ಚೆನ್ನೈ: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದರಗಳ ಪರಿಷ್ಕರಣೆಯಿಂದ ದೇಶದ ಪ್ರತಿಯೊಬ್ಬ ನಾಗರಿಕನಿಗೂ ದೊಡ್ಡ ಗೆಲುವು ಸಿಕ್ಕಂತಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಣ್ಣಿಸಿದ್ದಾರೆ.

ಚೆನ್ನೈ ಸಿಟಿಜನ್ಸ್ ಫೋರಮ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇಶದ ಪ್ರತಿಯೊಂದು ರಾಜ್ಯದಲ್ಲಿ ತನ್ನದೇ ಆದ ಹಬ್ಬಗಳನ್ನು ಆಚರಿಸುತ್ತಿರುವುದರಿಂದ ದೀಪಾವಳಿ ಹಬ್ಬಕ್ಕೂ ಮುನ್ನವೇ ಜಿಎಸ್ಟಿ ಸುಧಾರಣೆಗಳನ್ನು ಜಾರಿಗೆ ತರಲು ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಗೂ ಮುಂಚಿತವಾಗಿಯೇ ನಿರ್ಧರಿಸಲಾಗಿತ್ತು’ ಎಂದು ಅವರು ಹೇಳಿದ್ದಾರೆ.

‘ಜನರು ಪ್ರತಿನಿತ್ಯ ಬಳಸುವ ಎಲ್ಲಾ ಉತ್ಪನ್ನಗಳ ಮೇಲೆ ಜಿಎಸ್ಟಿ ಸುಧಾರಣೆಗಳ ಪರಿಣಾಮವನ್ನು ಕಾಣಬಹುದಾಗಿದೆ. ಆದೇ ರೀತಿ ನಾವು ವ್ಯಾಪಾರಿಗಳಿಗೂ ಕಾರ್ಯವಿಧಾನವನ್ನು ಸರಳಗೊಳಿಸಿದ್ದೇವೆ. ಯಾವುದೇ ಉತ್ಪನ್ನದ ಮೇಲೆ ಶೇ 28ರಷ್ಟು ಜಿಎಸ್ಟಿ ತೆರಿಗೆ ವಿಧಿಸುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಜಿಎಸ್ಟಿ ಮಂಡಳಿಯು 350ಕ್ಕೂ ಹೆಚ್ಚು ಉತ್ಪನ್ನಗಳ ತೆರಿಗೆ ದರಗಳನ್ನು ಪರಿಷ್ಕರಣೆ ಮಾಡಿದೆ. ಪ್ರಸ್ತುತ ಶೇ 5, 12, 18 ಹಾಗೂ ಶೇ 28ರಂತೆ ತೆರಿಗೆ ಹಂತಗಳಿವೆ. ಇವುಗಳನ್ನು ಪರಿಷ್ಕರಿಸಿ, ಕೇವಲ ಶೇ 5 ಹಾಗೂ ಶೇ 18ರಂತೆ ಎರಡು ಹಂತಗಳ ಜಿಎಸ್ಟಿ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಿತ್ಯ ಬಳಕೆಯ ಹತ್ತು ಹಲವು ಉತ್ಪನ್ನಗಳು, ಸೇವೆಗಳ ಮೇಲಿನ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡುವ ತೀರ್ಮಾನವನ್ನು ಜಿಎಸ್ಟಿ ಮಂಡಳಿಯು ಇತ್ತೀಚೆಗೆ ತೆಗೆದುಕೊಂಡಿದ್ದು, ಈ ತೀರ್ಮಾನಗಳು ನವರಾತ್ರಿಯ ಮೊದಲ ದಿನವಾದ ಇದೇ 22ರಿಂದಲೇ ಜಾರಿಗೆ ಬರಲಿವೆ.
. GST Reduction: ದ್ವಿಚಕ್ರ ವಾಹನ, ಕಾರು ಬೆಲೆ ಇಳಿಕೆ.GST ಪರಿಷ್ಕರಣೆಯ ಸಂಪೂರ್ಣ ಪ್ರಯೋಜನ ಗ್ರಾಹಕರಿಗೆ; ಕೇಂದ್ರ ನಿಗಾವಹಿಸಲಿದೆ: ಗೋಯಲ್.GST Reforms | ಪ್ರಯೋಜನ ವರ್ಗಾವಣೆ ಮೇಲೆ ನಿಗಾ: ನಿರ್ಮಲಾ ಸೀತಾರಾಮನ್.GST ಪರಿಷ್ಕರಣೆ: ಯಾವೆಲ್ಲ ವಸ್ತುಗಳಿಗೆ ಶೂನ್ಯ ತೆರಿಗೆ?.New GST Rules | ಯಾವೆಲ್ಲಾ ಅಗ್ಗ? ಯಾವೆಲ್ಲಾ ದುಬಾರಿ? ಇಲ್ಲಿ ತಿಳಿಯಿರಿ.ಐಷಾರಾಮಿ ಕಾರು, ತಂಬಾಕು ಉತ್ಪನ್ನ ಸೇರಿ ಈ ಎಲ್ಲಾ ಸರಕುಗಳ ಮೇಲೆ ಶೇ40ರಷ್ಟು GST .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.