ನವದೆಹಲಿ: ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯಲ್ಲಿ ಹಲವು ಸುಧಾರಣೆಗಳನ್ನು ತರುವ ಪ್ರಸ್ತಾವವನ್ನು ಘೋಷಿಸಿದ ಬೆನ್ನಲ್ಲೇ ವಾಹನ ಕಂಪನಿಗಳ ಷೇರುಗಳ ಖರೀದಿ ಹೆಚ್ಚಳದಿಂದ ದೇಶದ ಷೇರುಪೇಟೆ ಸೂಚ್ಯಂಕವು ಸೋಮವಾರ ಏರಿಕೆ ದಾಖಲಿಸಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1,168 ಅಂಶ ಏರಿಕೆಯಾಗಿ, 81,765ಕ್ಕೆ ವಹಿವಾಟು ಅಂತ್ಯಗೊಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 245 ಅಂಶ ಏರಿಕೆಯಾಗಿ, 24,876ಕ್ಕೆ ಕೊನೆಗೊಂಡಿದೆ.

ಸೆನ್ಸೆಕ್ಸ್ ಸಂಸ್ಥೆಗಳ ಪೈಕಿ ಮಾರುತಿ ಶೇ 8.94ರಷ್ಟು, ಬಜಾಜ್ ಫೈನಾನ್ಸ್ ಶೇ 5, ಅಲ್ಟ್ರಾಟೆಕ್ ಸಿಮೆಂಟ್ ಶೇ 3.71 ಮತ್ತು ಬಜಾಜ್ ಫಿನ್ಸರ್ವ್ ಶೇ 3.7ರಷ್ಟು ಏರಿಕೆ ಕಂಡಿವೆ. ಜತೆಗೆ, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಹಿಂದೂಸ್ತಾನ್ ಯೂನಿಲಿವರ್ ಸಂಸ್ಥೆ ಕೂಡಾ ಲಾಭ ಗಳಿಸಿವೆ.

ಹುಂಡೈ ಮೋಟಾರ್ ಇಂಡಿಯಾ ಶೇ 8.45, ಅಶೋಕ್ ಲೇಲ್ಯಾಂಡ್ ಶೇ 8.12, ಟಿವಿಎಸ್ ಮೋಟಾರ್ ಶೇ 6.58 ಮತ್ತು ಹೀರೊ ಮೋಟೋಕಾರ್ಪ್ ಶೇ 5.9 ರಷ್ಟು ಏರಿಕೆ ಕಂಡಿವೆ.

ಆದಾಗ್ಯೂ, ಐಟಿಸಿ ಶೇ 1.26ರಷ್ಟು ಕುಸಿತ ಕಂಡು ಅತಿ ಹೆಚ್ಚು ನಷ್ಟ ಅನುಭವಿಸಿದೆ. ಎಟರ್ನಲ್, ಟೆಕ್ ಮಹೀಂದ್ರಾ ಮತ್ತು ಲಾರ್ಸೆನ್ ಆ್ಯಂಡ್ ಟೊಬ್ರೊ ಕೂಡಾ ಕುಸಿತ ದಾಖಲಿಸಿವೆ.
.GST ವ್ಯವಸ್ಥೆಯಲ್ಲಿ ಬದಲಾವಣೆ: ವಾಹನಗಳಿಗೆ ಕಡಿಮೆ ಮಟ್ಟದ ತೆರಿಗೆ?.GST Reforms: ಜಾರಿಗೆ ಸಹಕರಿಸಲು ರಾಜ್ಯಗಳಿಗೆ ಪ್ರಧಾನಿ ಮೋದಿ ಮನವಿ.GST | ತಗ್ಗಲಿದೆ ಗ್ರಾಹಕರ ಹೊರೆ: ಹೆಚ್ಚಿನ ಉತ್ಪನ್ನಗಳು ಶೇ 5,18ರ ಸ್ಲ್ಯಾಬ್ಗೆ.ಕರ್ನಾಟಕದಲ್ಲಿ GST ವಂಚನೆ 5 ಪಟ್ಟು ಹೆಚ್ಚಳ: ಲೋಕಸಭೆಗೆ ನಿರ್ಮಲಾ ಮಾಹಿತಿ.Gst Reforms: ಜಿಎಸ್ಟಿ ಸರಳೀಕರಣದಿಂದ ಅನುಕೂಲ; ಬೊಮ್ಮಾಯಿ.ಕರ್ನಾಟಕದಲ್ಲಿ ₹39577 ಕೋಟಿ ಜಿಎಸ್ಟಿ ವಂಚನೆ: ಸಚಿವೆ ನಿರ್ಮಲಾ ಸೀತಾರಾಮನ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.