್ನು ಅನುಗ್ರಹಿಸಲೇಬೇಕಾದ ಬುಧ ಶುಕ್ರ ಗ್ರಹಗಳ ಪ್ರಾಬಲ್ಯದ ಕಾರಣದಿಂದಲೂ ಸಿನಿಮಾ ರಂಗದಲ್ಲಿ ರಜನಿಯವರ ಬಲಾಢ್ಯತೆಗೆ ಧಕ್ಕೆ ಬರಲಿಲ್ಲ. ಪೂರ್ವ ಪುಣ್ಯ (ಜನ್ಮ ಕುಂಡಲಿಯ 5 ನೇ ಮನೆ) ಸ್ಥಳದಲ್ಲಿ ಬುಧ ಹಾಗೂ ಶುಕ್ರರು ಸ್ಥಿತರಾಗಿದ್ದ ಕಾರಣ ಚಿತ್ರ ರಂಗದ ಪ್ರಶ್ನಾತೀತ ಶಕ್ತಿಯಾಗಿದ್ದ ರಜನಿಕಾಂತ್ ಅವರನ್ನು ಶನಿ ಗ್ರಹ ದುರ್ಬಲಗೊಳಿಸಲು ಸಾಧ್ಯವಾಗಲಿಲ್ಲ.

ಆದರೆ ಶನಿ ದಶಾ ಕಾಲದ 19 ವರ್ಷದ ಅವಧಿಯಲ್ಲಿ ಹಲವಾರು ರೀತಿಯ ಆರೋಗ್ಯದ ಬಾಧೆಗಳನ್ನು ರಜನಿಕಾಂತ್ ಎದುರಿಸುತ್ತಲೇ ಇದ್ದರು. ಜನಮಾನಸದಲ್ಲಿ ರಜನಿಕಾಂತ್ ಆರಾಧ್ಯ ದೇವತೆಯಾಗಿ ಇದ್ದರೂ ಇವರ ಅಭಿನಯದ ಕೆಲವು ಫಿಲಂಗಳು ಯಶಸ್ಸು ಪಡೆಯದೆಯೂ ಹೋಗಿದ್ದವು. ಇವರದೇ ಪ್ರೊಡಕ್ಷನ್ನ ಬಾಬಾ ತೀವ್ರ ಸ್ವರೂಪದ ಬಾಕ್ಸ್ ಆಫೀಸ್ ಕುಸಿತ ಕಂಡಾಗ ಫಿಲ್ಮ್ ಹಂಚಿಕೆದಾರರಿಗೆ ಹಣ ಹಿಂತಿರುಗಿಸುವ ಹೃದಯ ವೈಶಾಲ್ಯವನ್ನೂ ಪ್ರದರ್ಶಿಸಿದರು. ಹೀಗೆ ಶನಿ ಗ್ರಹವು ರಜನಿಯವರನ್ನು ಕಾಡಿದ್ದೂ ಸತ್ಯ. 2011ರಲ್ಲಿ ಶನಿ ದಶಾ ರವಿ ಭುಕ್ತಿಯ ಸಂದರ್ಭದಲ್ಲಿ ತುಂಬಾ ದೊಡ್ಡದಾದ ಆರೋಗ್ಯದಲ್ಲಿನ ಏರುಪೇರನ್ನು ರಜನೀಕಾಂತ್ ಎದುರಿಸಿದರು. ಚಿಕಿತ್ಸೆಗಾಗಿ ಸಿಂಗಪುರದ ಮೌಂಟ್ ಎಲಿಜಬೆತ್ ಹಾಸ್ಪಿಟಲ್ಗೆ ಕೂಡಾ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿದ್ದರು. ಹೀಗಾಗಿ ಶನಿ ಗ್ರಹ ರಜನಿ ಅವರನ್ನು ತುಂಬಾ ಕಾಡಿತ್ತು, ಬಸವಳಿಯುವಂತೆ ಮಾಡಿತ್ತು. ರಾಜಕೀಯ ರಂಗಕ್ಕೆ ಧುಮುಕುವ ಉತ್ಸಾಹ, ಅಭಿಮಾನಿಗಳ ಒತ್ತಡ ಇದ್ದರೂ ಆರೋಗ್ಯದ ವ್ಯತ್ಯಸ್ತ ಸ್ಥಿತಿ ಅದಕ್ಕೆ ಅವಕಾಶ ಕೊಡಲಿಲ್ಲ. ಈ ಮಧ್ಯೆ ಪದ್ಮ ವಿಭೂಷಣ ಪುರಸ್ಕಾರವೂ ರಜನಿಯವರಿಗೆ ದೊರಕಿತು.

ಬುಧ ಗ್ರಹ ದಶಾ ಕಾಲ

ಈಗ ಬುಧ ದಶಾ ಕಾಲ ನಡೆಯುತ್ತಿದ್ದು ರಜನಿಕಾಂತ್ ವಿಚಾರದಲ್ಲಿ ಬುಧ ಗ್ರಹವು ಆಂತರ್ಯದಲ್ಲಿ ವಿಷದ ಘಟಕವನ್ನು ಹೊಂದಿದೆಯಾದರೂ ಶುಭ ಗ್ರಹವಾಗಿ ಪೂರ್ವ ಪುಣ್ಯ ರಾಶಿಯಲ್ಲಿದ್ದು ರಜನಿಯವರಿಗೆ ಆರೋಗ್ಯದ ಬಾಧೆಯನ್ನು ನಿಯಂತ್ರಿಸುವ ಪವಾಡವನ್ನೂ ಮಾಡುತ್ತಿದೆ. ಆದರೂ ಮುಂದಿನ ಮೂರು ವರ್ಷಗಳ ಕಾಲ ರಜನಿಕಾಂತ್ ಅವರು ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಹೊಂದಿರಬೇಕು. ಶನಿ ಗ್ರಹ ಸದ್ಯ ಜಲ ರಾಶಿಯಾದ ಮೀನ ರಾಶಿಯಲ್ಲಿ ಘಾತಕ ಶಕ್ತಿ ಹೊಂದಿದ್ದು ಬಹಳಷ್ಟು ಎಚ್ಚರ ಅವಶ್ಯವಾಗಿದೆ. ರಜನಿಕಾಂತ್ ಅವರ ಹೊಸ ಸಿನಿಮಾಗಳು ಗೆಲ್ಲಲಿ. ಶ್ರೀ ಲಕ್ಷ್ಮಿಯ (ಶುಕ್ರ ಗ್ರಹದ) ಸಿದ್ಧಿ ಸಿಗಲಿ. ರಜನಿಕಾಂತ್ ಗೆಲ್ಲುತ್ತಿರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.