2014ರಲ್ಲಿ ಪ್ರತಿ ಗ್ರಾಂ.ಗೆ ₹2800–3000 ಇದ್ದ ಚಿನ್ನದ ಬೆಲೆ ಈಗ ₹15,000 ಗಡಿ ದಾಟಿದೆ. ಈ ವರ್ಷದ ಅಂತ್ಯಕ್ಕೆ ₹20,000 ತಲುಪಿದರೂ ಅಚ್ಚರಿಯಿಲ್ಲವೆಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಯಾವುದೇ ವಸ್ತು ದುಬಾರಿಯಾದಾಗ ಬೇಡಿಕೆ ಕುಸಿದು, ಬೆಲೆ ಇಳಿಕೆಯಾಗುವುದು ಸಹಜ. ಯುದ್ಧವಾದಾಗ, ಜಾಗತಿಕ ಸಮಸ್ಯೆಗಳು ಎದುರಾದಾಗ ಎಲ್ಲ ಬಗೆಯ ಹೂಡಿಕೆಗಳು ಹೂಡಿಕೆದಾರರಲ್ಲಿ ಸಣ್ಣ ಭಯ ಮೂಡಿಸುತ್ತವೆ. ಆದರೆ ಚಿನ್ನ ಹಾಗಲ್ಲ, ಯಾರ, ಯಾವ ಭಯವೂ ಇಲ್ಲದೆ ಬೆಲೆ ಏರುತ್ತಲೇ ಇದೆ. ಎಷ್ಟೇ ಬೆಲೆ ಹೆಚ್ಚಾದರೂ ಬೇಡಿಕೆ ಕುಸಿಯುತ್ತಿಲ್ಲ. ಎಂಥ ಹೊತ್ತಿನಲ್ಲಿಯೂ ಚಿನ್ನ ಸುರಕ್ಷಿತ ಹೂಡಿಕೆ ಎಂಬ ನಂಬಿಕೆಯೇ ಇದಕ್ಕೆಲ್ಲ ಕಾರಣ.

ಇಸ್ರೇಲ್–ಇರಾನ್ ಯುದ್ಧದಿಂದ ಕೊಲ್ಲಿ ರಾಷ್ಟ್ರಗಳ ಮಾರುಕಟ್ಟೆ ಅಲುಗಾಡುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆ ಏರಿಕೆ ಹೊರತಾಗಿಯೂ ಪೆಟ್ರೋಲಿಯಂ ಉತ್ಪನ್ನಗಳು ಬೇರೆಯ ಹಲವು ಕಾರಣಗಳಿಗೆ ಬೇಕು. ಈ ಉತ್ಪನ್ನಗಳಿಗೆ ಜಗತ್ತು ಅವಲಂಬಿತವಾಗಿರುವುದು ಕೊಲ್ಲಿ ರಾಷ್ಟ್ರಗಳನ್ನು. ಹೀಗಾಗಿ ಅಲ್ಲಿನ ಆರ್ಥಿಕ ಅಸ್ಥಿರತೆ ಒಟ್ಟಾರೆ ಜಗತ್ತಿನ ವಹಿವಾಟಿನ ಮೇಲೆಯೂ ಪರಿಣಾಮ ಬೀರಲಿದೆ. ಜತೆಗೆ ಯುದ್ಧ ಕಣದಲ್ಲಿ ನೇರವಾಗಿ ಭಾಗಿಯಾಗಿರುವ ಅಮೆರಿಕದ ಷೇರು ಮಾರುಕಟ್ಟೆ ಕೂಡ ಅಸ್ಥಿರವಾಗಿದೆ. ಬುಡ ಅಲ್ಲಾಡಿದಾಗ ಮರವೂ ಸ್ವಲ್ಪವಾದರೂ ಅಲುಗಾಡುತ್ತದೆ ಎಂಬಂತೆ ವಿಶ್ವದ ದೊಡ್ಡಣ್ಣನ ಮೇಲಿನ ಈ ಪರಿಣಾಮ ಉಳಿದವರಿಗೂ ದುಷ್ಪರಿಣಾಮವಾಗಿ ಪರಿಣಮಿಸಲಿದೆ.

ಯುದ್ಧ ನಡೆಯುತ್ತಿದೆ, ಷೇರು ಮಾರುಕಟ್ಟೆಗಳು ಕುಸಿತದ ಹಾದಿ ಹಿಡಿದಿವೆ. ಡಾಲರ್ ದುರ್ಬಲಗೊಂಡಿದೆ. ಇಂಥ ಹೊತ್ತಿನಲ್ಲಿ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಎಂಬುದು ಹಲವರ ಲೆಕ್ಕಾಚಾರ. ‘ಆರ್ಥಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಹೆಚ್ಚಾದಾಗ ಚಿನ್ನ ಹೊಳೆಯುತ್ತದೆ’ ಎಂಬುದು ಹಲವು ಸಲ ಸಾಬೀತಾಗಿದೆ. ಹೀಗಾಗಿ 2026ರ ಅಂತ್ಯಕ್ಕೆ ಚಿನ್ನದ ಬೆಲೆ 10ಗ್ರಾಂ.ಗೆ ₹2ಲಕ್ಷ ದಾಟಬಹುದೆಂದು ಅಂದಾಜಿಸಲಾಗುತ್ತಿದೆ.

ಯಾವುದೇ ದೇಶದ ರಾಜಕೀಯ ಅಸ್ಥಿರತೆ, ಯುದ್ಧಗಳಂಥ ಸಂದರ್ಭದಲ್ಲಿ ಹೂಡಿಕೆದಾರರು ಷೇರು, ಕರೆನ್ಸಿಗಳಲ್ಲಿ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಾರೆ. ಆಗ ಜನ ಚಿನ್ನದತ್ತ ಮುಖ ಮಾಡುವುದು ಸಾಮಾನ್ಯ. ಕೇವಲ ಜನರೂ ಮಾತ್ರವಲ್ಲ ಸರ್ಕಾರಗಳು ಕೂಡ ಚಿನ್ನವನ್ನು ಉಳಿದೆಲ್ಲ ಹೂಡಿಕೆಗಿಂತ ಸುರಕ್ಷಿತ ಎಂದು ನಂಬುತ್ತವೆ. ವಿಶೇಷವಾಗಿ ಇಂಥ ಆಪತ್ತಿನಲ್ಲಿ ಭಾರತ, ಚೀನಾದಂಥ ರಾಷ್ಟ್ರಗಳು ಬೃಹತ್ ಪ್ರಮಾಣದಲ್ಲಿ ಚಿನ್ನ ಖರೀದಿಸುತ್ತವೆ, ಆರ್ಬಿಐನಂಥ ಕೇಂದ್ರೀಯ ಬ್ಯಾಂಕ್ಗಳು ಕೂಡ ಬಂಗಾರವನ್ನು ಸಂಗ್ರಹಿಸಿಡುತ್ತವೆ ಎಂದು ಅಂಕಿಅಂಶಗಳು ಹೇಳುತ್ತಿವೆ.

ಡಾಲರ್ ದುರ್ಬಲತೆಯಿಂದ ದೇಶದ ಆರ್ಥಿಕತೆಯನ್ನು ರಕ್ಷಿಸಿಕೊಳ್ಳಲು ಚಿನ್ನವನ್ನು ಮೀಸಲು ನಿಧಿಯಾಗಿ ಸಂಗ್ರಹಿಸಿಕೊಳ್ಳುವುದು ಬುದ್ಧಿವಂತ ನಡೆ. ಇನ್ನೊಂದೆಡೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಮೌಲ್ಯ ಯಾವಾಗಲೂ ಡಾಲರ್ನಲ್ಲಿಯೇ ಇರುತ್ತದೆ. ಡಾಲರ್ ಕುಸಿದಾಗ ಇತರೆ ಕರೆನ್ಸಿ ಬಳಸುವವರಿಗೆ ಚಿನ್ನ ಅಗ್ಗವೆನಿಸುತ್ತದೆ. ಈ ಕಾರಣದಿಂದಲೂ ಡಾಲರ್ ದುರ್ಬಲಗೊಂಡಾಗ ಚಿನ್ನ ಹೆಚ್ಚು ಹೊಳೆಯುತ್ತದೆ.

ಚಿನ್ನದ ಮಾರುಕಟ್ಟೆ ಗಮನಿಸಿದರೆ ಪ್ರತಿ ವರ್ಷದ ಬೇಡಿಕೆಯಲ್ಲಿ ಅರ್ಧದಷ್ಟು ಚಿನ್ನ ಆಭರಣಕ್ಕೆ ಬಳಕೆಯಾಗುತ್ತದೆ. ಶೇಕಡ 25ರಷ್ಟು ಹೂಡಿಕೆಗೆ ಹೋದರೆ, ಉಳಿದ ಶೇಕಡ 25ರಷ್ಟನ್ನು ಸೆಂಟ್ರಲ್ ಬ್ಯಾಂಕ್ಗಳು ಖರೀದಿಸುತ್ತವೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ನ ಅಂಕಿಅಂಶಗಳು ಹೇಳುತ್ತವೆ. ಹೀಗಾಗಿ ಚಿನ್ನದ ಬೆಲೆ ಕೇವಲ ಆಭರಣಗಳ ಬೇಡಿಕೆ ಅಥವಾ ಖರೀದಿ ಅಂಶಗಳ ಮೇಲೆ ಮಾತ್ರ ಅವಲಂಬಿತವಾಗಿಲ್ಲ ಎಂಬುದನ್ನು ನಾವು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕು. ದೇಶದ ಆರ್ಥಿಕ ರಕ್ಷಣೆಗೆ ಮೀಸಲು ನಿಧಿಯಾಗಿ ಚಿನ್ನ ಆಪದ್ಬಾಂಧವ ಎಂದು ಆರ್ಬಿಐನಂಥ ಹಲವು ದೇಶಗಳ ಸೆಂಟ್ರಲ್ ಬ್ಯಾಂಕ್ಗಳು ನಂಬುತ್ತವೆ. ನಮ್ಮಲ್ಲಿಯೂ ಆಭರಣಕ್ಕಿಂತ ಹೆಚ್ಚಾಗಿ ಆಪತ್ ಕಾಲಕ್ಕೆ ಆಗುತ್ತದೆ ಎಂದು ಚಿನ್ನ ಕೂಡಿಡುವವರ ಸಂಖ್ಯೆ ಹೆಚ್ಚು. ಅದು ನಿಜ ಕೂಡ. ಚಿನ್ನದ ಸಾಲ ಬಹಳ ಸುಲಭವಾಗಿ ಸಿಗುತ್ತದೆ!

ಬೇಡಿಕೆಯ ಪ್ರಮಾಣಕ್ಕೆ ಚಿನ್ನದ ಉತ್ಪಾದನೆ ಇಲ್ಲದೆ ಇರುವುದು, ಬೇಡಿಕೆ ಕುಸಿಯದೇ ಇರುವುದು ಚಿನ್ನದ ಬೆಲೆ ಏರಿಕೆ ಬಹು ಮುಖ್ಯ ಕಾರಣ. ಹಾಗಂತ ಚಿನ್ನದ ಸದ್ಯಕ್ಕಂತೂ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.